ಮಂಗಳೂರು : ನಾನು ಆಲ್ವಿನ್ ಲಸ್ರಾದೊ, ನನ್ನ ಮಗಳನ್ನು ನಾನು ನಿಮ್ಮೊಂದಿಗೆ ಮಲಗಿಸಲು ತಯಾರಿದ್ದೇನೆ. ನನ್ನ ಮಗಳಿಗೆ ಇನ್ನೂ ಭರ್ತಿ ೧೮ ತುಂಬಿಲ್ಲ. ನೀವು ಒಮ್ಮೆ ನೋಡಿದರೆ ಹುಚ್ಚು ಹಿಡಿದವರ ಹಾಗೆ ಆಗುತ್ತಿರಿ. ನನಗೆ ಹಣ ಬೇಕು. ಹೀಗೆ ಆಲ್ವಿನ್ ಲಸ್ರಾದೊ ತನ್ನ ಸುಂದರ ಮಗಳು ಸ್ಟೆಟ್ಲಾಳನ್ನು ಮಾರಲು ಮಂಗಳೂರಿನ ಶ್ರೀಮಂತ ಉದ್ಯಮಿಗಳ ಮುಂದೆ ಮಾರ್ಕೆಟಿಂಗ್ ಮಾಡಲು ಇಳಿಯುತ್ತಾರೆ. ಇದನ್ನು ಓದುತ್ತಿದ್ದಂತೆ ನಿಮಗೆ ಆಲ್ವಿನ್ ಮೇಲೆ ಅಸಹ್ಯ ಹುಟ್ಟಬಹುದು. ಹಿಡಿಶಾಪ ಹಾಕುವ ಮನಸ್ಸಾಗಬಹುದು. ಇಂತವರು ತಂದೆ ಆಗಲು ನಾಲಾಯಕ್ ಎಂದು ಅನಿಸಬಹುದು. ನಿಮ್ಮ ಮನಸ್ಸಿನಲ್ಲಿ ಈ ಭಾವನೆ ಬರಲಿ, ಆದರೆ ಸ್ಟೆಲ್ಲಾಳನ್ನು ಸೆಕ್ಸ್ಗೆ ಮಾರಿ ಕಾಸು ಮಾತ್ರ ನಮಗೆ ಇರಲಿ ಎಂದು ಒಂದು ಕುತಂತ್ರ ನಡೆಯುತ್ತಾ ಇರುತ್ತದೆ. ಅದಕ್ಕಾಗಿ ಒಂದು ಡ್ರಾಫ್ಟ್ ಸಿದ್ಧಪಡಿಸಲಾಗುತ್ತದೆ. ಅದನ್ನು ಸ್ವತ: ಆಲ್ವಿನ್ ಬರೆದಿರುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಒಬ್ಬ ತಂದೆಯೇ ತನ್ನ ಮಗಳನ್ನು ಬೇರೆಯವರ ಕಾಮತೃಷೆ ಇಳಿಸಲು ಬಳಸಲು ಮುಂದಾಗುತ್ತಾನೆ ಎಂದರೆ ಯಾವ ಶ್ರೀಮಂತ ಗಂಡಸಿಗೆ ತಾನೆ ಹೊಸ ರುಚಿ ನೋಡುವ ಆಸೆ ಉಂಟಾಗುವುದಿಲ್ಲ. ಅದಲ್ಲದೆ ಸ್ವತ: ಆಲ್ವಿನ್ ಸಹಿ ಕೂಡ ನಕಲು ಮಾಡಿ ಮಂಗಳೂರಿನ ಧಣಿಗಳ ಮುಂದೆ ಡೀಲ್ ಪತ್ರ ಇಡಲಾಗುತ್ತದೆ. ಕೆಲವರಿಗೆ ಹುಡುಗಿ ಫೊಟೋ ತೋರಿಸಿದರೆ, ಇನ್ನೂ ಕೆಲವರು ಸ್ಟೆಲ್ಲಾ ಕಾಲೇಜಿನಿಂದ ಹೊರಗೆ ಬರುವಾಗ ಕಾರಿನಲ್ಲಿ ದೂರದಲ್ಲಿ ಕೂತು ಕನ್ನಡಿಯ ಹಿಂದಿನಿಂದ ನೋಡಿ ಬಾಯಿಯಲ್ಲಿ ನೀರು ತಂದುಕೊಳ್ಳುತ್ತಾರೆ.
