ಎ.2ರಿಂದ ಉಳ್ಳಾಲ ದರ್ಗಾದಲ್ಲಿ 20ನೇ ಉರೂಸ್‌ ನೇರ್ಚೆ

12:24 AM, Thursday, April 2nd, 2015
Share
1 Star2 Stars3 Stars4 Stars5 Stars
(5 rating, 4 votes)
Loading...
ullal Uroos

ಉಳ್ಳಾಲ: ಅಸಯ್ಯಿದ್‌ ಮುಹಮ್ಮದ್‌ ಶರೀಫ‌ುಲ್‌ ಮದನಿ (ಖ.ಸಿ.) ತಂಙಳ್‌ ಅವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್‌ ನೇರ್ಚೆ ಕಾರ್ಯಕ್ರಮ ಎ. 2ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್‌ ಉಲಮಾ ವೇದಿಕೆಯಲ್ಲಿ ಜರಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್‌. ಹಂಝ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎ. 2ರಂದು ಪೂರ್ವಾಹ್ನ 11 ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆ ಉಳ್ಳಾಲ ಖಾಝಿ ಅಸ್ಸಯ್ಯದ್‌ ಪಝಲ್‌ ಕೋಯಮ್ಮ ತಂಙಳ್‌ ಅಲ್‌ ಬುಖಾರಿ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯಲಿರುವ ದರ್ಗಾ ಝಿಯಾರತ್‌, ತಾಜುಲ್‌ ಉಲಮಾ ಅನುಸ್ಮರಣೆ, ತಹ್ಲಿಲ್‌ ಮತ್ತು ಖತಮುಲ್‌ ಕುರ್‌ಆನ್‌ ಸಮರ್ಪಣೆ ದಿಕ್‌ರ್ ಮಜ್ಲೀಸ್ ಕಾರ್ಯಕ್ರಮದಲ್ಲಿ ಸೆಯ್ಯಿದ್‌ ಆಟಕೋಯ ತಂಙಳ್‌ ದುವಾ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಏಳು ಗಂಟೆಗೆ ಉರೂಸ್‌ ಕಾರ್ಯಕ್ರಮದ ಉದ್ಘಾಟನೆ ಮತ್ತು ತಾಜುಲ್‌ ಉಲಮಾ ಪ್ರಶಸ್ತಿ ಪ್ರದಾನ ಉಳ್ಳಾಲ ಖಾಝಿ ಅಸ್ಸಯ್ಯದ್‌ ಪಝಲ್‌ ಕೋಯಮ್ಮ ತಂಙಳ್‌ ಅಲ್‌ ಬುಖಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಅಸಯ್ಯಿದ್‌ ಉಮರುಲ್‌ ಫಾರೂಕ್‌ ತಂಙಳ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಲ್ತಾನುಲ್‌ ಉಲಮಾ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಉಪದೇಶ ನೀಡಲಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎ. 3ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರು ಆಗಮಿಸಲಿದ್ದಾರೆ. ಎ. 4ರಂದು ಮಧ್ಯಾಹ್ನ ಎಲೈಟ್‌ ಮೀಟ್‌, ಸಂಜೆ 4ಕ್ಕೆ ನ್ಯಾಶನಲ್‌ ಸ್ಟೂಡೆಂಟ್‌ ಸಮ್ಮಿಟ್‌, ಎ. 5ರ ಮಧ್ಯಾಹ್ನ 2 ಗಂಟೆಗೆ ದ.ಕ. ಜಿಲ್ಲಾ ಜಮಾಅತ್‌ ಪ್ರತಿನಿಧಿ ಸಮಾವೇಶ ನಡೆಯಲಿದೆ. ಎ. 7ರಂದು ಅಪರಾಹ್ನ 2 ಗಂಟೆಗೆ ನಡೆಯಲಿರುವ ಸುನ್ನಿ ಇಜಿ¤ಮಾ ಕಾರ್ಯಕ್ರಮದಲ್ಲಿ ಗುಜರಾತ್‌ನ ಹಜ್‌ ಸಮಿತಿ ಚೇರ್‌ಮನ್‌ ಸೂಫಿ ಎಂ.ಕೆ. ಚಿಸ್ತಿ ವಿಚಾರ ಮಂಡಿಸಲಿದ್ದಾರೆ ಎಂದು ಯು.ಎಸ್‌. ಹಂಝ ವಿವರಿಸಿದರು.
ಸಾಧಕರಿಗೆ ಸಮ್ಮಾನ

