ವಿಟ್ಲ : ಬಾಡಿಗೆ ಮನೆಯಲ್ಲಿ ವಾಸವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ಬೋಳಂತೂರು ಗ್ರಾಮದ ಬಂಗಾರ ಕೋಡಿಯಲ್ಲಿ ಆರೋಪಿಗಳು ಈ ಕೃತ್ಯ ನಡೇಸಿದ್ದಾರೆ.
ಹೊರ ಜಿಲ್ಲೆ ನಿವಾಸಿ, ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕಿ ಗುರುವಾರ ರಾತ್ರಿ ಸ್ನಾನ ಮಾಡುತ್ತಿದ್ದಾಗ ವೆಂಟಿಲೇಟರ್ ಮೂಲಕ ಮೊಬೈಲ್‌ನಲ್ಲಿ ಬೋಳಂತೂರು ಗ್ರಾಮದ ಗೂಳಿ ಶಾಫಿ, ಅದ್ದು ಯಾನೆ ಅಬ್ದುಲ್ ನೌಶಾದ್(24) ಉನೈಸ್ ಮದಕ (25) ಚಿತ್ರೀಕರಣ ಮಾಡುತ್ತಿದ್ದರು. ಏನೋ ಶಬ್ದ ಕೇಳಿ ಬಂದಾಗ ಶಿಕ್ಷಕಿ ಎಚ್ಚೆತ್ತುಕೊಂಡು ಮನೆ ಕೆಲಸದಾಕೆಯಲ್ಲಿ ಹೊರಗೆ ಗಮನಿಸಲು ಹೇಳಿದ್ದರು.
ಆಕೆ ಹೊರಗೆ ಬಂದಾಗ ಆರೋಪಿಗಳು ಬಟ್ಟೆಯೊಂದನ್ನು ಆಕೆಯ ಮುಖಕ್ಕೆ ಎಸೆದು, ಮಾನಭಂಗಕ್ಕೆ ಯತ್ನಿಸಿದ್ದಾರೆ. ಆಕೆ ಚೀರಿದಾಗ ಮೂವರು ಒಂದೇ ಬೆ„ಕಿನಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ. ಆರೋಪಿಗಳ ಮೇಲೆ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಳಿದಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗೂಳಿ ಶಾಫಿ ಯಾನೆ ಮಹಮ್ಮದ್ ಶಾಫಿ (23) ಅವನನ್ನು ವಿಟ್ಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Click this button or press Ctrl+G to toggle between Kannada and English