ಮಂಗಳೂರು : ಶಿಕ್ಷಣ ಸಂಸ್ಥೆಗಳು ದೇವಾಲಯಗಳಿದ್ದಂತೆ ಎಂದು ಜನ ನಂಬಿದ್ದಾರೆ. ಅದಕ್ಕಾಗಿಯೇ ಅಲ್ಲಿ ಏನೇ ನಡೆದರೂ ಜನ ಮಾತನಾಡುತ್ತಿಲ್ಲ. ನಗರದ ರಥಬೀದಿಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಕೊಲೆನಡೆದು ಎರಡು ವರ್ಷಗಳಾದರೂ ಇನ್ನೂ ಅದರ ಸತ್ಯತೆ ನಿಗೂಡವಾಗಿಯೇ ಉಳಿದಿದೆ. ಆಕೆಯ ಆತ್ಮ ಕಾಲೇಜಿನ ಸುತ್ತ ಇನ್ನು ನನಗೆ ನ್ಯಾಯ ಸಿಕ್ಕಿಲ್ಲ ಎಂದು ಸದ್ದು ಮಾಡುತ್ತಿದೆಯಂತೆ. ಅಕೆಯ ಕೊಲೆಯಾದಂದಿನಿಂದ ಕಾಣೆಯಾದ ವಿದ್ಯಾರ್ಥಿ ಮಂಜೇಶ್ವರದ ಮದನ ಎಲ್ಲಿಹೋಗಿದ್ದಾನೆಂದು ಯಾರಿಗೂ ಗೊತ್ತಿಲ್ಲ.
ಈ ಕಾಲೇಜಿನ ಪ್ರಾಂಶುಪಾಲರಿಗೆ ಈ ವಿಷಯ ತಿಳಿದಿತ್ತು, ಕೊಲೆಯಾದ ಅಕ್ಷತಾ ಮತ್ತು ಕಾಣೆಯಾದ ಮದನ ಇಬ್ಬರೂ ಪರಸ್ಪರ ಲವ್ ಮಾಡುತ್ತಿದ್ದರು ಎಂಬ ಆಪಾದನೆಯನ್ನು ಅವರ ಮೇಲೆ ಹೇರಲಾಗಿತ್ತು. ಅವರು ಇಲ್ಲ ಎಂದರೂ ಅದನ್ನೇ ನಂಬಿಸಲಾಗುತ್ತಿತ್ತು. ಈ ವಿಷಯವನ್ನು ಕಾಲೇಜಿನ ಕೆಲವು ವಿದ್ಯಾರ್ಥಿಗಳಲ್ಲಿ ಹೇಳಿ ಪ್ರಚಾರ ಮಾಡಿಸಲಾಯಿತು. ಪ್ರಾಂಶುಪಾಲ ಮದನ ಮತ್ತು ಅಕ್ಷತಾಳನ್ನು ಬೆದರಿಸಿದ ವಿಷಯ ಇಡೀ ಕಾಲೇಜಿಗೆ ಗೊತ್ತಿದೆ.
ಅಕ್ಷತಾ ಕೊಲೆಯಾದ ಮಾರನೆಯ ದಿನ ಕೆಲ ವಿದ್ಯಾರ್ಥಿಗಳು ಮಂಜೇಶ್ವರದ ಮದನನ ಮನೆಗೆ ಹೋಗಿ ವಿಚಾರಿಸಿದ್ದರಂತೆ. ಅವನ ಮನೆಯವರು ಹೇಳುವ ಪ್ರಕಾರ ಮದನ ಲವ್ ಮಾಡುವ ಅಥವಾ ಹುಡುಗಿಯರ ಹಿಂದೆ ತಿರುಗುವವನಲ್ಲ ಆತನ ಸ್ವಭಾವ ನಮಗೆ ಗೊತ್ತಿದೆ. ಆವನನ್ನು ಹೆದರಿಸಿ ಕಾಲೇಜಿಗೆ ಹೋಗದಂತೆ ಮಾಡಿದ್ದಾರೆ ಎಂದು ಅವರು ದೂರಿದ್ದರು. ನಾಪತ್ತೆಯಾದ ಮಗನನ್ನು ನಾವೇ ಹುಡುಕಿ ಶಾಲೆಗೆ ಹೋಗಿದ್ದೆವು. ಶಾಲೆಯ ಪ್ರಾಂಶುಪಾಲ ಈ ವಿಷಯ ನಮಗೆ ಹೇಳಲೇ ಇಲ್ಲ ಎಂದು ಮನೆಯರು ಹೇಳಿದ್ದರು.
