ಮಂಗಳೂರು : ನಗರದ ಹೊರವಲಯದದ ಅಡ್ಯಾರ್ ಚೆಕ್ ಪೋಸ್ಟ್ ಬಳಿ ಇರುವ ಸೆಲೂನ್ ಒಂದರಲ್ಲಿ ಯುವಕನೊಬ್ಬನನ್ನು ಕಾರಿನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಹಾಡು ಹಗಲೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ.
ಕೊಲೆಯಾದವನ್ನು ಅಡ್ಯಾರ್ ನಿವಾಸಿ ಇಸ್ಮಾಯಿಲ್ ಅವರ ಮಗ ಇಜಾಜ್ (24) ಎಂದು ಗುರುತಿಸಲಾಗಿದ್ದು, ಹಿಂದೆ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಈತನನ್ನು ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿದೆ.
2012ರಲ್ಲಿ ನಡೆದ ಪುತ್ತು ಮೋನು ವಿನ ಕೊಲೆ ಪ್ರಕರಣದ 19 ಆರೋಪಿಗಳಲ್ಲಿ ಇಜಾಜ್ ಕೂಡ ಓರ್ವನಾಗಿದ್ದು, ಇದೇ ಸೇಡಿನಲ್ಲಿ ಕೊಲೆಗೈಯಲಾಗಿದೆ ಎಂದು ಕೆಲ ಮೂಲಗಳು ಅಂದಾಜಿಸಿವೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಆರ್ ಹಿತೇಂದ್ರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English