ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘ (ಎ.ಪಿ.ಐ.) ಅಧ್ಯಕ್ಷರಾಗಿ ಡಾ| ಎಚ್. ಪ್ರಭಾಕರ ಆಯ್ಕೆ

2:37 PM, Saturday, March 28th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
H Prabhakar

ಮಂಗಳೂರು: ನಗರದ ಖ್ಯಾತ ಹೃದ್ರೋಗ ಶಾಸ್ತ್ರತಜ್ಞ ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಎಚ್. ಪ್ರಭಾಕರ್ ರವರು ಪ್ರತಿಷ್ಟಿತ ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ದ.ಕ. ಜಿಲ್ಲಾ ಶಾಖೆಯ ೨೦೧೫-೧೬ನೇ ಸಾಲಿನ ಅಧ್ಯಕ್ಷರಾಗಿ ಇತ್ತೀಚೆಗೆ ಜರಗಿದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ೦೧.೦೪.೨೦೧೫ರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಡಾ| ರಾಘವ ಶರ್ಮ ಉಪಾಧ್ಯಕ್ಷರಾಗಿ, ಡಾ| ಸುನಿಲ್ ಕುಮಾರ್ ರವರು ಕಾರ್ಯದರ್ಶಿಯಾಗಿ ಹಾಗೂ ಡಾ| ಪ್ರಶಾಂತ್ ರವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂಘದ ದ.ಕ. ಶಾಖೆಯು ಸುಮಾರು ೧೫೦ ಸದಸ್ಯರನ್ನೊಳಗೊಂಡಿದೆ.

ಡಾ| ಎಚ್. ಪ್ರಭಾಕರರವರು ರಾಜ್ಯದ ಕರಾವಳಿ ಪ್ರದೇಶದ ಪ್ರಥಮ ಇಂಟರ್‌ವೆನ್ಶನಲ್ ಕಾರ್ಡಿಯಾಲಾಜಿಸ್ಟ್ ಎಂಬ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ವೈದ್ಯಕೀಯ ಕ್ಷೇತ್ರದ ಹೃದ್ರೋಗ ಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ ಗಮನಾರ್ಹ ಮತ್ತು ಅಮೂಲ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಆರ್ಯಭಟ ಪ್ರಶಸ್ತಿ, ರಾಷ್ಟ್ರ ಮಟ್ಟದ ಮುಂಬೈ ಕರ್ನಾಟಕ ಸಂಘದ ವೈದ್ಯಶ್ರೀ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರು ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಾಜಿ ಮತ್ತು ನ್ಯಾಷನಲ್ ಇಲೆಕ್ಟ್ರೋ ಕಾರ್ಡಿಯಾಗ್ರಫಿ ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English