ಬಂಟ್ವಾಳ: ಉತ್ತಮ ಕೆಲಸ ಮಾಡುವ ಕೆಲಸಗಾರನಿಗೆ ಸಂಬಳ ನೀಡುವುದರ ಜೊತೆಗೆ ಆತ ಸಂಸ್ಥೆಗೊಸ್ಕರ ನೀಡಿದ ತ್ಯಾಗ ಮತ್ತು ನಿಶ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಕೇಂದ್ರದ ನಿರ್ದೇಶಕ ಪಿ.ಜಿ.ರಾಜಾರಾಂ ಭಟ್ ಹೇಳಿದ್ದಾರೆ.
ಅವರು ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಸಂಘಗಳ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗಳ ಒಕ್ಕೂಟದ ವತಿಯಿಂದ ವಿವಿದ ಸಹಕಾರಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸಿಬಂದಿಗಳನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಬಂಟವಾಳ ಶಾಖೆಯಲ್ಲಿ ಗೌರವಿಸಿ ಮಾತನ್ನು ಹೇಳಿದರು.
ಅವರ ಕರ್ತವ್ಯದ ಅವಧಿಯಲ್ಲಿ ಗುರುತಿಸಲಾಗದೆ ಇರುವ ಸಿಬ್ಬಂದಿಗಳಿಗೆ ಒಕ್ಕೂಟ ಇಂತಹ ಕಾರ‍್ಯಕ್ರಮದ ಮೂಲಕ ಗೌರವಿಸಿದಾಗ ಇತರರಿಗೆ ಹುರುಪು ನೀಡುತ್ತದೆ ಎಂದರು. ಬಂಟ್ವಾಳ ಭೂ ಅಭಿವೃದಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮತ್ತು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ರಾಜು ಮುಖ್ಯ ಅತಿಥಿಗಳಾಗಿದ್ದರು.
ನಿವೃತ್ತಿ ಹೊಂದಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಉಮೇಶ್ ಗೌಡ, ಮತ್ತು ಸಿದ್ದಕಟ್ಟೆ ಸಹಕಾರಿ ಬ್ಯಾಂಕಿನ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಶೀನ ಶೆಟ್ಟಿ, ಅಮ್ಟಾಡಿಯ ಬಾಸ್ಕರ್, ಕಾವಳಪಡೂರು ವಾಸು ಸಪಲ್ಯ, ಪರಂಗಿಪೇಟೆ ಮಾದವ, ಕಲ್ಲಡ್ಕ ಪ್ರಭಾಕರ ನಾಯಕ್ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕೇಂದ್ರ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಕೇಶವ ಕಿಣಿ ಮತ್ತು ಯೋಗೀಶ್ ಉಪಸ್ಥಿತರಿದ್ದರು. ಒಕ್ಕೂಟದ ಕಾರ‍್ಯದರ್ಶಿ ಚೆನ್ನಪ್ಪ ಗೌಡ ಸ್ವಾಗತಿಸಿ ಜೊತೆ ಕಾರ‍್ಯದರ್ಶಿ ಆಲ್ಬರ್ಟ ಡಿಸೋಜ ವಂದಿಸಿದರು.
Click this button or press Ctrl+G to toggle between Kannada and English