ಎ. 8ರಂದು ಅಪರಾಹ್ನ 2 ಗಂಟೆಗೆ ಸಯ್ಯಿದ್‌ ಮದನಿ ನ್ಯಾಶನಲ್‌ ಪೀಸ್‌ ಕಾನ್ಫರೆನ್ಸ್‌ ಮತ್ತು ಸಾಧಕರಿಗೆ ಸಮ್ಮಾನ ನಡೆಯಲಿದ್ದು, ಅಬ್ದುಲ್‌ ರಶೀದ್‌ ಝೈನಿ ಸೇರಿದಂತೆ ವಿವಿಧ ಧರ್ಮಗಳ ನೇತಾರರು ಭಾಗವಹಿಸಲಿದ್ದಾರೆ. ಎ. 11ರಂದು ಬೆಳಗ್ಗೆ 8ಕ್ಕೆ ಅಂತಾರಾಜ್ಯ ಮಟ್ಟದ ಬುರ್ದಾ ಆಲಾಪನೆ ಸ್ಪರ್ಧೆ ನಡೆಯಲಿದೆ.
ಸನದುದಾನ ಮಹಾ ಸಮ್ಮೇಳನ

ಎ. 12ಕ್ಕೆ 2.30ಕ್ಕೆ ಸನದುದಾನ ಮಹಾ ಸಮ್ಮೇಳನವು ಉಳ್ಳಾಲ ಖಾಝಿ ಅಸ್ಸಯ್ಯದ್‌ ಫಝಲ್‌ ಕೋಯಮ್ಮ ತಂಙಳ್‌ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಸಯ್ಯಿದ್‌ ಇಸ್ಮಾಯಿಲ್‌ ಬುಖಾರಿ ತಂಙಳ್‌ ಕಿರಾಅತ್‌ ಪಠಿಸಲಿದ್ದು, ಕಾರ್ಯಕ್ರಮವನ್ನು ಅಸ್ಸಯ್ಯದ್‌ ಇಬ್ರಾಹಿಂ ಖಲೀಲ್‌ ತಂಙಳ್‌ ಅಲ್‌ ಬುಖಾರಿ ಕಡಲುಂಡಿ ಉದ್ಘಾಟಿಸುವರು. ಉಳ್ಳಾಲ ಅರೆಬಿಕ್‌ ಕಾಲೇಜಿನ ಪ್ರಾಂಶುಪಾಲ ಶೈಖುನಾ ತಾಯಕೋಡ್‌ ಅಬ್ದುಲ್ಲ ಮುಸ್ಲಿಯಾರ್‌ ಸನದುದಾನ ಭಾಷಣ ಮಾಡಲಿದ್ದು, ಮುಖ್ಯಭಾಷಣಕಾರರಾಗಿ ಕಾಂತಪುರಂ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಮತ್ತು ಪೇರೋಡ್‌ ಅಬ್ದುಲ್‌ ರಹ್ಮಾನ್‌ ಸಖಾಫಿ ಭಾಗವಹಿಸಲಿದ್ದಾರೆ.

ಎ. 14ರಂದು ಬೆಳಗ್ಗೆ 8ಕ್ಕೆ ಮದನಿ ಹಿಫ‌ುÉಲ್‌ ಕಾಲೇಜು ವಿದ್ಯಾರ್ಥಿಗಳಿಂದ ಮುಸಾಬಕತುಲ್‌ ಫ‌ುರ್ಖಾನಿಯ್ಯ, ಎ. 16ರಂದು ಅಪರಾಹ್ನ 2ಕ್ಕೆ ಮದನಿ ಸಂಗಮ, ಎ. 18ರ ಬೆಳಗ್ಗೆ 8ಕ್ಕೆ ಸೆಯ್ಯಿದ್‌ ಮದನಿ ದಅವಾ ಕಾಲೇಜು ವಿದ್ಯಾರ್ಥಿಗಳ ದಅವಾ ಫೆಸ್ಟ್‌, ಸಂಜೆ 4ಕ್ಕೆ ನ್ಯಾಶನಲ್‌ ದಅವಾ ಕಾನ್ಫರೆನ್ಸ್‌, ಎ. 20ರಂದು ಅಪರಾಹ್ನ 2ಕ್ಕೆ ಸಾದಾತ್‌ ಸಂಗಮ, ಎ. 22ರಂದು ಅಪರಾಹ್ನ 2ಕ್ಕೆ ಮುಅಲ್ಲಿಂ ಸಮಾವೇಶ ಮತ್ತು ಎಸ್‌.ಎಂ. ತಂಙಳ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಎ. 23ರಂದು ಸಂಜೆ 4.30ಕ್ಕೆ ಉಳ್ಳಾಲ ಖಾಝಿ ಅಸ್ಸಯ್ಯದ್‌ ಫಝಲ್‌ ಕೋಯಮ್ಮ ತಂಙಳ್‌ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭವನ್ನು ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಉದ್ಘಾಟಿಸುವರು. ಡಾ| ಹುಸೈನ್‌ ಸಖಾಫಿ ಚುಳ್ಳಿಕೋಡ್‌ ಮುಖ್ಯ ಭಾಷಣ ಮಾಡುವರು.

