ವಕಾಲತ್ತು ನಡೆಸದೇ ವಕೀಲರ ಕಲ್ಯಾಣ ನಿಧಿ ಸೌಲಭ್ಯದ ದುರುಪಯೋಗ

9:05 PM, Tuesday, December 2nd, 2014
Share
1 Star2 Stars3 Stars4 Stars5 Stars
(5 rating, 6 votes)
Loading...
law

ಮಂಗಳೂರು : ರಾಜ್ಯದಲ್ಲಿ ಪ್ರಸ್ತುತ 84,000 ಸಾವಿರ ವಕೀಲರುಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೊಂದಾವಣಿಯಾಗಿದ್ದು, ಈ ಪೈಕಿ ಸಾವಿರಾರು ವಕೀಲರುಗಳು ವಕಾಲತ್ತು ನಡೆಸದೇ, ಬೇರೆ ಬೇರೆ ಸರಕಾರಿ/ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನಿರತರಾಗಿದ್ದಾರೆ. ವಕೀಲರ ಕಾಯ್ದೆ 1961 ರ ಕಲಂ 35 ರನ್ವಯ ಸನ್ನದ್ದನ್ನು ಅಮಾನತ್ತಿನಲ್ಲಿಡದೇ ಯಾವುದೇ ನೊಂದಾಯಿತ ವಕೀಲ ಬೇರೆ ಉದ್ಯೋಗದಲ್ಲಿ ನಿರತನಾಗಿರುವುದು ವೃತ್ತಿ ದುರ್ನಡತೆ ಯಾಗುತ್ತದೆ ಹಾಗೂ ಆ ಕಾರಣಕ್ಕೆ ಆ ವಕೀಲರ ನೊಂದಾವಣಿ / ಸನ್ನದ್ದನ್ನು ರದ್ದುಗೊಳಿಸಿ, ಆತನನ್ನು ವೃತ್ತಿಯಿಂದ ಅನರ್ಹಗೊಳಿಸಿ ವಜಾಗೊಳಿಸುವ ಅಧಿಕಾರ ಮತ್ತು ಕರ್ತವ್ಯ ರಾಜ್ಯ ವಕೀಲರ ಪರಿಷತ್ತಿಗೆ ಇರುತ್ತದೆ.

ಸಾವಿರಾರು ನೊಂದಾಯಿತ ವಕೀಲರು ವಕಾಲತ್ತನ್ನು ನಡೆಸದೇ ಬೇರೆ ಕಡೆ ಉದ್ಯೋಗದಲ್ಲಿ ಇದ್ದರೂ ಕೂಡಾ, ಆ ಅಂಶವನ್ನು ಬಚ್ಚಿಟ್ಟು ವಕೀಲರ ಪರಿಷತ್ತಿನಿಂದ ನೀಡುವ ವಕೀಲರ ಕಲ್ಯಾಣ ನಿಧಿಯ ಸೌಲಭ್ಯವನ್ನು / ಮೊತ್ತವನ್ನು ಪಡೆಯುತ್ತಿರುವುದು ವಕೀಲರ ಪರಿಷತ್ತಿನ ಗಮನಕ್ಕೆ ಬಂದಿರುತ್ತದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ವಕೀಲಿಕೆಯನ್ನು ನಡೆಸುವ ನ್ಯಾಯವಾದಿಗಳಿಗೆ ಭಾರೀ ಪ್ರಮಾಣದಲ್ಲಿ ಅನ್ಯಾಯವುಂಟಾಗಿದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೊಂದಾಯಿತವಾದ ಯಾವುದೇ ವಕೀಲ ಬೇರೆ ಯಾವುದೇ ಖಾಸಗಿ / ಸರಕಾರಿ ಉದ್ಯೋಗ / ಸ್ವಂತ ಉದ್ದಿಮೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಲ್ಲಿ ಅಂತಹ ವಕೀಲರು ಅವರ ಸನ್ನದ್ದನ್ನು ಅಮಾನತ್ತಿಲ್ಲಿಡಲು ರಾಜ್ಯ ವಕೀಲರ ಪರಿಷತ್ತಿಗೆ ತಕ್ಷಣವೇ ಅರ್ಜಿ ಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ವೃತ್ತಿ ದುರ್ನಡತೆ ಯೆಂದು ಪರಿಗಣಿಸಿ ಅಂತಹ ವಕೀಲರ ಸನ್ನದನ್ನು ರದ್ದುಗೊಳಿಸಿ, ವೃತ್ತಿಯಿಂದ ವಜಾಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ರಾಜ್ಯಾಧ್ಯಕ್ಷರ ಪ್ರಕಟಣೆ ತಿಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English