18 ಸಾವಿರ ಹಿಡಿದುಕೊಂಡು ಬಂಟ್ವಾಳದಿಂದ ಬಾಲಕ ಪರಾರಿ

11:54 PM, Tuesday, March 10th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

Anil

ಬಂಟ್ವಾಳ: ಬಾಲಕನೋರ್ವ ನಗದು ಸಹಿತ ಕಾಣೆಯಾದ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಣೆಯಾದ ಬಾಲಕನನ್ನು 12 ವರ್ಷ ಪ್ರಾಯದ ಅನಿಲ್ ಎನ್ನಲಾಗಿದೆ.

ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ಸೋಮಪ್ಪ ಅವರ ಮಗ ಅನಿಲ್ ಎಂಬ ಹುಡುಗ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದ. ತಂದೆ ಮತ್ತು ತಾಯಿ ಕೆಲಸಕ್ಕೆ ಹೋದ ಸಂದರ್ಭ ಅನಿಲ್ ಮನೆಯ ಕಪಾಟಿನಲ್ಲಿ ಇಟ್ಟಿದ್ದ ರೂ 18 ಸಾವಿರ ಹಿಡಿದುಕೊಂಡು ಮನೆಯಿಂದ ಹೋದವನು ವಾಪಾಸು ಬರದೆ ಕಾಣೆಯಾಗಿದ್ದಾನೆ ಎಂದು ಬಾಲಕನ ತಂದೆ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆ ಮಾತನಾಡುವ ಈತ ಕಪ್ಪುಶರ್ಟು ನೀಲಿ ಚಡ್ಡಿ ಧರಿಸಿದ್ದ. ಕಪ್ಪು ಕೂದಲು ಗೋದಿ ಮೈ ಬಣ್ಣದ ಈತನ ಗುರುತು ಸಿಕ್ಕಿದವರು ನಗರ ಠಾಣೆಯ ಪೋಲಿಸ್ ಉಪನಿರೀಕ್ಷಕರಿಗೆ ದೂರವಾಣಿ ಸಂಖ್ಯೆ 08255232111 ಗೆ ತಿಳಿಸುವಂತೆ ಕೋರಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English