ರಾಜ್ಯದ ಮಟ್ಟಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬುದ್ಧಿವಂತರ ಜಿಲ್ಲೆಗಳು. ಇಲ್ಲಿ ಸುಶಿಕ್ಷಿತರು ಹೆಚ್ಚಿದ್ದಾರೆ. ಪರಿಹಾಸ್ಯದ ಸಂಗತಿ ಎಂದರೆ ಇಲ್ಲಿ ಉನ್ನತಮಟ್ಟದಲ್ಲಿ, ಬುದ್ಧಿವಂತರ ವಲಯದಲ್ಲಿ ಭ್ರಷ್ಟಾಚಾರ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 10 ಸಾವಿರ ಸಂಬಳಕ್ಕೂ ಲಾಯಕಿಲ್ಲದ ಜನಗಳು ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಲಕ್ಷದ ಮೇಲೆ ಸಂಬಳ ಎಣಿಸುತ್ತಿದ್ದಾರೆ ಮತ್ತು ಹೆಣ್ಣು ಮಕ್ಕಳಿಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆ.
ಮಂಗಳೂರಿನ ರಥಬೀದಿಯ ಸರಕಾರಿ ಕಾಲೇಜಿನ ಪ್ರಾಂಶುಪಾಲನಾಗಿರುವ ಅರ್.ಕೆ ಎಂಬ ವ್ಯಕ್ತಿ ಕಾಲೇಜಿನಲ್ಲೇ ನೆರೆಯ ಸರಕಾರಿ ಕಾಲೇಜೊಂದರ ಪ್ರಾಂಶುಪಾಲೆಯೊಂದಿಗೆ ಚಕ್ಕಂದ ಮಾಡುತ್ತಿರುವಾಗಲೇ ಸಿಕ್ಕಿಬಿದ್ದು ಊರು ತುಂಬಾ ಗುಲ್ಲಾಗಿದೆ. ಈಗ ಕಾಲೇಜು ಶಿಕ್ಷಣ ಇಲಾಖೆ ಆಕೆಯನ್ನು ಈಗ ದೂರದ ಊರಿಗೆ ವರ್ಗಾಯಿಸಿದೆ. ಅದರೂ ಸಮೀಪದ ಕಾವೂರಿನಲ್ಲಿ ನೆಲೆವೂರಲು ಸಿದ್ದತೆ ನಡೆಸುತ್ತದ್ದಾಳಂತೆ. ವಿಟ್ಲದಲ್ಲಿ ತನ್ನ ಪಾಡಿಗೆ ತಾನಿದ್ದ ಉದಯಶಂಕರ್ ಎಂಬವರ ಮೇಲೆ ಹಳೆ ದ್ವೇಶದಿಂದ ತನಗೆ ತಾತ್ಕಾಲಿಕವಾಗಿ ಬಂದಿದ್ದ ಹಂಗಾಮಿ ಜಂಟಿನಿರ್ದೇಶಕ ಅಧಿಕಾರ ಚಲಾಯಿಸಿ ಅವರು ಅಮಾನಾತಾಗುವಂತೆ ನೋಡಿಕೊಂಡು ಮೀಸೆ ಮೇಲೆ ಮಾಡಿ ಒಡಾಡಿದ ಅರ್.ಕೆ. ಎಂಬಾತ ಪ್ರೊಫೆಸರ್ ಅಲ್ಲದಿದ್ದರೂ ತಾನು ಪ್ರೊಫೆಸರ್ ಎಂದು ಹೇಳಿಕೊಂಡು ತಿರುಗುವ ವ್ಯಕ್ತಿ. ಈತ ಬರೇ ಅಸೋಸಿಯೇಟ್ ಪ್ರೊಫೆಸರ್ ಎಂದು ವಿಶ್ವವಿದ್ಯಾಲಯದ ದಾಖಲೆಗಳೇ ಹೇಳುತ್ತವೆ.
