ಬರೋಡಾದಲ್ಲಿ ವಿಶ್ವ ತುಳುವೆರೆ ಪರ್ಬದ ಪೂರ್ವಭಾವೀ ಸಭೆ

6:59 PM, Thursday, December 4th, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Tulu Parba Baroda

ಬರೋಡಾ : ಅಖಿಲ ಭಾರತ ತುಳು ಒಕ್ಕೂಟದ ರಜತೋತ್ಸವ ಸ್ಮರಣಾರ್ಥ ಇದೇ ಡಿ. 12-14ರ ಮೂರು ದಿನಗಳಲ್ಲಿ ತುಳುನಾಡಿನ ಅಡ್ಯಾರ್ ನ ಸಹ್ಯಾದ್ರಿ ಕಾಲೇಜ್ ನ ಆವರಣದಲ್ಲಿ ನಡೆಯುವ ವಿಶ್ವ ತುಳುವರೆ ಪರ್ಬದ ಪೂರ್ವಭಾವೀ ಸಭೆಯನ್ನು ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಸಭಾಗೃಹದಲ್ಲಿ ಕಳೆದ ಬುಧವಾರ ಸಂಜೆ ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಅತಿಥಿಗಳಾಗಿ ಒಕ್ಕೂಟದ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ವಿಶ್ವ ತುಳುವರೆ ಪರ್ಬ ಮಹಾರಾಷ್ಟ್ರ ಸಮಿತಿಯ ಸಾಂಸ್ಕೃತಿಕ ಸಮಿತಿ ಸಂಘಟಕ ಕರ್ನೂರು ಮೋಹನ್ ರೈ, ಸಂಘಟಕ ಹಿರಿಯಡ್ಕ ಮೋಹನ್ದಾಸ್ ವೇದಿಕೆಯಲ್ಲಿ ಆಸೀನರಾಗಿದ್ದು, ಧರ್ಮಪಾಲ್ ಅವರು ತುಳುಪರ್ಬದ ಆಮಂತ್ರಣವನ್ನು ಸಂಘಕ್ಕೆ ನೀಡಿ ಸರ್ವರನ್ನೂ ಆಹ್ವಾನಿಸಿದರು.

ಇದು ತುಳುನಾಡಿನ ಸಮಗ್ರ ಜನತೆಯ ಹಬ್ಬವೂ, ಜಾತ್ರೆಯೂ ಆಗಿದ್ದು, ಈ ಸಮ್ಮೇಳನದಲ್ಲಿ ಸಹಭಾಗಿಗಳಾಗಿ ಪರ್ಬದ ಯಶಸ್ಸಿಗೆ ನಾಂದಿಯಾಡೋಣ ಮತ್ತು ತುಳು ಸಂಸ್ಕೃತಿಯ ಏಳಿಗೆಗಾಗಿ ಸಂಘಟಿತರಾಗೋಣ ಎಂದು ದೇವಾಡಿಗ ಕರೆಯಿತ್ತರು.

ತುಳುಭಾಷೆ, ಸಂಸ್ಕೃತಿಯ ಸರ್ವೋನ್ನತಿ ಪರಶುರಾಮನ ಸೃಷ್ಠಿಯ ತುಳುನಾಡಿನಲ್ಲಿ ಜನಿಸಿರುವ, ಅಲ್ಲೇ ನೆಲೆಯಾಗಿದ್ದು ತುಳು ಭಾಷೆಯನ್ನು ಮನೆಮಾತಾಗಿಸಿರುವ ಪ್ರತೀ ತುಳುವರ ಕರ್ತವ್ಯವಾಗಿದೆ. ಇಂದು ತಾವೆಲ್ಲಾ ನಮ್ಮಲ್ಲಿಗೆ ಆಗಮಿಸಿ ತುಳು ಪರ್ಬದ ಆಹ್ವಾನವನ್ನೀಡಲು ಬಂದಿರುವುದು ನಮ್ಮ ತವರೂರ ಸಹೋದರರು, ಮನೆಮಂದಿ ಬಂದಂತಹ ಸಂತೋಷವಾಗಿದೆ. ನಿಮ್ಮ ಉದ್ದೇಶವೇ ನಮ್ಮ ಯೋಚನೆ ಆಗಿದ್ದು ನಾವು ಪರ್ಬದಲ್ಲಿ ಪಾಲ್ಗೊಂಡು ತುಳುಮಾತೆಯ ಕೀರ್ತಿ ಪತಾಕೆಯನ್ನು ಜಗತ್ತಿಗೆ ಸಾರೋಣ ಎಂದು ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ.

ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ,ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಮತ್ತು ಎಸ್.ಕೆ ಹಳೆಯಂಗಡಿ ಮತ್ತಿತರ ಪದಾಧಿಕಾರಿಗಳು ತುಳುವೆರೆ ಪರ್ಬಕ್ಕೆ ಸಂಘದ ಪರವಾದ ದೇಣಿಗೆಯನ್ನು ಧರ್ಮಪಾಲ್ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿ ತಾವೂ ಬಹು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದರು. ಸಭೆಯ ಆದಿಯಲ್ಲಿ ಗಣ್ಯರು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಆರತಿಗೈದರು.

ಸಂಘದ ಪ್ರಮುಖರಾದ ಮಧನ್ ಕುಮಾರ್ ಗೌಡ, ಕೃಷ್ಣ ಎ.ಶೆಟ್ಟಿ, ವಿಶಾಲ್ ಶಾಂತಾ, ಕುಸುಮಾ ಜೆ.ಶೆಟ್ಟಿ, ಶೋಭಾ ಬೋಂಟ್ರಾ, ಪ್ರಮೀಳಾ ಎಸ್.ಶೆಟ್ಟಿ, ಕೆ.ಮಾಧವ ಶೆಟ್ಟಿ, ಬಾಲಕೃಷ್ಣ ಎ.ಶೆಟ್ಟಿ, ಶಕುಂತಳಾ ಕೆ.ಶೆಟ್ಟಿ, ಕುಶಲ ಐ.ಶೆಟ್ಟಿ, ಶರತ್ ಬಿ.ರೈ, ಚಂದ್ರಶೇಖರ ಸುವರ್ಣ ಮತ್ತಿತರ ಅನೇಕರು ಹಾಜರಿದ್ದು, ಜತೆ ಕಾರ್ಯದರ್ಶಿ ಬಾಲಕೃಷ್ಣ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಾಸು ಪಿ.ಪೂಜಾರಿ, ಮಹಾಬಲ ಶೆಟ್ಟಿ, ಇಂದುದಾಸ್ ವಿ.ಶೆಟ್ಟಿ ಮತ್ತು ಯಶವಂತ್ ಶೆಟ್ಟಿ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.ಕರ್ನೂರು ಮೋಹನ್ ರೈ ಪ್ರಸ್ತಾವಿಕ ನುಡಿಗಳನ್ನಾಡಿದರು. ಹಿರಿಯಡ್ಕ ಮೋಹನ್ದಾಸ್ ತುಳುಪರ್ಬದ ಕಾರ್ಯಕ್ರಮಗಳ ಸವಿಸ್ತಾರವಾದ ಮಾಹಿತಿಯನ್ನಿತ್ತರು. ಮಹಿಳಾ ವಿಭಾಗದ ಮುಖ್ಯಸ್ಥೆ ಶಾರದಾ ಶೆಟ್ಟಿ ಅಭಾರ ಮನ್ನಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English