ಅಷ್ಟಕ್ಕೂ ಇದನ್ನೆಲ್ಲಾ ಮಾಡುತ್ತಿದ್ದವ ಬೇರೆ ಯಾರೂ ಅಲ್ಲ, ಇದೇ ಆಲ್ವಿನ್ನ ಹೆಂಡತಿ ಅಲಿವಳ ಸಹೋದರಿ ಸಿಂತಿಯಾಳ ಗಂಡ ಪೀಟರ್ ಮಸ್ಕರೇನಸ್. ಅನೇಕ ಜನ ಶ್ರೀಮಂತ ಮುಸ್ಲಿಂ ವರ್ತಕರನ್ನು ಭೇಟಿಯಾಗಿ ಅಡ್ವಾನ್ಸ್ ಪಡೆದುಕೊಂಡು ಬಿಟ್ಟ. ಮೊದಲು ನಮಗೆ ಬೇಕು ಎನ್ನುವ ಆಸೆಯಿಂದ ಅನೇಕರು ಪೀಟರ್ ಕೇಳಿದಷ್ಟು ಹಣ ನೀಡಿ, ಸ್ಟೆಲ್ಲಾಳನ್ನು ನಗ್ನವಾಗಿ ಸುಖಿಸುವುದನ್ನು ಮನಸ್ಸಿನಲ್ಲಿಯೇ ನೆನೆದು ಖುಷಿಪಡಲು ಶುರುಮಾಡಿದರು. ಪೀಟರ್ ಜಾಸ್ತಿ ಹಣ ಪಡೆದವರಲ್ಲಿ ಮೂವರು ಮಂಗಳೂರಿನ ದೊಡ್ಡ ಬಿಲ್ಡರ್ಗಳು. ಇವರಲ್ಲಿ ಇಬ್ಬರು ಭಟ್ಕಳ ಮೂಲದವರು. ಒಬ್ಬ ವ್ಯಕ್ತಿ ದೊಡ್ಡ ಆಸ್ಪತ್ರೆಯ ಮಾಲೀಕ. ಈತನ ಆಸ್ಪತ್ರೆ ಮಂಗಳೂರಿನ ಹೃದಯಭಾಗ ಹೈಲ್ಯಾಂಡ್ನಲ್ಲಿದೆ. ಇನ್ನೊಬ್ಬ ಘನಂದಾರಿ ಮನುಷ್ಯ ದೇರಳಕಟ್ಟೆಯ ಮೆಡಿಕಲ್ ಕಾಲೇಜಿನ ಮಾಲೀಕ. ಈ ರೀತಿಯಲ್ಲಿ ಕಡಿಮೆ ಎಂದರೂ ೧೦-೧೨ ಶ್ರೀಮಂತ ಮುಸ್ಲಿಮರೊಂದಿಗೆ ಪೀಟರ್ ಡೀಲ್ ಮಾಡಿದ್ದ. ಅನೇಕ ಸಲ ಸಂಜೆಯಾಗುತ್ತಿದ್ದಂತೆ ಸ್ಟೆಲ್ಲಾ ಕಲಿಯುತ್ತಿದ್ದ ಸಂತ ಆಗ್ನೆಸ್ ಕಾಲೇಜಿನ ಗೇಟಿನ ಒಂದಿಷ್ಟು ದೂರದಲ್ಲಿ ಕರಿಕನ್ನಡಿಯ ಒಳಗಿನಿಂದ ಅವಳ ರೇಟ್ ಫಿಕ್ಸ್ ಮಾಡಲು ಕಾಮಿ ಶ್ರೀಮಂತರು ಕಾಯುತ್ತಿದ್ದರು. ಸ್ಟೆಲ್ಲಾಳನ್ನು ನೋಡುತ್ತಿದ್ದರೆ ಪೀಟರ್ ಎಷ್ಟು ದುಡ್ಡು ಹೇಳಿದರೂ ಕೊಡಲು ಯುವ, ಮುದಿ ಮುಸ್ಲಿಮ್ ಶ್ರೀಮಂತ ಕುಳಗಳು ಪೀಟರ್ಗೆ ದಂಬಾಲು ಬೀಳುತ್ತಿದ್ದರು. ಅನೇಕ ಸಲ ಅತ್ತ ಸ್ಟೆಲ್ಲಾಳನ್ನು