ಈಗ ಕಿಸ್ ಆಪ್ ಲವ್ ಜಮಾನ. ಅದನ್ನು ಬಿಜೆಪಿ ವಿರೋಧಿಸಿ ಚಳವಳಿ ಮಾಡಲು ಹೊರಟಿದೆ, ವಿಪರ್ಯಾಸ ಎಂದರೆ ಈ ಮಹಾವ್ಯಕ್ತಿಯನ್ನು ರಥಬೀದಿಗೆ ತಂದು ಕೂರಿಸಿದ್ದೇ ಬಿಜೆಪಿಯ ಜನ. ಇನ್ನು ಬಲ್ಮಠ ಕಾಲೇಜಿನಲ್ಲಿ ಸುರಸುಂದರಿ ಫೊಸು ಕೊಟ್ಟು ಮೆರೆದ ಹಂಗಾಮಿ ಪ್ರಾಂಶುಪಾಲ ಮತ್ತು ಅರ್.ಕೆ ಯ ಪ್ರೇಯಸಿ ಪದವಿ ತರಗತಿಯಲ್ಲಿ ವಿಜ್ಞಾನ ವಿಭಾಗ ಇಲ್ಲದಿದ್ದರೂ ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ಆಮ್ಲಗಳನ್ನು ಖರೀದಿಸಿ ದುಡ್ಡು ಹೊಡೆದಾಕೆ. ಈ ಬಗ್ಗೆ ನಡೆದ ತನಿಖೆ ಆಗ ಇದ್ದ ಜಂಟಿ ನಿರ್ದೆಶಕ ನಟರಾಜ ಎಂಬವನಿಂದಾಗಿ ಠುಸ್ ಆಯಿತು. ಯಾವುದೇ ಶಿಸ್ತು ಕ್ರಮ ಇಲ್ಲದೆ ಆ ಪ್ರಾಂಶುಪಾಲೆ ಬಚಾವಾದಳು.
2010 ರಲ್ಲಿ ಸರಕಾರ ತನ್ನ ಕಾಲೇಜುಗಳ ವಿಜ್ಞಾನ ವಿಭಾಗವನ್ನು ಅಭಿವೃದ್ದಿಪಡಿಸಲು ತಲಾ 30 ಲಕ್ಷ ಅನುದಾನ ನೀಡಿತ್ತು ಮಂಗಳೂರಿನ ಸರಕಾರಿ ಪ್ರಥಮದಜರ್ೆ ಮಹಿಳಾ ಕಾಲೇಜು ಬಲ್ಮಠದಲ್ಲಿ ವಿಜ್ಞಾನ ವಿಭಾಗವೇ ಇರಲಿಲ್ಲ. ವಾಸ್ತವವಾಗಿ ಆ ಹಣ ಮಂಗಳೂರಿನ ಸರಕಾರಿ ಪ್ರಥಮದರ್ಜೆ ಕಾಲೇಜು ರಥಬೀದಿಗೆ ದೊರೆಯಬೇಕಿತ್ತು. ಅದೂ ಹೇಗೋ ಈ ಕಾಲೇಜಿಗೆ ಬಂದು ಮುಟ್ಟಿತ್ತು. ತಕ್ಷಣ ವಿಜ್ಞಾನ ಪ್ರಯೋಗಾಲಯಗಳಿಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಅದರಲ್ಲಿಯೂ ರಾಸಾಯನಿಕಗಳನ್ನು ಖರೀದಿಸಿ ಸರಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಮಾಡಲಾಗಿದೆ. ಅಲ್ಲದೆ ರಸಾಯನಿಕಗಳನ್ನು ಸಂಗ್ರಹಿಸಬೇಕಾದರೆ ಅದಕ್ಕೆ ಬೇಕಾದ ನಿಯಮಗಳನ್ನು ಪಾಲಿಸಬೇಕು. ಸರಕಾರದ ಆದೇಶದಲ್ಲಿರುವಂತೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ನಿಯಮಗಳನ್ನು ಪಾಲಿಸಲಿಲ್ಲ. ತನಿಖೆಗೆ ಬಂದವರಿಗೆ ಬೇಕಾದುದನ್ನು? ಪೂರೈಸುವ ತನ್ನ ಹಳೆ ಚಾಳಿಯಂತೆ ಈ ತನಿಖೆಯನ್ನೂ ಮುಚ್ಚಿ ಹಾಕಲಾಗಿದೆ.
