ಬಂಟ್ವಾಳ: ತಾಯಿ ಮತ್ತು ಮಗು ಮನೆಯಿಂದ ಬುಧವಾರ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್‌ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್ ಅವರ ಹೆಂಡತಿ ಆಯಿಷಾ (22) ಮತ್ತು ಒಂದುವರೆ ವರ್ಷದ ಹೆಣ್ಣು ಮಗು ಹೈಫಾ ಫಾತಿಮಾ ರಾತ್ರಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ಮುಂಜಾನೆ ಎದ್ದು ನೋಡುವಾಗ ತಾಯಿ ಮತ್ತು ಮಗು ಕಾಣೆಯಾಗಿದ್ದಾರೆ ಎಮದು ದೂರಿನಲ್ಲಿ ತಿಳಿಸಲಾಗಿದೆ ಇವರ ಸುಳಿವು ಸಿಕ್ಕಿದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹದಿಹರಯದ ಯವತಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮಾವತಿ ಎಂಬವರ ಮಗಳು ಪದ್ಮಾವತಿ 24 ಕಾಣೆಯಾದ ಯುವತಿ. ಬೀಡಿ ಕೆಲಸ ಮಾಡುತ್ತಿದ್ದ ಈಕೆ ಬಂಟ್ವಾಳ ಪೇಟೆಗೆ ಹೋಗಿ ಬರುತ್ತೇನೆಂದು ಹೋದವಳು ಮನಗೆ ವಾಪಸು ಬರದೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾಣೆಯಾದ ಯುವತಿ ಯವಕನೊಂದಿಗೆ ಪರಾರಿಯಾಗಿರಬೇಕು ಎಂಬ ಸಂಶಯ ಮನೆಮಂದಿಗಿದೆ. ಈಕೆಗೆ ಬ್ರಹ್ಮರಕೋಟ್ಲು ವಿನ ಯುವಕನೊಂದಿಗೆ ಪ್ರೇಮವಿದ್ದು ಆತನೊಂದಿಗೆ ಹೋಗಿರಬೇಕು ಎಂ ಸಂಶಯ ಮೂಡುತ್ತಿದೆ. ಈತ ಕೂಡಾ ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English