ವೇಣೂರು : ಮಗಳ ಸಾವಿನಿಂದ ಮನನೊಂದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಹೊಸಮನೆ ರಾಮಣ್ಣ ಸಾಲ್ಯಾನ್ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಮರಣೋತ್ತರ ವರದಿ ಬರುವ ಮೊದಲೇ ಭಾಗ್ಯಶ್ರೀ ಸಾವು ಆತ್ಮಹತ್ಯೆಯಿಂದ ಎಂದು ಬರೆದು ಪ್ರಕರಣ ಮುಗಿಸಲು ರುಜು ಹಾಕಿದ ಹಿನ್ನೆಲೆಯಲ್ಲಿ ಮನನೊಂದು ರಾಮಣ್ಣ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ.
ರಾಮಣ್ಣ ಸಾಲ್ಯಾನ್ ಪತ್ನಿ ಶಶಿಕಲಾ ಅವರು ರವಿವಾರ ಸಂಜೆ ಕುಟುಂಬದ ದೆ„ವದ ಕಾರ್ಯ ಹಾಗೂ ಮಗಳ ಸಾವಿನ ಸದ್ಗತಿಗೋಸ್ಕರ 16 ಅಗೆಲು ಬಡಿಸುವ ಕಾರ್ಯಕ್ರಮಕ್ಕೆ ಅಳದಂಗಡಿ ಸಮೀಪದ ಕೆದ್ದುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ರಾಮಣ್ಣ ಸಾಲ್ಯಾನ್ ಅವರನ್ನು ಬರಲು ಒತ್ತಾಯಿಸಿದ್ದರೂ ಮನೆಯಲ್ಲೇ ಉಳಿಯುವುದಾಗಿ ತಿಳಿಸಿದ್ದರು. ಸೋಮವಾರ ಭವನ್ ಕಾಲೇಜು ಪ್ರಾರಂಭವಾದ ಕಾರಣ ನೇರವಾಗಿ ನಾರಾವಿಯಲ್ಲಿರುವ ಕಾಲೇಜಿಗೆ ತೆರಳಿದ್ದ. ಶಶಿಕಲಾ ಅವರು ಬೆಳಿಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಎ.6ರಂದು ಕಾಲೇಜು ವ್ಯಾಸಂಗ ಮಾಡುತ್ತಿದ್ದ ಮಗಳು ವಿದ್ಯಾರ್ಥಿನಿ ಭಾಗ್ಯಶ್ರೀ ಸಂಶಯಾಸ್ಪದವಾಗಿ ಮನೆಯೊಳಗೆ ಬೆಂಕಿಗಾಹುತಿಯಾಗಿದ್ದ ಕೊಠಡಿಯಲ್ಲೇ ರಾಮಣ್ಣ ಸಾಲ್ಯಾನ್ ಸೋಮವಾರ ಲುಂಗಿಯಿಂದ ಪಕ್ಕಾಸಿಗೆ ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮಗಳ ಸಾವಿನ ಸೂತಕದ ಕಹಿನೆನಪು ಮಾಸುವ ಮುನ್ನ ಬಾಗ್ಯಶ್ರೀ ಕುಟುಂಬ ಇನ್ನೊಂದು ಆಘಾತಕ್ಕೆ ಒಳಗಾಗಿದೆ. ಮಗಳ ಸಾವಿನ ನೋವಿನಿಂದ ಇನ್ನೂ ಚೇತರಿಸಿಕೊಳ್ಳದ ತಾಯಿ ಶಶಿಕಲಾ ಅವರು ಈ ಘಟನೆಯನ್ನು ಕಣ್ಣಾರೆ ಕಂಡು ಅಕ್ಷರಶಃ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
Click this button or press Ctrl+G to toggle between Kannada and English