ಮಂಗಳೂರು : ಮಾಜಿ ಪ್ರಧಾನಿ ಸನ್ಯಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 90ನೇ ಜನ್ಮದಿನ ಹಾಗೂ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತರತ್ನ ಪುರಸ್ಕಾರವನ್ನು ಕೇಂದ್ರ ಸರಕಾರ ನೀಡಿದ ಬಗ್ಗೆ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಂಭ್ರಮವನ್ನು ಗುರುವಾರ ಆಚರಿಸಲಾಯಿತು.
ಇದರ ಪ್ರಯುಕ್ತ ಪಕ್ಷದ 35 ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ರವರು ಅಟಲ್ ಬಿಹಾರಿ ವಾಜಪೇಯಿಯವರ ಜೀವನ, ಅವರ ತ್ಯಾಗ ಮತ್ತು ಆದರ್ಶದ ಬಗ್ಗೆ ವಿವರಿಸಿದರು. ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಉತ್ತಮ ನಡವಳಿಕೆಯೊಂದಿಗೆ ಕೇಂದ್ರ ಸರಕಾರವನ್ನು ನಡೆಸಿಕೊಂಡು ಬಂದ ರೀತಿಯನ್ನು ನೆನಪಿಸಿಕೊಂಡರು. ನಂತರ ಹಿರಿಯ ಕಾರ್ಯಕರ್ತರಿಂದ ಸದಸ್ಯತ್ವದ ನೋಂದಾವಣೆ ಮಾಡಲಾಯಿತು.
ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ನಾಗರಾಜ ಶೆಟ್ಟಿ, ಎನ್ ಯೋಗೀಶ್ ಭಟ್ ಹಾಗೂ ನಿತಿನ್ ಕುಮಾರ್, ಪುಷ್ಪಲತಾ ಗಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು ಮತ್ತು ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.
ಸತೀಶ್ ಪ್ರಭುರವರು ಹಿರಿಯ ಕಾರ್ಯಕರ್ತರು ಮಾಡಿದ ತ್ಯಾಗಗಳ ಬಗ್ಗೆ ವಿವರಿಸಿದರು.
ದೀಪಕ್ ಪೈಯವರು ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಸುಮನಾ ಶರಣ್ರವರು ಧನ್ಯವಾದಗೈದರು.
Click this button or press Ctrl+G to toggle between Kannada and English