ಮಂಗಳೂರು ವಿಶ್ವವಿದ್ಯಾಲಯಕ್ಕೆ ಛಿಮಾರಿ ಹಾಕಿದ ಹೈಕೋರ್ಟ್

11:14 PM, Monday, March 16th, 2015
Share
1 Star2 Stars3 Stars4 Stars5 Stars
(4 rating, 5 votes)
Loading...
high Court

ಮಂಗಳೂರು : ಮಿಫ಼್ಟ್ (MIFT) ಕಾಲೇಜಿನ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ಕು. ದಿವ್ಯಶ್ರೀ ಎಸ್.ಎಲ್ ಗೆ ಮಂಗಳೂರು ವಿಶ್ವವಿದ್ಯಾಲಯವು ಪ್ರಥಮ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ಪರೀಕ್ಷಾ ಫ಼ಲಿತಾಂಶವನ್ನು ತಡೆಹಿಡಿದಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿರುತ್ತಾರೆ. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನರು ಮಂಗಳೂರು ವಿಶ್ವವಿದ್ಯಾಲಯವನ್ನು ತರಾಟೆ ತೆಗೆದುಕೊಂಡಿರುತ್ತಾರೆ.

ವಿದ್ಯಾರ್ಥಿನಿಯು ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ದ್ವೀತೀಯ ಪಿ.ಯು.ಸಿ ತತ್ಸಮಾನದಲ್ಲಿ ತೇರ್ಗಡೆಯಾಗಿದ್ದು. ಎಲ್ಲಾ ವಿಶ್ವವಿದ್ಯಾಲಯಗಳು ತತ್ಸಮಾನ (Equalent)ಪಿ.ಯು.ಸಿ.ಯಲ್ಲಿ ತೇರ್ಗಡೆಯಾದವರನ್ನು ವಿಶ್ವವಿದ್ಯಾಲಯದ ಯಾವುದೇ ಪದವಿಗೂ ಪ್ರವೇಶಕ್ಕೆ ಅರ್ಹತೆಯನ್ನು ಕೊಟ್ಟಿರುತ್ತಾರೆ. ಆದರೆ ಮಂಗಳೂರು ವಿಶ್ವವಿದ್ಯಾಲಯವು ಕು.ದಿವ್ಯಶ್ರೀ ಎಸ್.ಎಲ್ ಗೆ ಪ್ರಥಮ ಸೆಮಿಸ್ಟರ್ ಫ಼್ಯಾಶನ್ ಡಿಸೈನ್ ಪದವಿ ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿ, ಪರೀಕ್ಷೆಯನ್ನು ಬರೆಸಿ ನಂತರ ಪರೀಕ್ಷಾ ಫ಼ಲಿತಾಂಶವನ್ನು ಬಿಡುಗಡೆ ಮಾಡದೆ ಈ ವಿದ್ಯಾರ್ಥಿನಿಯ ಪ್ರವೇಶವನ್ನು ರದ್ದು ಮಾಡಿರುತ್ತಾರೆ. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯು ಮಂಗಳೂರು ವಿಶ್ವವಿದ್ಯಾಲಯದ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಹಾಕಿರುತ್ತಾರೆ.

ಮಾ.12 ರಂದು ವಿಚಾರಣೆ ನಡೆಸಿದ ಗೌರವನ್ವಿತ ನ್ಯಾಯಮೂರ್ತಿ ಬಿ.ವಿ.ನಾಗರತ್ನವರು ಮಂಗಳೂರು ವಿಶ್ವವಿದ್ಯಾಲಯವನ್ನು ತರಾಟೆಗೆ ತೆಗೆದುಕೊಂಡು ಎಲ್ಲರಿಗೂ ಪದವಿ ಶಿಕ್ಷಣ ಸಿಗಬೇಕೆಂಬುದು ಸರ್ಕಾರದ ಬಯಕೆ ಆದರೆ ವಿಶ್ವವಿದ್ಯಾಲಯ ಕು.ದಿವ್ಯಶ್ರೀ.ಎಸ್.ಎಲ್.ಗೆ ಈ ರೀತಿ ತೊಂದರೆಕೊಟ್ಟಿರುವುದು ಸರಿಯಲ್ಲ ಈ ಕೂಡಲೇ ಅವರ ಪರೀಕ್ಷಾ ಫ಼ಲಿತಾಂಶವನ್ನು ಬಿಡುಗಡೆ ಮಾಡಬೇಕು. ದ್ವೀತಿಯ ಸೆಮಿಸ್ಟರ್ ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡುವುದರ ಜೊತೆಗೆ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಆದೇಶ ಮಾಡಿರುತ್ತಾರೆ. ಇದರ ಜೊತೆಗೆ ಮಂಗಳೂರು ವಿವಿ ಕುಲಸಚಿವರು (ಪರೀಕ್ಷೆ), ಪ್ರಧಾನ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಕುಲಸಚಿವರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇವರಿಗೆ ನೋಟೀಸ್ ಜಾರಿ ಮಾಡಿರುತ್ತಾರೆ. ವಿದ್ಯಾರ್ಥಿನಿ ಪರವಾಗಿ ವಕೀಲರಾದ ರಾಜರಾಮ ಸೂರ್ಯಂಬೈಲು ವಾದವನ್ನು ಮಂಡಿಸಿರುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English