ನೋಡುತ್ತಿದ್ದಂತೆ ಇತ್ತ ಪೀಟರ್ ಹೇಳಿದ ಹಣವನ್ನು ನೀಡಲು ಒಪ್ಪಿದ ಪತ್ರಕ್ಕೆ ಅವರ ಸಹಿ ಬೀಳುತ್ತಿತ್ತು. ಕಾರಿನಲ್ಲಿಯೇ ಲಕ್ಷಗಳ ಲೆಕ್ಕದಲ್ಲಿ ಹಣ ಕೈ ಬದಲಾಗುತ್ತಿತ್ತು. ಹಾಗಿದ್ದಳು ಚೆಲ್ವಿ ಸ್ಟೆಲ್ಲಾ!
ಅಪ್ಪಟ ಯೌವನದಲ್ಲಿ ತಾಯಿ ಅಲಿವ ಇದ್ದ ಹಾಗೆ. ತಾಯಿಗಿಂತ ಒಂದು ಮುಷ್ಟಿ ಹೆಚ್ಚೆ ಎನ್ನುವಂತ ಸೌಂದರ್ಯ. ಹಾಲು ಹೆಚ್ಚಾಗಿ ಬಿಸಾಡುವುದು ಬೇಡಾ ಎಂದು ಬ್ರಹ್ಮ ಇವಳ ಮೇಲೆನೆ ಸುರಿದನೊ ಎನ್ನುವಷ್ಟು ಮೋಹಕ ಬಣ್ಣ, ಅವಳದು. ಪೀಟರ್ ಅಲಿವಾಳಿಂದ ದುಡಿದ ನಾಲ್ಕರಷ್ಟು ದುಡಿಯಲು ಸಂಕಲ್ಪಿಸಿಕೊಂಡಿದ್ದ. ಆದರೆ ತಾಯಿಗಾದ ಪರಿಸ್ಥಿತಿ ಮಗಳಿಗೆ ಬರದಂತೆ ಭಗವಂತ ನಿರ್ಧರಿಸಿ ಆಗಿತ್ತು. ಕದ್ರಿಯಲ್ಲಿರುವ ಶಿವಭಾಗ್ ಹೊಟೇಲಿನ ಓರ್ವ ವಸಂತ ಕಾಮತ್ ಎಂಬಾತನು ಬಲ್ಮಠ ಮೈದಾನದಲ್ಲಿ ಒಮ್ಮೆ ಆಲ್ವಿನ್ ಹಾಗೂ ಅಲಿವ ಅವರೊಂದಿಗೆ ಜಗಳ ಕೆರೆದು, ಕೋಪಾವೇಶದಿಂದ ಬೈಯುವಾಗ ಆಡಿದ ಒಂದೇ ಒಂದು ಮಾತು, ಈ ದಂಪತಿಗಳಿಗೆ ಬರಸಿಡಿಲಿನ ಆಘಾತವನ್ನು ನೀಡಿತು. ಯಾವುದೂ ತನ್ನ ಮೇಲೆ ನಿರಂತರ ನಡೆದಿತ್ತು, ಅದು ತನ್ನ ಮಗಳ ಮೇಲೆ ನಡೆಯಕೂಡದು ಎಂದು ಅಲಿವ ಎನು ನಿರ್ಧರಿಸಿದ್ದಳೊ ಅದೇ ನಡೆಯಲು ಪೀಟರ್ ಸಂಚು ಹೂಡಿದ್ದ. ವಸಂತ ಕಾಮತ್ ಬೈಯುವ ರಭಸದಲ್ಲಿ ಪೂರ್ತಿ ಕಥೆಯನ್ನು ಎನೂ ಹೇಳಿರಲಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಸೂಕ್ಷ್ಮತೆ ಇರುವವರಿಗೆ ಸ್ವಲ್ಪ ಹೇಳಿದರೂ ಸಾಕಾಗುತ್ತದೆ. ” ನಿನ್ನ ಮಗಳನ್ನು ಮುಸ್ಲಿಮರಿಗೆ ಮಾರಿರುವಿಯಲ್ಲಾ?”