ದ.ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ

9:57 AM, Monday, September 6th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ದ.ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಟ್ಟದ ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ವತಿಯಿಂದ ಬಾನುವಾರ ಶಿಕ್ಷಕ ದಿನಾಚರಣೆಯನ್ನು ಜಿಲ್ಲಾ ಪಂಚಾಯತ್ ಮಂಗಳೂರು ಇಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಉದ್ಘಾಟಿಸಿದರು.
ವಿದ್ಯಾಥರ್ಿಗಳ ಮೇಲೆ ಸಮಾನ ಮನೋಭಾವ ಹೊಂದುವ ಮೂಲಕ ಶಿಕ್ಷಕರು ಸಮಾಜದಲ್ಲಿ ಶ್ರೇಷ್ಠತೆ ಪಡೆಯಬೇಕು ಎಂದು  ಉದ್ಘಾಟನೆ ನಡೆಸಿದ ಬಳಿಕ ಬಿ. ನಾಗರಾಜ ಶೆಟ್ಟಿ ಹೇಳಿದರು.


ಪ್ರಾಥಮಿಕ ವಿಭಾಗದ ಏಳು ಮಂದಿ ಶಿಕ್ಷಕಗೆ ಹಾಗೂ ಪ್ರೌಢ ಶಾಲಾ ವಿಭಾಗದ ಐದು ಮಂದಿ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2009-10 ನೇ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಆಚಾರ್ಯ ಮತ್ತು ಕುಮಾರ್ ಕೆ. ಅವರನ್ನು ಸಮ್ಮಾನಿಸಲಾಯಿತು. ಹಾಗೂ  ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತರಾದ ಶಿಕ್ಷಕರನ್ನು ಸಮ್ಮಾನಿಸಲಾಯಿತು.


ಶಾಸಕ ಎನ್. ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು, ಶಾಸಕ ಯು.ಟಿ ಖಾದರ್, ಕಸಾಪ ಮಾಜಿ ರಾಜ್ಯಾಧ್ಯಕ್ಷಕ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಸದ್ಯಸರಾದ ರಂಗನಾಥ ಕಿಣಿ, ಶಾಂತಾ ಆರ್ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ಶ್ರೀಧರ ಉಳ್ಳಾಲ್ ಮತ್ತು ರಾಮಕೃಷ್ಣ ಶಿರೂರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಉಮೇಶ್ ಕೆ. ಆರ್ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English