ಸೃಷ್ಟಿ ವೈಶಿಷ್ಟ್ಯ : ಲಚ್ಚಿಲ್ ನಲ್ಲಿ ನಾಲ್ಕು ಕಾಲಿನ ಕೋಳಿ ಮರಿ ಜನನ

9:39 PM, Thursday, October 30th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Poultry breeding

ಬಂಟ್ವಾಳ: ನಾಲ್ಕು ಕಾಲಿನ ಕೋಳಿ ಮರಿಯೊಂದು ಜನಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬಂಟ್ವಳ ತಾಲೂಕಿನ ತುಂಬೆ ಗ್ರಾಮದ ಗಾಣದ ಲಚ್ಚಿಲ್ ಎಂಬಲ್ಲಿನ ಪದ್ಮಾವತಿ ಎಂಬವರ ಮನೆಯಲ್ಲಿ ಪ್ರಕೃತಿಯ ಈ ವೈಚಿತ್ರ ಮೂಡಿ ಬಂದಿದ್ದು ಸ್ಥಳೀಯವಾಗಿ ಜನರಲ್ಲಿ ಕುತೂಹಲ ಮೂಡಿಸಿದೆ.

ಇವರ ಮನೆಯ ಸಾಕು ಕೋಳಿಯೊಂದು ಮೊಟ್ಟೆ ಇಟ್ಟು 12 ಮರಿಗಳಿಗೆ ಎರಡು ದಿನಗಳ ಹಿಂದೆಯಷ್ಟೇ ಜನ್ಮ ನೀಡಿತ್ತು. ಈ ಪೈಕಿ ಒಂದು ಕೋಳಿ ಮರಿ ವಿಶೇಷವಾಗಿ ಕಮಡು ಬಂದಿದ್ದು ಸರಿಯಾಗಿ ಪರಿಶೀಲಸಿದಾಗ ನಾಲ್ಕು ಕಾಲುಗಳಿರುವುದು ಕಂಡು ಬಂದಿದೆ. ಹಿಂದಿನ ಗುದ ಭಾಗದಲ್ಲಿ ಎರಡು ಹೆಚ್ಚುವರಿ ಕಾಲುಗಳಿದ್ದು ಬಲ ಹೀನವಾಗಿದೆ. ಇತರ ಕೋಳಿ ಮರಿಗಳಂತೆ ಈ ಮರಿಯೂ ಆರೋಗ್ಯಕರವಾಗಿದ್ದು ಆಚೀಚೆ ಓಡಾಡುತ್ತದೆ. ಅದರೆ ಇದೀಗ ಕೋಳಿಗೆ ನಾಲ್ಕು ಕೋಳಿ ಮರಿಗೆ ನಾಲ್ಕು ಕಾಲು ಇದೆ ಎನ್ನುವ ಸುದ್ದಿ ತಿಳಿದು ಕುತೂಹಲಿಗರ ದಂಡು ಮನೆಗೆ ಭೇಟಿ ನೀಡುವ ದೃಶ್ಯ ಕಂಡು ಬಂದಿದೆ.

ಚಿತ್ರ ಕಿಶೋರ್ ಪೆರಾಜೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English