ನಟೋರಿಯಸ್ ಕ್ರಿಮಿನಲ್ ಗಳಿವರು
ಬಡಪಾಯಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಲು ನಕಲಿ ಪತ್ರ ಬರೆಯುವುದು, ಇವರ ಬ್ರಷ್ಟಾಚಾರಗಳನ್ನು ಹೊರಗೆಳೆಯುವವರ ಮೇಲೆ ಕ್ರಿಮಿನಲ್ ಕೇಸುಹಾಕುವುದು ಇವರು ಕಲಿತುಕೊಂಡ ಮಹಾನ್ ಬುದ್ದಿವಂತಿಕೆ. ಸ್ವತ: ಇವರೇ ಕ್ರಿಮಿನಲ್ಗಳಾಗಿದ್ದು ಮಾನ ಮರ್ಯಾದೆಯನ್ನು ಮೂರುಕಾಸಿಗೆ ಬಿಟ್ಟವರು. ದುಡ್ಡು ಮಾಡುವುದಕ್ಕೇ ಈ ಭೂಮಂಡಲದಲ್ಲಿ ಹುಟ್ಟಿದ್ದೇನೆ ಎನ್ನುವ ಸಿದ್ದಾಂತ ಮುಂದಿಡುವ ಅರ್.ಕೆ. ಕಮಿಶನ್ ಇಲ್ಲದೆ ಯಾವ ವ್ಯವಹಾರವನ್ನು ಮಾಡುವುದಿಲ್ಲ. ಇವರಿಬ್ಬರೂ ಎಂತಹ ಆದರ್ಶ ವ್ಯಕ್ತಿಗಳೆಂದರೆ ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ದುಡ್ಡು ಹೊಡೆಯುವುದನ್ನು ನಿರಂತರ ಕಾಯಕ ಮಾಡಿಕೊಂಡವರು ಎಂದಿದ್ದಾರೆ ವಿದ್ಯಾರ್ಥಿಗಳ ಪಾಲಕರೊಬ್ಬರು. ಸುರಸುಂದರಿಯ ವಿರುದ್ಧ ಯಾರಾದರು ಮಾಹಿತಿ ಹಕ್ಕು ಅರ್ಜಿ ಹಾಕಿದರೆ ಮಾಜಿ ಶಾಸಕರು ಅರ್ಜಿದಾರರ ಪರ ಮಾತನಾಡುತ್ತಾರೆ. ನಿಮಗೇನೋ ತಪ್ಪು ಅಭಿಪ್ರಾಯ ಇರಬೇಕು ಎಂದು ಹೇಳತೊಡಗುತ್ತಾರೆ. ಅರ್ಜಿ ಹಾಕಿದ ಕೂಡಲೇ ಸುರಸುಂದರಿ ಕಾಲೇಜು ಅಭಿವೃದ್ಧಿ ಮಂಡಳಿಯಲ್ಲಿದ್ದವರನ್ನು ಸಂಪರ್ಕಿಸಿ ನೋಡಿ ಹೀಗಾಗಿದೆ ಎಂದು ಗೋಳಾಡುತ್ತಾಳೆ. ಅಲ್ಲಿಗೆ ಮಾಹಿತಿ ಹಕ್ಕು ಅರ್ಜಿ ಆಕೆಯ ಟೇಬಲ್ ನಿಂದ ಬೇರೆಯವರ ಕೈದಾಟಿ ಮಾಹಿತಿ ಅರ್ಜಿ ಹಾಕಿದವರ ಬೇಟೆ ಶುರುವಾಗುತ್ತದೆ.
