ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕ:ವಿಸ್ತರಣೆಗೆ ಒತ್ತಡ : ಸಂಸದ ನಳಿನ್

8:00 PM, Monday, March 30th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Nalin Kumar Kateel

ಮಂಗಳೂರು : ಬಿಪಿಎಲ್ ಕುಟುಂಬಗಳಿಗೆ ಠೇವಣಿ ರಹಿತ ಗ್ಯಾಸ್ ಸಂಪರ್ಕ ನೀಡುವ ವ್ಯವಸ್ಥೆಯನ್ನು ಮುಂದುವರಿಸಲು ತೈಲ ಕಂಪೆನಿಗಳಿಗೆ ಸೂಚಿಸುವುದಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ಯೋಜನೆ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದ್ದು,ಈ ನಿಟ್ಟಿನಲ್ಲಿ ಎಪ್ರಿಲ್ 1 ರ ಬಳಿಕವೂ ವಿಸ್ತರಿಸಲು ಸಂಬಂಧಪಟ್ಟ ತೈಲ ಕಂಪೆನಿಗಳಿಗೆ ತಿಳಿಸುವುದಾಗಿ ಅವರು ಹೇಳಿದರು.ಎಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಧಮೇಂದ್ರ ಪ್ರಧಾನ್ ಮಂಗಳೂರಿಗೆ ಆಗಮಿಸಲಿದ್ದು,ಈ ಸಂಬಂಧ ಸಚಿವರಲ್ಲೂ ಈ ವಿಷಯ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.

ಆದರ್ಶ ಗ್ರಾಮ :- ಸಂಸದರ ಆದರ್ಶ ಗ್ರಾಮ ಯೋಜನೆಯು ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಇಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವಂತೆ ಸಂಸದರು ಸೂಚಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English