ನಿರ್ವಸಿತ ವಿದ್ಯಾರ್ಥಿಗಳಿಂದ ಉದ್ಯೋಗಕ್ಕಾಗಿ ಪ್ರತಿಭಟನೆ

6:53 PM, Tuesday, March 1st, 2011
Share
1 Star2 Stars3 Stars4 Stars5 Stars
(No Ratings Yet)
Loading...

ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ಮೂರುವರೆ ವರ್ಷಗಳಿಂದ ಕೆ.ಪಿ.ಟಿ.ಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಎಂ.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯಂತಹ ದೊಡ್ಡಸಂಸ್ಥೆಯಲ್ಲಿ ಉದ್ಯೋಗ ದೊರಕುವುದೆಂಬ ಆಸೆಯಿಂದ ನಮ್ಮ ವಿದ್ಯಾಭ್ಯಾಸ ಹಾಗೂ ಕೆಲವರು ಈ ಮೊದಲು ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ತರಬೇತಿಗೆ ಸೇರಿದ್ದು, ಈಗ ತರಬೇತಿಯು ಮುಗಿದಿರುತ್ತದೆ. ಆದರೆ ಈಗ ಎಂ.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯವರು ತನ್ನ ವ್ಯಾಪ್ತಿಯವರಿಗೆ ಮಾತ್ರ ಉದ್ಯೋಗ ನೀಡುತ್ತಿರುವುದು ವಿಷಾದನೀಯ. ಸರಕಾರದ ಆದೇಶದಲ್ಲಿರುವಂತೆ ಎಮ್.ಆರ್.ಪಿ.ಎಲ್/ಓ.ಎನ್.ಜಿ.ಸಿ ವಿಸ್ತರಣೆಗಾಗಿ ಎಮ್.ಎಸ್.ಇ.ಝಡ್ ಸ್ಥಾಪನೆಯಾಗಿರುವುದರಿಂದ ಉದ್ಯೋಗ ಕೊಡಲು ಕೂಡ ಎಮ್.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯವರೇ ಜವಾಬ್ದಾರಿಯಾಗಿರುತ್ತದೆ ಎಂದು ನಾರಾಯಣ ಮಾರ್ದನ ಹೇಳಿದರು.
ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ ಇತ್ತೀಚೆಗೆ ವಿದ್ಯಾರ್ಥಿಗಳನ್ನು ಉದ್ಯೋಗ ನೀಡದೆ ವಂಚಿಸಿದ ಬಗ್ಗೆ ಎಂ.ಎಸ್.ಇ.ಝಡ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದಾಗ ವಿದ್ಯಾರ್ಥಿಗಳಿಬ್ಬರು ಮನನೊಂದು ತಾರೀಕು 25-01-2011 ರಂದು ಆತ್ಮಹತ್ಯೆ ಯತ್ನ ನಡೆಸಿರುತ್ತಾರೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಮ್ಮ ಈ ಕೆಳಗಿನ ಬೇಡಿಕೆಗಳನ್ನು ಸಂಬಂಧ ಪಟ್ಟವರಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದು ಎಂದು ನಿರ್ವಸಿತ ವಿದ್ಯಾರ್ಥಿಗಳ ಪರವಾಗಿ ಆರ್.ಎನ್.ಶೆಟ್ಟಿ ಯವರು ಹೇಳಿದರು.
ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಅವರ ಜೊತೆ ವಿದ್ಯಾರ್ಥಿಗಳ ಪಾಲಕರು, ಗ್ರಾಮ ಪಂಚಾಯತು ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.
ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ

ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ ವಿದ್ಯಾರ್ಥಿಗಳಾದ ದಾಮೋದರ ಶೆಟ್ಟಿ, ಕಿರಣ್ ಕುಮಾರ್, ನಾರಾಯಣ ಮಾರ್ದನ, ರೂಪೇಶ್, ರೀತೇಶ್ ಜಿ.ಪ. ಸದಸ್ಯರು ಬಜಪೆ, ಜೋಕಿಂ ಡಿಕೋಸ್ತ ತಾ.ಪಂ. ಸದಸ್ಯರು,  ರಮೇಶ್, ಸಂದೇಶ್ ಶೆಟ್ಟಿ  ಸದಸ್ಯರು, ಬಾಳ ಗ್ರಾಮ ಪಂಚಾಯತ್, ಯೋಗೀಶ್ ಕೋಟ್ಯಾನ್ ಸದಸ್ಯರು, ಬಾಳ ಗ್ರಾಮ ಪಂಚಾಯತ್ ಇನ್ನಿತರರು ಉಪಸ್ಥಿತರಿದ್ದರು.
ನಿರ್ವಸಿತ ವಿದ್ಯಾರ್ಥಿಗಳ ಬೇಡಿಕೆಗಳು
ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ 1)ತರಬೇತಿ ಪಡೆದ ಎಲ್ಲಾ 183 ವಿದ್ಯಾರ್ಥಿಗಳಿಗೂ ಓ.ಎನ್.ಜಿ.ಸಿ. ಸಮೂಹ ಸಂಸ್ಥೆಗಳಾದ ಒ.ಎಮ್.ಪಿ.ಎಲ್. ಹಾಗೂ ಐ.ಎಸ್.ಪಿ.ಆರ್.ಎಲ್ ಗಳಲ್ಲಿ ಈ ಮೊದಲು ನೇಮಕಾತಿ ಮಾಡಿದ ಹಾಗೆ ಯಾವುದೇ ನಿರ್ಭಂಧವಿಲ್ಲದೇ ನೇಮಕಾತಿ ಮಾಡಲಾಗುವುದು.
2)ಕೆ.ಪಿ.ಟಿ.ಯಲ್ಲಿ ಈಗ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ತರಬೇತಿ ಮುಗಿಸಿದ ಕೂಡಲೇ ಎಮ್.ಆರ್.ಪಿ.ಎಲ್ /ಓ.ಎನ್.ಜಿ.ಸಿ.ಯಲ್ಲಿ ಉದೈಓಗ ನೀಡಲಾಗುವುದು ಎಂದು ಎಂದು ಲಿಖಿತವಾಗಿ ನೀಡುವುದು.
3)ಯಾವುದೇ ರೀತಿಯ ಗುತ್ತಿಗೆ ಆಧಾರದ ಅಥವಾ ಟ್ರಸ್ಟ್ ಮುಖಾಂತರದ ಉದ್ಯೋಗಕ್ಕೆ ವಿದ್ಯಾರ್ಥಿಗಳು ಒಪ್ಪವುದಿಲ್ಲ.
4) ಬೇರೆ ಬೇರೆ ಉದ್ಯೋಗದಲ್ಲಿದ್ದವರನ್ನು ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವವರನ್ನು ತರಬೇತಿಗೆ ಸೇರಿಸಿ, ನಮ್ಮಜೀವನವನ್ನೇ ಹಾಳುಮಾಡಿದ್ದಕ್ಕಾಗಿ ಉದ್ಯೋಗ ಕೊಡದಿದ್ದರೆ ಮೂವತ್ತು ಲಕ್ಷಕ್ಕೂ ಅಧಿಕ ಪರಿಹಾರ ನೀಡುವುದು.

ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English