ಮಂಗಳೂರು ತಾ: ಗ್ರಾ.ಪಂ. ಮತ ಎಣಿಕೆಗೆ ಸಿದ್ಧತೆ

9:17 PM, Wednesday, June 3rd, 2015
Share
1 Star2 Stars3 Stars4 Stars5 Stars
(5 rating, 4 votes)
Loading...

Gp election Counting

ಮಂಗಳೂರು : ಮಂಗಳೂರು ತಾಲೂಕಿನ 55 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಜೂನ್ 5ರಂದು ನಗರದ ಪಾದುವಾ ಹೈಸ್ಕೂಲ್, ನಂತೂರು ಇಲ್ಲಿ ನಡೆಯಲಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದೆ ಮಂಗಳೂರು ತಾಲೂಕು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.

ಬೆಳಿಗ್ಗೆ 8ಗಂಟೆಗೆ ಪ್ರಥಮ ಸುತ್ತಿನ ಮತ ಎಣಿಕೆಯಲ್ಲಿ 113 ಕ್ಷೇತ್ರಗಳು(838 ಅಭ್ಯರ್ಥಿಗಳು), 10ಗಂಟೆಗೆ 2ನೇ ಸುತ್ತಿನ ಮತ ಎಣಿಕೆಯಲ್ಲಿ 112 ಕ್ಷೇತ್ರಗಳು(781 ಅಭ್ಯರ್ಥಿಗಳು), 12ಗಂಟೆಗೆ 3ನೇ ಸುತ್ತಿನ ಮತ ಎಣಿಕೆಯಲ್ಲಿ 80 ಕ್ಷೇತ್ರಗಳು(568 ಅಭ್ಯರ್ಥಿಗಳು)ಹಾಗೂ 2ಗಂಟೆಗೆ 4ನೇ ಸುತ್ತಿನ ಮತ ಎಣಿಕೆಯಲ್ಲಿ 14ಕ್ಷೇತ್ರಗಳು(85 ಅಭ್ಯರ್ಥಿಗಳು) ಸೇರಿದಂತೆ ಒಟ್ಟು 319 ಕ್ಷೇತ್ರಗಳ ಎಣಿಕೆ ನಡೆಯಲಿದೆ.

ಸುರತ್ಕಲ್ ಹೋಬಳಿಯ 9 ಗ್ರಾ.ಪಂ.ಗಳ ಒಟ್ಟು 51 ಮತಗಟ್ಟೆಗಳ ಮತಗಳ ಎಣಿಕೆ 4 ಕೊಠಡಿಗಳ 17 ಮೇಜುಗಳಲ್ಲಿ ನಡೆಯಲಿದೆ. ಗುರುಪುರ ಹೋಬಳಿಯ 13 ಗ್ರಾ.ಪಂ.ಗಳ ಒಟ್ಟು 83 ಮತಗಟ್ಟೆಗಳ ಮತಗಳ ಎಣಿಕೆ 6 ಕೊಠಡಿಗಳ 26 ಮೇಜುಗಳಲ್ಲಿ ನಡೆಯಲಿದೆ. ಮಂಗಳೂರು ಬಿ ಹೋಬಳಿಯ 11 ಗ್ರಾ.ಪಂ.ಗಳ ಒಟ್ಟು 85 ಮತಗಟ್ಟೆಗಳ ಮತಗಳ ಎಣಿಕೆ4 ಕೊಠಡಿಗಳ 28 ಮೇಜುಗಳಲ್ಲಿ ನಡೆಯಲಿದೆ.

ಮೂಡಬಿದ್ರೆ ಹೋಬಳಿಯ 12 ಗ್ರಾ.ಪಂ.ಗಳ ಒಟ್ಟು 65 ಮತಗಟ್ಟೆಗಳ ಮತಗಳ ಎಣಿಕೆ 6 ಕೊಠಡಿಗಳ 24 ಮೇಜುಗಳಲ್ಲಿ ನಡೆಯಲಿದೆ. ಮುಲ್ಕಿ ಹೋಬಳಿಯ 10 ಗ್ರಾ.ಪಂ.ಗಳ ಒಟ್ಟು 51 ಮತಗಟ್ಟೆಗಳ ಮತಗಳ ಎಣಿಕೆ 5 ಕೊಠಡಿಗಳ 18 ಮೇಜುಗಳಲ್ಲಿ ನಡೆಯಲಿದೆ.