ಸರಕಾರ 22 ಗಂಟೆಗಳ ಬೋಧನೆಯ ಅವಧಿಯನ್ನು ನಿಗದಿಮಾಡಿದಾಗ ಅದನ್ನು ವಿರೋಧಿಸಿ ಬೀದಿಗಿಳಿದ ಉಪನ್ಯಾಸಕರು ಇಂತಹ ಅಬ್ಬೇಪಾರಿಗಳ ಮರ್ಯಾದೆ ರಹಿತ ಕೆಲಸಗಳಿಂದ ತಮ್ಮ ಘನತೆಗೆ ಕುತ್ತು ಬರುತ್ತಿರುವುದನ್ನು ನೋಡಿಯೂ ಸುಮ್ಮನಿರುವುದೇಕೆ. ಅರ್.ಕೆ.ಯ ಕರ್ಮಕಾಂಡ ದುಡ್ಡು ಹೊಡೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಆತನ ವರ್ತನೆ ನೈತಿಕತೆಯನ್ನೇ ಅಪಹಾಸ್ಯ ಮಾಡುವಂತಿದೆ. ಈತನ ಪತ್ನಿ ಪಿಯುಸಿಯಲ್ಲಿ ನೇಮಕಾತಿ ಹೊಂದಿದ್ದರೂ ಪದವಿ ತರಗತಿಯ ಬೋಧಕರಿಗೆ ಲಭಿಸುವ ಯುಜಿಸಿ ವೇತನ ಪಡೆಯುತ್ತಿದ್ದಾಳೆ. ಕಾಲೇಜು ಶಿಕ್ಷಣ ಇಲಾಖೆ ಸಂಜೆ ನಾಲ್ಕುವರೆ ವರೆಗೆ ಕಾಲೇಜಿನಲ್ಲಿರಬೇಕು ಎಂಬ ನಿಯಮ ಮಾಡಿದೆ. ಆದರೆ ಈಕೆ ನಾಲ್ಕುವರೆ ಗಂಟೆಗೆ ತೊಕ್ಕೊಟ್ಟಿನಲ್ಲಿರುತ್ತಾಳೆ. ಹಾಗಿದ್ದರೆ ಕಾಲೇಜಿನಲ್ಲಿ ಪಾಠ ಪ್ರವಚನ ಮಾಡುವುದು, ಪ್ರಾಕ್ಟಿಕಲ್ ಮಾಡಿಸುವುದು ಯಾವಾಗ ಎಂಬುದನ್ನು ಈ ದಂಪತಿಗಳೇ ಹೇಳಬೇಕು. ಸಂಬಳಾ ಬೇಕು ಕೆಲಸ ಬೇಡ ಎಂಬುದು ಈತನ ಅಧಿಕೃತ ಪತ್ನಿಯ ಧೋರಣೆ. ಪದವಿ ವಿಭಾಗದಲ್ಲಿಲ್ಲದಿದ್ದರೂ ಈಕೆಗೆ 2001 ರಿಂದಲೇ ಕಾಲ್ಪನಿಕವಾಗಿ ಹಿರಿಯ ವೇತನ ಶ್ರೇಣಿ ಕೊಡಲಾಗಿದೆ. ಒಸಿ ಪೂರೈಸಿದ ಮರುದಿನ ಅಂದರೆ 2011ರ ನವೆಂಬರ್ 9 ರಂದು ಆರ್ಥಿಕ ಸೌಲಭ್ಯ ನೀಡಲಾಗಿದೆ. ಇದರಿಂದ ಪದವಿ ಪೂರ್ವ ತರಗತಿಯಲ್ಲಿ ಹಾಜರಾತಿ ಹೊಂದಿದ್ದರೂ ಲಕ್ಷದ ಹತ್ತಿರ ಸಂಬಳ ಪಡೆಯುವ ಭಾಗ್ಯವಂತೆ ಅವರಾಗಿದ್ದಾರೆ. ಇಂತಹ ಸೌಲಭ್ಯ ಇತರ ಉಪನ್ಯಾಸಕರಿಗೂ ಸಿಗಬಲ್ಲುದೆ? ಮಾತನಾಡಿದರೆ ನನಗೆ ತಿಂಗಳಿಗೆ ಲಕ್ಷದ ಮೇಲೆ ಸಂಬಳ ಬರುತ್ತದೆ, ನಾನ್ಯಾಕೆ ದುಡ್ಡು ಹೊಡೆಯಲಿ ಎಂದು ಬೂಸಿ ಬಿಡುವ ಅರ್.ಕೆ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಹೆಚ್ಚು ದುಡ್ಡು ನಿಗದಿ ಮಾಡಿದ್ದು ಯಾಕೆ, ಕೆಲ ಶುಲ್ಕಗಳನ್ನು ಲೋಬೋ ಜೋರು ಮಾಡಿದ ಬಳಿಕ ಇಳಿಸಿದ್ದು ಹೇಗೆ. ಹೊಡೆದ ದುಡ್ಡಿನಲ್ಲಿಯಾರು ಯಾರಿಗೆ ಪಾಲು ಕೊಡಬೇಕಾಯಿತು ಎನ್ನುವುದನ್ನು ಹೇಳಬಹುದಲ್ಲ.
