ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಫೆ.26, 27 ರಂದು ಧರ್ಮನೇಮ

9:09 PM, Wednesday, February 25th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Tadyala

ಬಂಟ್ವಾಳ: ಸಾವಿರ ವರ್ಷಗಳ ಇತಿಹಾಸವಿರುವ ಅಮ್ಟಾಡಿ ಗ್ರಾಮದ ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಧರ್ಮನೇಮವು ಫೆ.26 ಹಾಗೂ 27 ರಂದು ನಡೆಯಲಿದೆ ಎಂದು ತಡ್ಯಾಲು ಗುತ್ತು ರಾಕೇಶ್ ಮಲ್ಲಿ ತಿಳಿಸಿದರು.

ಶನಿವಾರ ತಡ್ಯಾಲುಗುತ್ತು ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ. ಬ್ರಹ್ಮಶ್ರೀ ನರಸಿಂಹಮಯ್ಯ ತಂತ್ರಿಗಳ ನೇತೃತ್ವದಲ್ಲಿ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು,ಸಾಂಸ್ಕೃತಿಕ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ ಎಂದರು. ಫೆ.26 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ ನಡೆದು, ಬಳಿಕ ಬಡಾಜೆ ಗುತ್ತುವಿನಿಂದ ಭಂಡಾರವನ್ನು ವೈಭವದ ಮೆರವಣಿಗೆಯಲ್ಲಿ ತರಲಾಗುವುದು, ಅಪರಾಹ್ನ 12 ಕ್ಕೆ ಪಲ್ಲಪೂಜೆ ನಡೆದು ಅಪರಾಹ್ನದ 12.30 ರ ಬಳಿಕ ನಿರಂತರ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ತಾಳಮದ್ದಲೆ, ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ಭಕ್ತಿಗೀತೆ ರಸಮಂಜರಿ ನಡೆಯಲಿದೆ.

ಸಂಜೆ 7 ರಿಂದ ಮರ್ಲ್ ಮೈಸಂದಾಯ ಹಾಗೂ ಮರ್ಲ್ ಜುಮಾದಿ ದೈವಗಳಿಗೆ ಧರ್ಮ ನೇಮ ಹಾಗೂ ರಾತ್ರಿ 10 ಗಂಟೆಯಿಂದ ಅಣ್ಣಪ್ಪ ಪಂಜುರ್ಲಿಗೆ ಹಾಗೂ ಜುಮಾಧಿ ಬಂಟ ದೈವಗಳಿಗೆ ಧರ್ಮನೇಮ ನಡೆಯಲಿದೆ. 27 ರಂದು ಅಪರಾಹ್ನ ಅನ್ನಸಂತರ್ಪಣೆ ನಡೆದು, ರಾತ್ರಿ 7 ರಿಂದ ಪರಿವಾರ ದೈವಗಳಿಗೆ ಧರ್ಮ ನೇಮ ನಡೆಯಲಿದೆ ಎಂದವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಡ್ಯಾಲುಗುತ್ತು ಯಜಮಾನ ಕೆ.ಜಯರಾಮ ಆಳ್ವ, ಪ್ರಮುಖರಾದ ಚಂದ್ರಹಾಸ ಚೌಟ, ಬಿ.ಸದಾನಂದ ಮಲ್ಲಿ, ಸತೀಶ್ ಭಂಡಾರಿ, ಪುಷ್ಪರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ : ಎಸ್.ಎನ್.ಪಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English