ಧರ್ಮಸ್ಥಳ: ಧರ್ಮಸ್ಥಳ ಶ್ರೀ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬದವರ ಮಾರ್ಗದರ್ಶನದಂತೆ, ಮಹಾವೀರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ತೀರ್ಥಂಕರರ ಮೂರ್ತಿಯ ಮೆರವಣಿಗೆ ನಂತರ ಅಷ್ಟದ್ರವ್ಯಗಳಿಂದ ಅಭಿಷೇಕ, ಅಷ್ಟವಿಧಾರ್ಚನೆ ಪೂಜೆ ನಡೆದವು. ಸ್ಥಳೀಯ ಮಕ್ಕಳಿಂದ ವಿವಿಧ ಕಾರ‍್ಯಕ್ರಮಗಳು ನಡೆದವು ಕುಮಾರಿ ಲಾವಣ್ಯ, ವಜ್ರಶ್ರೀ, ಸಂಚಿತ ಹಾಡಿದ ಮಹಾವೀರ ಅಷ್ಟಕಕ್ಕೆ ಮಾ. ದರ್ಶನ್ ಹಾಗೂ ಕು. ಪ್ರಾಪ್ತಿ ಕನ್ನಡ ಅರ್ಥಾನುವಾದ ಹೇಳಿದರು, ಕುಮಾರಿ ಸೌಖ್ಯಳಿಂದ ಮಹಾವೀರರ ಬಾಲ್ಯ ಹಾಗೂ ಜೀವನ ಪರಿಚಯ ನೀಡಿದರು. ಮಹಾವೀರರ ಜೀವನಕ್ಕೆ ಸಂಬಂಧಿಸಿದ ಪ್ರಶ್ನಾವಳಿಯನ್ನು ನಡೆಸಲು ಶ್ರೀಮತಿ ಸಾವಿತ್ರಿಯವರು ಸಹಕರಿಸಿದರು. ಕುಮಾರಿ ಪೂರ್ಣಿಮಾ ನಿರೂಪಿಸಿದ ಕಾರ‍್ಯಕ್ರಮದಲ್ಲಿ ಕು. ಸ್ವಾತಿ ಸ್ವಾಗತಿಸಿ, ಕು. ಸಾನ್ನಿಧ್ಯ ವಂದಿಸಿದರು. ನಾಮಕರಣೋತ್ಸವವು ಜೋಗುಳಗಳೊಂದಿಗೆ ಸಂಪನ್ನಗೊಂಡಿತು.
Click this button or press Ctrl+G to toggle between Kannada and English