ಬಂಟ್ವಾಳ: ದ.ಕ.ಜಿಲ್ಲಾ ಪಂ. ಮಂಗಳೂರು, ತಾ.ಪಂ.ಬಂಟ್ವಾಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ‍್ಯಕ್ರಮ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಕಾರ‍್ಯಕ್ರಮವನ್ನು ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರದ ಯಾವುದೇ ಯೋಜನೆಗಳು ಕಾರ್ಯಗತಗೊಳ್ಳಲು ಸಾರ್ವಜನಿಕರ ಸಹಕಾರ ಅತೀ ಅಗತ್ಯ, ಅ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ‍್ಯಕ್ರಮ ಯಶಸ್ವಿಗೊಳ್ಳಲು ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಒಮ್ಮತದ ಕೆಲಸ ಆಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಜಿ.ಪಂ. ಸಹಾಯಕ ಅಭಿಯಂತರರಾದ ಗಿರೀಶ್, ಜಿ.ಪಂ.ನ ಅಧಿಕಾರಿ ಚಂದ್ರಾವತಿ, ತಾ.ಪಂ.ಸದಸ್ಯರಾದ ಪುಷ್ಪಲತಾ, ಮಹಮ್ಮದ್ ಶರೀಫ್ ಮತ್ತು ಕಾರ‍್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಉಪಸ್ಥಿತರಿದ್ದರು.
ತಾ.ಪಂ.ವ್ಯವಸ್ಥಾಪಕ ನಿರ್ದೇಶಕರಾದ ದಯಾವತಿ ಸ್ವಾಗತಿಸಿ ವ್ಯವಸ್ಥಾಪಕ ನಾಗೇಶ್ ವಂದಿಸಿದರು. ಮಂಜು ವಿಟ್ಲ ಕಾರ‍್ಯಕ್ರ ನಿರೂಪಿಸಿದರು.
Click this button or press Ctrl+G to toggle between Kannada and English