. ಅತ್ತ ಪೀಟರ್ ಮಾತ್ರ ಒಂದೇ ಕಲ್ಲಿಗೆ ಎರಡು ಹಣ್ಣುಗಳನ್ನು ಉದುರಿಸುವ ಸಂಚು ನಡೆಸಿದ್ದ. ಒಂದು ಸ್ಟೆಲ್ಲಾಳನ್ನು ಮಾರಿ ಅದರಿಂದ ಹೇರಳ ಹಣ ಸಂಪಾದಿಸುವುದು, ಮತ್ತೋಂದು ಇದರಲ್ಲಿ ತಾನು ಎಲ್ಲಿಯಾದರೂ ಈ ಪ್ಲಾನಿನಲ್ಲಿ ಸಿಕ್ಕಿ ಬಿದ್ದರೆ ಅದನ್ನು ಆಲ್ವಿನ್ ಅಂದರೆ ಸ್ಟೆಲ್ಲಾ ತಂದೆ ಮೇಲೆ ಹಾಕುವುದು. ಇದರಿಂದ ಪೊಲೀಸರ ಮತ್ತು ಸ್ಟೆಲ್ಲಾ ಇಬ್ಬರ ದೃಷ್ಟಿಯಲ್ಲೂ ಆಲ್ವಿನ್ ದೋಷಿ, ನೀಚ ಎಂದು ಸಾಬೀತಾಗುತ್ತದೆ. ಪೊಲೀಸರು ಆಲ್ವಿನ್ನನ್ನು ಬಂಧಿಸಿದರೆ ಅಲ್ಲಿಗೆ ಒಂದು ಸತ್ಯ ಹುದುಗಿ ಹೋಗುತ್ತದೆ. ಆದರೆ ಪೀಟರ್ ತನ್ನ ಸಂಚಿನಲ್ಲಿ ಸಫಲನಾಗುವ ಮೊದಲೇ ಆಲ್ವಿನ್ ಹಾಗೂ ಅಲಿವಾ ತಮ್ಮ ಏಕೈಕ ಮುದ್ದಿನ ಮಗಳನ್ನು ಯಾರ ಕಣ್ಣಿಗೂ ಬೀಳದೆ ಇರುವ ಅಜ್ಙಾತ ಜಾಗದಲ್ಲಿ ಇರಿಸುತ್ತಾರೆ. ಇದರಿಂದ ಕೋಪೋದ್ರೀಕ್ತನಾದ ಪೀಟರ್, ಸ್ಟೆಲ್ಲಾಳನ್ನು ಕೊಲ್ಲುವುದಕ್ಕೆ ಸಂಚು ಹೂಡುತ್ತಾನೆ. ಆದರೆ ಎಲ್ಲಿಯವರೆಗೆ ಅವಳ ತಂದೆ ಆಲ್ವಿನ್ ಲಸ್ರಾದೊ ಅವಳೊಂದಿಗೆ ಇರುತ್ತಾನೋ ಅಲ್ಲಿಯವರೆಗೆ ಸ್ಟೆಲ್ಲಾಳನ್ನು ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅತ್ತ ಸ್ಟೆಲ್ಲಾಳನ್ನು ನಮ್ಮ ತಾಳಕ್ಕೆ ಕುಣಿಸುವಂತೆ ಮಾಡಬೇಕಾದರೆ ಇತ್ತ ಆಲ್ವಿನ್ ಹಾಗೂ ಒಲಿವಳನ್ನು ಕೊಂದು ಮುಗಿಸಬೇಕು ಮತ್ತು ಹೊರಪ್ರಪಂಚಕ್ಕೆ ಅದು ಆತ್ಮಹತ್ಯೆ ತರಹ ಕಾಣಿಸಬೇಕು ಎಂದು ಪೀಟರ್ ಯೋಜನೆ ಹಾಕಲು ಶುರು