ಕೊಠಡಿ 1ರಲ್ಲಿ ನೆಲ್ಲಿಕಾರು, ಪಾಲಡ್ಕ, ಕಿನ್ನಿಗೋಳಿ, ಅತಿಕಾರಿಬೆಟ್ಟು, ಸೂರಿಂಜೆ, ಬಾಳ, ಚೇಳಾರು, ಬಡಗ ಎಡಪದವು, ಕಂದಾವರ, ಕೊಠಡಿ 2ರಲ್ಲಿ ದರೆಗುಡ್ಡೆ, ಪುತ್ತಿಗೆ,ಪಡುಪಣಂಬೂರು, ಹಳೆಯಂಗಡಿ,ಎಕ್ಕಾರು, ಪೆರ್ಮುದೆ, ಕುಪ್ಪೆಪದವು, ಅಡ್ಯಾರು, ಕೊಠಡಿ 3ರಲ್ಲಿ ಕಲ್ಲಮುಂಡ್ಕೂರು, ಹೊಸಬೆಟ್ಟು, ಕೆಮ್ರಾಲ್, ಮೆನ್ನಬೆಟ್ಟು, ಜೋಕಟ್ಟೆ, ಮಳವೂರು, ಮುತ್ತೂರು, ಪಡುಪೆರಾರು, ಮುಚ್ಚೂರು, ಕೊಠಡಿ 4ರಲ್ಲಿ ಪಡುಮಾರ್ನಾಡು, ಇರುವೈಲು, ಮಲ್ಲೂರು, ಗುರುಪುರ, ಬಳ್ಕುಂಜೆ, ಐಕಳ, ಬಜಪೆ, ಮೂಡುಶೆಡ್ಡೆ, ಕೊಠಡಿ 5ರಲ್ಲಿ ತೆಂಕಮಿಜಾರು, ನೀರಿಮಾರ್ಗ, ಎಡಪದವು, ಶಿರ್ತಾಡಿ, ಕಿಲ್ಪಾಡಿ, ಕೊಂಡೆಮೂಲ, ಕೊಠಡಿ 6ರಲ್ಲಿ ಬೆಳುವಾಯಿ, ವಾಲ್ಪಾಡಿ, ಗಂಜಿಮಠ, ಉಳಾಯಿಬೆಟ್ಟು ಗ್ರಾ.ಪಂ.ಗಳ ಮತ ಎಣಿಕೆ ನಡೆಯಲಿದೆ.

ಶಾಲೆಯ ಸಭಾಂಗಣದಲ್ಲಿ ಕಿನ್ಯಾ, ಅಂಬ್ಲಮೊಗರು, ಬೋಳಿಯಾರು, ಬೆಳ್ಮ, ಹರೇಕಳ, ಪಾವೂರು, ಮುನ್ನೂರು, ತಲಪಾಡಿ, ಸೆಲ್ಲರ್ ಕೊಠಡಿ 1ರಲ್ಲಿ ಕೋಣಾಜೆ, ಸೆಲ್ಲರ್ ಕೊಠಡಿ 2ರಲ್ಲಿ ಮಂಜನಾಡಿ ಮತ್ತು ಸೆಲ್ಲರ್ ಕೊಠಡಿ 3ರಲ್ಲಿ ಸೋಮೇಶ್ವರ ಗ್ರಾ.ಪಂ.ಗಳ ಮತ ಎಣಿಕೆ ನಡೆಯಲಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು 55 ಗ್ರಾ.ಪಂ.ಗಳ 319 ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, 2272 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಮಂಗಳೂರು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English