ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ

12:58 PM, Friday, February 11th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು ತಾಲೂಕು ಪಂಚಾಯತ್ ಮಂಗಳೂರು : ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ ಯವರು ಆಯ್ಕೆಯಾಗಿರುತ್ತಾರೆ. ಇವರು ಕಲ್ಲಮುಂಡ್ಕೂರು ತಾಲೂಕು ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಪದವೀಧರರಾಗಿದ್ದಾರೆ. ತಾಲೂಕುಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಭವ್ಯಾ ಪೂಜಾರ್ತಿಯವರು 19 ಮತಗಳನ್ನು ಪಡೆದು, ಕಾಂಗ್ರೆಸ್ನ ಸುರೇಖಾ ಚಂದ್ರಹಾಸ್ ರವರನ್ನು 1 ಮತದ ಅಂತರದಿಂದ ಸೋಲಿಸಿದರು. ಸುರೇಖಾ ಚಂದ್ರಹಾಸ್ರವರು 18 ಮತಗಳನ್ನು ಪಡೆದಿದ್ದರು.
ಮಂಗಳೂರು ತಾಲೂಕು ಪಂಚಾಯತ್ ಹಾಗೆಯೇ ಮಂಗಳೂರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರು ಗಂಜಿಮಠ ತಾಲೂಕು ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುತ್ತಾರೆ. ಶ್ರೀಮತಿ ವಿಜಯಲಕ್ಷ್ಮಿಯವರು 19 ಮತಗಳನ್ನು ಜಯಿಸಿ, ಕಾಂಗ್ರೆಸ್ ನ ಮರಿಯಾ ಲವೀನ ವೇಗಸ್ ಅವರು ಪಡೆದ 18 ಮತಗಳೆದುರು 1 ಮತದ ಅಂತರದಿಂದ ಉಪಾಧ್ಯಕ್ಷೆಯಾಗಿದ್ದಾರೆ.
ಸಹಯಕ ಕಮೀಷನರ್ ಶ್ರೀ ಪ್ರಭುಲಿಂಗ ಕಾವಲಿಕಟ್ಟಿ ಹಾಗೂ ಚುನಾವಣಾ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ಯವರು ಚುನಾವಣೆಯನ್ನು ನಡೆಸಿಕೊಟ್ಟರು. ಅಭ್ಯರ್ಥಿಗಳ ಆಯ್ಕೆಯನ್ನು ಸದಸ್ಯರು ಕೈ ಎತ್ತುವ ಮೂಲಕ ಸಾಬೀತುಪಡಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English