ಮಾಡುತ್ತಾನೆ. ಆಲ್ವಿನ್ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ಹೊರಪ್ರಪಂಚ ನಂಬಬೇಕಾದರೆ ಏನು ಮಾಡಬೇಕು, ಅದಕ್ಕೆ ಪೀಟರ್ ಹಾಕಿಕೊಂಡ ಸ್ಕೆಚ್ ಅತ್ಯಂತ ಅಸಹ್ಯಕರವಾಗಿತ್ತು.
ನನ್ನ ತಮ್ಮನಾದ ಆಲ್ವಿನ್ ನನಗೆ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಾನೆ. ನನ್ನ ಮೇಲೆ ಬಲಾತ್ಕಾರವಾಗಿ ಅತ್ಯಾಚಾರವೆಸಗುತ್ತಾನೆ. ರಾತ್ರಿಯೀಡಿ ನನಗೆ ರತಿಕ್ರೀಡೆಗಾಗಿ ಸತಾಯಿಸುತ್ತಾನೆ. ಮಾನಸಿಕ ವೇದನೆ,ಹಿಂಸೆ ನೀಡುತ್ತಾನೆ. ಮರುದಿನ ನಾನು ನನ್ನ ಆಫೀಸಿನಲ್ಲಿ ಕುಳಿತು ನನ್ನಷ್ಟಕ್ಕೆ ಅಳುತ್ತೇನೆ. ಈತನ ಬಲಾತ್ಕಾರದ ರತಿಕ್ರೀಡೆಯಿಂದ ನಾನು ಹಲವು ಬಾರಿ ಗರ್ಭ ಧರಿಸಿ ನಂತರ ಗರ್ಭಪಾತ ಮಾಡಿಸಿರುತ್ತೇನೆ. ಈ ಬಗ್ಗೆ ನನ್ನಲ್ಲಿ ವೈದ್ಯರ ಸರ್ಟಿಫೀಕೇಟ್ ಮತ್ತು ದಾಖಲೆಗಳು ಕೂಡ ಇವೆ. ಹೀಗೆ ಎರಡೆರಡು ಪತ್ರಗಳನ್ನು ಬರೆಯಲಾಗುತ್ತದೆ. ಇದೇ ಅರ್ಥವುಳ್ಳ ಎರಡು ಪತ್ರಗಳನ್ನು ಇಬ್ಬರು ಮಹಿಳೆಯರು ಬರೆಯುತ್ತಾರೆ. ಅವರು ಬೇರೆ ಯಾರೂ ಅಲ್ಲ. ಸ್ವತ: ಈ ಅಲ್ವಿನ್ನ ಸಹೋದರಿಯರು. ತಮ್ಮ ಸಹೋದರ ಆಲ್ವಿನ್ ತನ್ನ ಮನೆಯಲ್ಲಿ ಆಶ್ರಯ ಕೊಟ್ಟಿದ್ದಾನೆ ಎನ್ನುವ ಕಾರಣಕ್ಕೆ ನಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಅವನ ಜೊತೆ ಇದ್ದ ಹಂಗಿಗೆ ನಾವು ಅವನ ಕಾಮದಾಟಕ್ಕೆ ಬಲಿ ಬೀಳುತ್ತಿದ್ದೆವು. ಹೀಗೆಂದು ಬರೆದ ಹೆಣ್ಣು ಮಕ್ಕಳ ಹೆಸರು ಡೊರತಿ ಹಾಗೂ ಮಾರ್ಗರೇಟ್. ಅವರು