ಎ. 24ರ ಸಂಜೆ 4.30ಕ್ಕೆ ರಾಜಕೀಯ ಮತ್ತು ಸಾಮಾಜಿಕ ಸಮಾವೇಶ ದರ್ಗಾ ಅಧ್ಯಕ್ಷ ಯು.ಎಸ್‌. ಹಂಝ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ದರ್ಗಾದ ಡೊಕ್ಯುಮೆಂಟರಿ ಸಿ.ಡಿ.ಯನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಲಿದ್ದಾರೆ.

ಕೇಂದ್ರ ಕಾನೂನು ಸಚಿವ ಸದಾನಂದ ಗೌಡ, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ನಳಿನ್‌ ಕುಮಾರ್‌ ಕಟೀಲು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಕೆ.ಆರ್‌. ಜಾರ್ಜ್‌, ರಮಾನಾಥ ರೈ, ಯು.ಟಿ. ಖಾದರ್‌, ವಿನಯ ಕುಮಾರ್‌ ಸೊರಕೆ, ಆರ್‌.ವಿ. ದೇಶಪಾಂಡೆ, ಖಮರುಲ್‌ ಇಸ್ಲಾಂ, ರೋಶನ್‌ ಬೇಗ್‌, ಅಂಬರೀಷ್‌, ಅಭಯಚಂದ್ರ ಜೈನ್‌, ದಿನೇಶ್‌ ಗುಂಡುರಾವ್‌, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌, ವೀರಪ್ಪ ಮೊಲಿ, ಶಾಸಕರಾದ ಎಸ್‌. ಅಂಗಾರ, ವಸಂತ ಬಂಗೇರ, ಮೊದಿನ್‌ ಬಾವಾ, ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ ಅಧ್ಯಕ್ಷ ಡಾ| ಮೊಹಮ್ಮದ್‌ ಯೂಸುಫ್‌, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಿಇಒ ಎ.ಎಸ್‌. ಜೀಲಾನಿ, ಕರ್ನಾಟಕ ಹಜ್‌ ಕಮಿಟಿಯ ಚೇರ್‌ಮನ್‌ ಎಂ.ಎಂ. ಅಹ್ಮದ್‌, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಯೇನಪೊಯ ಸಮೂಹ ಸಂಸ್ಥೆಗಳ ಕುಲಪತಿ ವೈ. ಅಬ್ದುಲ್ಲ ಕುಂಞಿ, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ ಸದಸ್ಯ ಎನ್‌.ಕೆ.ಎಂ. ಶಾಫಿ ಸಅದಿ ಸೇರಿದಂತೆ ಧಾರ್ಮಿಕ ಸಾಮಾಜಿಕ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ಎ. 25ರಂದು ಸಂದಲ್‌ ಮೆರವಣಿಗೆ, ಬುರ್ದಾ ಮಜಿÉಸ್‌, ಎ. 26ರಂದು ಅನ್ನದಾನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್‌ ರೈಟ್‌ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ. ಇಲ್ಯಾಸ್‌, ಜತೆ ಕಾರ್ಯದರ್ಶಿ ಮಹಮ್ಮದ್‌ ಅಶ್ರಫ್‌, ಫಾರೂಕ್‌ ಮಾರ್ಗತ್ತಲೆ, ಮಹಮ್ಮದ್‌ ಹಾಜಿ ಹಾಗೂ ಆಡಿಟರ್‌ ಜೆ. ಅಬ್ದುಲ್‌ ಹಮೀದ್‌ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English