ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್‌ನಿಂದ ತೆರೆದ ಮನೆ ಮಾಹಿತಿ ಕಾರ್ಯಕ್ರಮ

6:54 PM, Saturday, May 23rd, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Child line

ಮಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಕುಳಾಯಿ ಶ್ರೀ.ಗೋಪಾಲಕೃಷ್ಣ ಭಜನಾ ಮಂಡಳಿ(ರಿ),ವಿದ್ಯಾನಗರದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಕ್ಕಳಿಂದ ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಕ್ಕಳ ಮೇಲಿನ ಲೈಂಗಿಕ ದುರುಪಯೋಗ ಹಾಗೂ ಬಾಲ್ಯವಿವಾಹ ಕುರಿತು ಕನ್ನಡ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್ ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ ಸಂಪತ್ ಕಟ್ಟಿರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-1098 ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್‌ಲೈನ್ ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು.

ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಕ್ಕಳ ಹಕ್ಕುಗಳು, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತು ಸ್ವೀಕಾರ ಮಾಡುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕು.ರೂಪಾರವರು ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ.ಸುಮಾರವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ, ಅಂಗನವಾಡಿಯಿಂದ ಸಿಗುತ್ತಿರುವ ಸೌಲಭ್ಯಗಳು, ವೃದಾಪ್ಯ ವೇತನ, ವಿಧವಾ ವೇತನ ಹಾಗೂ ಇತರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸ್ಥಳಿಯ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ.ಗಣೇಶ್ ಹೊಸಬೆಟ್ಟು, ಕಾರ್ಯಕ್ರಮದಲ್ಲಿ ಹಾಜರಿದ್ದ ಸ್ಥಳಿಯರಿಂದ ಆ ವಾರ್ಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಆದಷ್ಟು ಬೇಗ ಅವುಗಳನ್ನು ನೀವಾರಿಸುವುದಾಗಿ ತಿಳಿಸುತ್ತ ಮಹಾನಗರ ಪಾಲಿಕೆಯಿಂದ ನಾಗರಿಕರಿಗೆ ಸಿಗುತ್ತಿರುವ ವಿವಧ ಸೌಲಭ್ಯಗಳ ಬಗ್ಗೆ ಮಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಬಗ್ಗೆ ಜಾಗೃತಿಯನ್ನು ನೀಡುವ ಸಾಕ್ಷ್ಯ ಚೀತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕುಳಾಯಿ ಶ್ರೀ.ಗೋಪಾಲಕೃಷ್ಣ ಭಜನಾ ಮಂಡಳಿ(ರಿ),ವಿದ್ಯಾನಗರ ಇದರ ಆಧ್ಯಕ್ಷರಾದ ಶ್ರೀ.ಉಮೇಶ್ ಕೊಟ್ಯಾನ್, ಮಹಿಳಾ ಮಂಡಲ ಅಧ್ಯಕ್ಷೆಯಾದ ಶ್ರೀಮತಿ ಶೀಲಾವತಿ ಚೌಟ, ಅಂನವಾಡಿ ಶಿಕ್ಷಕಿ ಶ್ರೀಮತಿ ಬೇಬಿ ಹಾಗೂ ಸ್ಥಳಿಯ ಸಮಾಜ ಸೇವಕರಾದ ಶ್ರೀ.ರೇಜೆಶ್ ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದರು.ಚೈಲ್ಡ್ ಲೈನ್ ತಂಡ ಸದಸ್ಯೆ ಕು.ಪವಿತ್ರ ಉಪಸ್ಥಿತರಿದ್ದರು. ಶ್ರೀಮತಿ ಆಶಾಲತಾ ಕುಂಪಲರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಅಸುಂತ ಡಿಸೋಜ ಸ್ವಾಗತಿಸಿ, ಶ್ರೀಮತಿ ಜಯಂತಿ ಕೋಕಳರವರು ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English