ಬರೆದದ್ದರಲ್ಲಿ ನಿಜ ಇತ್ತಾ? ನಿಜಕ್ಕೂ ಆಲ್ವಿನ್ ಅಷ್ಟರಮಟ್ಟಿಗೆ ಕಾಮ ಪಿಪಾಸುವಾ? ಆದರೆ ಈ ಪತ್ರಗಳನ್ನು ಬರೆಯಲು ಡೊರತಿ ಹಾಗೂ ಮಾರ್ಗರೇಟ್ಗೆ ಯಾವ ಮಟ್ಟದ ಒತ್ತಡ ಇತ್ತೆಂದರೆ ಬರೆಯದಿದ್ದರೆ ನೀವು ಬದುಕಿ ಉಳಿಯಲಾರಿರಿ. ಈ ಸಂದೇಶ ಪೀಟರ್ನಿಂದ ಹೋಗಿತ್ತು. ಮೊದಲು ಡೊರತಿ ಹಾಗೂ ಮಾರ್ಗರೇಟ್ ಬರೆಯಲು ಒಪ್ಪದೆ ಇದ್ದ ಕಾರಣಕ್ಕೆ ಅವರನ್ನು ಬಲವಂತವಾಗಿ ಕಾಮಕ್ರೀಡೆಗೆ ಒಳಪಡಿಸಲಾಗಿತ್ತು. ಅದರ ಫೋಟೊ ತೆಗೆದು ಬ್ಲಾಕ್ಮೇಲ್ ಮಾಡಲಾಗಿತ್ತು. ಇದರಿಂದ ಎಲ್ಲಾ ಹೆದರಿದ ಇಬ್ಬರು ಸಹೋದರಿಯರು ತಮ್ಮನ ವಿರುದ್ಧವೇ ಸತ್ಯಕ್ಕೆ ದೂರವಾದ ಪತ್ರ ಬರೆಯಲು ನಿರ್ಧರಿಸುತ್ತಾರೆ. ಪೀಟರ್ ಅದಕ್ಕೆ ತಕ್ಕ ಸಾಕ್ಷ್ಯ ಒಟ್ಟು ಮಾಡಲು ವೈದ್ಯರ ನಕಲಿ ಗರ್ಭಪಾತದ ಸರ್ಟಿಫೀಕೆಟ್ ತಂದು ಇಟ್ಟುಕೊಳ್ಳುತ್ತಾನೆ. ಆದರೆ ಇಷ್ಟರಲ್ಲೇ ಎಲ್ಲವೂ ಮುಗಿಯುವುದಿಲ್ಲ ಎಂದು ಪೀಟರ್ಗೆ ಗೊತ್ತಿತ್ತು. ಅದಕ್ಕಾಗಿ ಆತ ಇನ್ನೊಂದು ಸಂಚು ಹೂಡುತ್ತಾನೆ. ಸಮಾಜದಲ್ಲಿ ಗಣ್ಯರಾಗಿರುವ ಯಾರಾದರೂ ವ್ಯಕ್ತಿಯಿಂದ ಆಲ್ವಿನ್ ಲಸ್ರಾದೊ ಸರಿಯಿಲ್ಲ ಎಂದು ಸರ್ಟೀಫಿಕೇಟ್ ಕೊಡಿಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಅಂತಹ ವ್ಯಕ್ತಿಯನ್ನು ಹುಡುಕುತ್ತಾನೆ. ಕೊನೆಗೂ ಅಂತವರು ಸಿಗುತ್ತಾರೆ.
ಕೃಪೆ : ಮೆಗಾ ಮೀಡಿಯಾ ನ್ಯೂಸ್ ಪತ್ರಿಕೆ
Click this button or press Ctrl+G to toggle between Kannada and English