ಸಂಪಾದಕರ ಮೇಲೆ ಖಾಸಗಿ ಕ್ರಿಮಿನಲ್ ಕೇಸು !
ರಾಧಕೃಷ್ಣ ಮತ್ತು ತಾರಾ ಮೆಗಾ ಮೀಡಿಯಾ ಪತ್ರಿಕೆಯ ಸಂಪಾದಕರ ಮೇಲೆ ಮಂಗಳೂರು ಮತ್ತು ಬೆಳ್ತಂಗಡಿ ನ್ಯಾಯಾಲಯಗಳಲ್ಲಿ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಪತ್ರಿಕೆಯ ಕಛೇರಿಗಳಿಗೆ ಈ ವ್ಯಕ್ತಿಗಳಿಂದ ಅನ್ಯಾಯಕ್ಕೊಳಗಾದವರು ಬಂದು ದೂರುಗಳ ಮೇಲೆ ದೂರುಗಳನ್ನು ನೀಡಿದ್ದರು. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸುದ್ದಿಗಳನ್ನು ಪ್ರಕಟಿಸಿದ್ದೇವೆಯೇ ಹೊರತು ರಾಧಕೃಷ್ಣ ಮತ್ತು ತಾರಾ ಎಷ್ಟೇ ಕೆಟ್ಟವರಾಗಿದ್ದರೂ ಸಂಪಾದಕರಿಗಾಗಲೀ, ಪತ್ರಿಕೆಯ ವರದಿಗಾರರಿಗಾಗಲೀ, ಸಿಬ್ಬಂದಿಗಳಿಗಾಗಿ ಯಾವುದೇ ದ್ವೇಷಗಳಿಲ್ಲ.
2013 ರಲ್ಲಿ ತಾರಾ ಮತ್ತು ರಾಧಕೃಷ್ಣ ಎಂಬ ಇಬ್ಬರು ಶಿಕ್ಷಕರ ನೀಚ ವೃತ್ತಿಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದಂತೆಯೇ ಮೇಲಿಂದ ಮೇಲೆ ದೂರವಾಣಿ ಕರೆಗಳು ಬರಲಾರಂಭಿಸಿದವು. ವಿದ್ಯಾರ್ಥಿಗಳು ಕಛೇರಿಗೆ ಬಂದು ಈ ಬಗ್ಗೆ ಚರ್ಚಿಸಲಾರಂಬಿಸಿದರು. ಇವರಿಬ್ಬರ ನಡುವೆ ನಡೆದ ಹಲವಾರು ಘಟನೆಗಳನ್ನು ದಾಖಲೆ ಸಮೇತ ತೋರಿಸಿದರು. ಅದನ್ನು ಕಂಡಾಗ ಶಿಕ್ಷಣ ಸಂಸ್ಥೆ, ಶಿಕ್ಷಕರು ಇಷ್ಟು ಕೀಳು ಮಟ್ಟಕ್ಕೂ ಬರುತ್ತಾರ ಎಂದನಿಸಿತು.
ಇವರ ಕೈಕೆಳಗೆ ಅದೆಷ್ಟೋ ಜನ ಅಮಾಯಕ ಸಹೋದ್ಯೋಗಿಗಳು ದೌರ್ಜನ್ಯ ಕ್ಕೊಳಗಾಗಿದ್ದಾರೆ. ಅವರ ಎಲ್ಲರ ಕಥೆಗಳನ್ನು ಹೇಳುತ್ತಾ ಹೋದರೆ ಒದುಗರಿಗೆ ಮತ್ತಷ್ಟು ಕುತೂಹಲ ಹಾಗು ಅಸಹ್ಯ ಆಗದಿರದು. ಅದನ್ನೆಲ್ಲವನ್ನು ಒಂದೊಂದಾಗಿ ಹೇಳಬೇಕಾದುದು ಪತ್ರಿಕಾಧರ್ಮ .
ಕೃಪೆ: ಮೆಗಾ ಮೀಡಿಯ ನ್ಯೂಸ್ ಕನ್ನಡ ಪತ್ರಿಕೆ ಯ ನವೆಂಬರ್ 15 ರ ಸಂಚಿಕೆಯಿಂದ
Click this button or press Ctrl+G to toggle between Kannada and English