ಮಂಗಳೂರು :ಜಾದೂ ಮೂಲಕ ಮನೋರಂಜನೆಯೊಂದಿಗೆ ಬುದ್ಧಿಮಾಂದ್ಯತಾ ಜನಜಾಗೃತಿಯನ್ನು ಮಾಡುತ್ತಿರುವ ದ.ಕ ಜಿಲ್ಲೆಯ ಲಿಮ್ಕಾ ದಾಖಲೆಯ ಪುತ್ತೂರು ಸುರೇಶ ನಾಯಕ್ ಗೆ ಅವರು ಮಾಡಿರುವ ವೈಯಕ್ತಿಕ ಸಾಧನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಡಿಸೆಂಬರ್ 3ರಂದು ದೆಹಲಿಯ ವಿಘ್ಯಾನ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ರೋಲ್ ಮೋಡೆಲ್ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 1,00,000/- ನಗದನ್ನು ಒಳಗೊಂಡಿದೆ.
ಇವರು ಪುತ್ತೂರಿನ ಜಯಾ ಮತು ಜಗನ್ನಾಥ ನಾಯಕರ 3ನೇ ಮಗನಾಗಿರುತ್ತಾರೆ. ಉಡುಪಿಯ ಆಶಾ ನಿಲಯ ವಿಶೇಷ ಶಾಲೆಯ ಮತ್ತು ಪುತ್ತೂರಿನ ಮಾಯಿದೆ ದೆವುಸ್ ಶಾಲೆಯ ಹಳೆ ವಿದ್ಯಾರ್ಥಿ ಯಾಗಿರುತ್ತಾರೆ. ಇವರು 2013ನೇ ಸಾಲಿನ ವಿಶ್ವ ವಿಕಲಚೇತನ ದಿನದ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪುತ್ತೂರು ಸುರೇಶ ನಾಯಕರು ತಮ್ಮ ಸಹೋದರ ಉಮೇಶ ನಾಯಕರ ಮಗ ಪುಟಾಣಿ ಸಾತ್ವಿಕ್ರ ಜೊತೆಗೂಡಿ ಕರ್ನಾಟಕ ರಾಜ್ಯಾದ್ಯಂತ ಶಾಲೆಗಳಲ್ಲಿ,ವಿಶೇಷ ಶಾಲೆ, ವೃದ್ಧಾಶ್ರಮಗಳಲ್ಲಿ, ಸಭೆ ಸಮಾರಂಭಗಳಲ್ಲಿ 100 ಕ್ಕೂ ವಿೂರಿ ಉಚಿತ ಪ್ರದರ್ಶನ ನೀಡಿರುತ್ತಾರೆ . ಈ ಸಮಾಜ ಸೇವೆಯನ್ನು ಗುರುತಿಸಿ 2014ನೇ ಸಾಲಿನ ಮಕ್ಕಳ ದಿನಾಚರಣೆಯ ರಾಷ್ಟ್ರ ಪ್ರಶಸ್ತಿಯನ್ನು ಪುತ್ತೂರಿನ ಬೆಥನಿ ಶಾಲೆಯ ಯುಕೆಜಿ ವಿದ್ಯಾರ್ಥಿ ಪುಟಾಣಿ ಸಾತ್ವಿಕ್ ನಾಯಕಗೆ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ನೀಡಿ ಗೌರವಿಸಿರುತ್ತಾರೆ.
ಭಾರತದ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಜಾದೂ ಮೂಲಕ ಸ್ವಚ್ಚ್ ಭಾರತ ಅಭಿಯಾನವನ್ನು ನವಂಬರ್ 12 ರಿಂದ ಡಿಸೆಂಬರ 5 ವರೆಗೆ ನಡೆಸುತಿದ್ದು . ದೆಹಲಿ ಮತ್ತು ಹರ್ಯಾಣದ ಪ್ರಮುಖ ನಗರಗಳಲ್ಲಿ ಈಗಾಗಲೇ 30 ಪ್ರದರ್ಶನವನ್ನು ನೀಡಿರುತ್ತಾರೆ. ಶ್ರೀಮತಿ ಮಾನೇಕಾ ಗಾಂಧಿಯವರು ಈ ಅಭಿಯಾನಕ್ಕೆ ದೆಹಲಿಯಲ್ಲಿ ಚಾಲನೆ ನೀಡಿರುತ್ತಾರೆ. ಇವರು ದೆಹಲಿಯಲ್ಲಿ ಕೇಂದ್ರ ಕಾನೂನು ಮಂತ್ರಿ ಶ್ರೀ ಡಿ.ವಿ ಸದಾನಂದ ಗೌಡ,ಶ್ರೀಮತಿ ಮಾನೆಕಾ ಗಾಂಧಿ ಹಾಗೂ ಸವರ್ೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಗೋಪಾಲ ಗೌಡ, ಲಿಮ್ಕಾ ರೇಕಾಡ್ ಮತ್ತು ಇಂಡಿಯಾ ಬುಕ್ಸ್ ಆಫ್ ರೇಕಾರ್ಡ ಅವರ ಸಮ್ಮುಖದಲ್ಲಿ ಪ್ರದರ್ಶನ ನೀಡಿ ಅವರಿಂದ ಮೆಚ್ಚುಗೆ ಪಡೆದಿರುತ್ತಾರೆ.
ಈ ಮೂಲಕ ಸುರೇಶ ನಾಯಕರು ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ತಂದು ಕೊಟ್ಟಿರುತ್ತಾರೆ ಹಾಗೂ ಉತ್ತರ ಭಾರತದಲ್ಲಿ ಜಾದೂ ಮೂಲಕ ಬುದ್ಧಿಮಾಂದ್ಯತಾ ಜನಜಾಗೃತಿ ಮತ್ತು ಸ್ವಚ್ಚ್ ಭಾರತ ಅಭಿಯಾನವನ್ನು ಮಾಡಿ ಕನರ್ಾಟಕ ರಾಜ್ಯಕ್ಕೆ ಗೌರವವನ್ನು ತಂದಿರುತ್ತಾರೆ.
ಈ ಪ್ರಶಸ್ತಿಯು ಕಳೆದ 20 ವರ್ಷಗಳಿಂದ ಸುರೇಶ ನಾಯಕರು ವಿಕಲ ಚೇತನ ಮಕ್ಕಳ ಸಮಾನ ಅವಕಾಶಕ್ಕಾಗಿ ಮಾಡಿರುವ ಹೋರಾಟಕ್ಕೆ ಸಂದಿರುವ ಗೌರವವಾಗಿರುತ್ತದೆ. ವಿಕಲ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವಲ್ಲಿ ಇವರ ಈ ಸಾಧನೆಯು ಇತರರಿಗೂ ದಾರಿದೀಪವಾಗಲಿ ಹಾಗೂ ಇತರ ವಿಕಲ ಚೇತನ ಮಕ್ಕಳಿಗೆ ಆಶಾ ಕಿರಣವಾಗಲಿ ಎಂಬ ಆಶಯ.
Click this button or press Ctrl+G to toggle between Kannada and English