ಮಂಗಳೂರು : ಶಿಕ್ಷಣದಲ್ಲಿ ಸಾಮಾಜಿಕ ಉಪಯೋಗಿ ಉತ್ಪಾದನಾ ಕಾರ‍್ಯ (ಕಾರ‍್ಯಾನುಭವ) ದ ಮಹತ್ವವನ್ನು ಅರಿತು ವಿದ್ಯಾರ್ಥಿಗಳನ್ನು ಅದರಲ್ಲಿ ತೊಡಗಿಸಬೇಕು. ತನ್ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಬೇಕು. ಚಿತ್ರಕಲೆ, ಬಣ್ಣದ ಕಾಗದಗಳಲ್ಲಿ ರಚನೆ, ಕಸದಿಂದ ರಸ ಇವುಗಳು ವಿದ್ಯಾರ್ಥಿಗಳ ಬಿಡುವಿನ ವೇಳೆಯ ಸದಪಯೋಗಕ್ಕೆ ಪೂರಕವಾಗಿ ಪರಿಣಮಿಸುತ್ತವೆ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸೇವಾ ಪೂರ್ವ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಸೆಸ್ ಜಯಶೇಖರ್ ನುಡಿದರು ಅವರು ಕಾಲೇಜಿನ ಸಂಭ್ರಮ ಕಾರ‍್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಡಯೆಟ್ ಪ್ರಾಂಶುಪಾಲರಾದ ಸಿಪ್ರಿಯನ್ ಮೊಂತೆರೋ ಕಾರ‍್ಯಕ್ರಮವನ್ನು ಹಾಗೂ ಕಲಿಕೋಪಕರಣಗಳ ಕಿಟ್‌ಗಳನ್ನು ಉದ್ಘಾಟಿಸಿ ಪರಿಸರದ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕಲಾ ಶಿಕ್ಷಕಿ ಶ್ರೀಮತಿ ಶ್ರೀಲತಾ ಉಪಸ್ಥಿತರಿದ್ದರು. ಉಪನ್ಯಾಸಕರಾದ ಅಶೋಕ ಕಾಮತ್ ಸುಮಾರು 11 ಸಾವಿರ ವರ್ಷಗಳ ಪೂರ್ವದಲ್ಲಿ ಮಧ್ಯಪ್ರದೇಶದಲ್ಲಿ ಭೀಮ್‌ಬೇಟ್‌ಕಾ ಎನ್ನುವ ಪ್ರದೇಶದಲ್ಲಿ ಆದಿಮಾನವನು ಗವಿಗಳಲ್ಲಿ ಬಿಡಿಸಿರುವ ಚಿತ್ರಗಳು, ಆ ಬಳಿಕ ಮೂಡಿಬಂದ ಮಧುಬನಿ, ವರಲಿ, ಕಚ್ಛಿ ಮುಂತಾದ ಚಿತ್ರಕಲಾ ಪರಂಪರೆಗಳ ಕುರಿತು ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ನಾಯಕ ಆನಂದ ಪೂಜಾರ ಕಾರ‍್ಯಕ್ರಮವನ್ನು ನಿರೂಪಿಸಿದರು.
Click this button or press Ctrl+G to toggle between Kannada and English