ಮೀನುಗಾರಿಕ ಇಲಾಖೆಯಲ್ಲಿ ಜೆ.ಆರ್ ಲೋಬೊ ಸಭೆ

11:21 PM, Friday, May 22nd, 2015
Share
1 Star2 Stars3 Stars4 Stars5 Stars
(No Ratings Yet)
Loading...

Fish Dakke

ಮಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಬಂದರ್ ಪ್ರದೇಶದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮತ್ತು ಮೀನುಗಾರರ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಆಲಿಸಿದರು.

ಮೀನುಗಾರರ ಮನವಿಗೆ ಸ್ಪಂದಿಸಿ ಬೋಟ್ ದಾಖಲೆಯ ಸಕ್ರಮಿಕರಣಕ್ಕೆ ಇರುವ ಕೊನೆಯ ದಿನಾಂಕವನ್ನು ಜೂನ್11 ತಾರೀಕುವರೆಗೆ ವಿಸ್ತರಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗ್ರೆ ಮತ್ತು ಬಂದರ್ ಪ್ರದೇಶದಲ್ಲಿ ಮೂರನೆ ಹಂತದಲ್ಲಿ ಪ್ರಾರಂಭವಾಗಿರುವ ಹುಳೆತ್ತುವ ಕಾಮಗಾರಿಯು ಇನ್ನು ಅಗಿಲ್ಲ ಎಂದು ಮೀನುಗಾರರ ಮುಖಂಡರು ಸಭೆಯಲ್ಲಿ ತಿಳಿಸಿದರು. ಬೋಳಾರದ ಬೊಕ್ಕಪಟ್ನದಲ್ಲಿ ಬರಲಿರುವ ಜೆಟ್ಟಿಯ ಕಾಮಗಾರಿಯ ಟೆಂಡರ್ ಬರುವ ತಿಂಗಳಲ್ಲಿ ಕರೆಯಲಾಗುವುದು ಎಂದು ಶಾಸಕರಿಗೆ ಆಧಿಕಾರಿಗಳು ತೀಳಿಸಿದರು. ಬಂದರ್ ಪ್ರದೇಶದಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದು, ಆಧಿಕಾರಿಗಳಿಗೆ ಇದರ ವೆಚ್ಚದ ರೀಪೂರ್ಟ್ ಮಾಡಿ ಕೊಡಲು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷ ಘಟಕ ಮತ್ತು ಸಾಮನ್ಯ ಯೋಜನೆಯಲ್ಲಿ ಐದು ಅರ್ಹ ಮೀನು ಗಾರರಿಗೆ ಬೇರೆ ಬೇರೆ ಸೌಲಭ್ಯಗಳನ್ನು ನಿಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English