ಬಂಟ್ವಾಳ : ಕರ್ನಾಟಕ ರಾಜ್ಯ ಸರ್ವ ಜನಾಂಗದ ನೆಲೆವೀಡು, ಇಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ ಸರಿ. ಅಶಾಂತಿ, ಅನಾಚಾರ, ಅನೈತಿಕತೆ, ಭಯೋತ್ಪಾಧನಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಸ್ತುತ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಸರಕಾರ ಮಾಡುತ್ತಿದೆ. ಒಂದು ಕೋಮಿನ ಜನರ ಓಲೈಕೆಗಾಗಿ ವ್ಯಾಪ್ತಿ ಮೀರಿ ವರ್ತಿಸುತ್ತಿರುವುದು ಈ ರಾಜ್ಯಕ್ಕೆ ಶಾಪವಲ್ಲವೇ? ಅಪರಾಧಿಗೆ ಶಿಕ್ಷೆಯಾಗದೆ ಕಾನೂನಿಗೆ ತಿದ್ದುಪಡಿ ತಂದು ಆತನ ಪರ ಸರಕಾರ ನಿಂತರೆ ಮುಂದೆ ಏನಾಗಬಹುದು ಊಹಿಸಲು ಸಾಧ್ಯವೇ? 2009ರಲ್ಲು ಮೈಸೂರಿನ ಉದಯಗಿರಿ ಹಾಗೂ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಮುಗಲಭೆ ಉಂಟು ಮಾಡಿ ಕರ್ತವ್ಯನಿರತ ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಅಪಾರ ಆಸ್ತಿಪಾಸ್ತಿ ನಾಶ ನಷ್ಟ ಮಾಡಿದ 214 ಮಂದಿ ಮೇಲಿನ 40 ಕೇಸುಗಳನ್ನು ಲೀಲಾಜಾಲವಾಗಿ ಹಿಂಪಡೆದು ಸಾರ್ವಜನಿಕ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟ ತುಘಲಕ್ ಸರಕಾರ ಎಂದು ಅಶೋಕ್ ಶೆಟ್ಟಿ ಸರಪಾಡಿ ಹೇಳಿದ್ದಾರೆ.
ಈ ಸರಕಾರ ಈ ರಾಜ್ಯಕ್ಕೆ ಶಾಪವಲ್ಲವೇ? ಸಂವಿಧಾನದಲ್ಲಿ ಘನತೆವೆತ್ತ ಸ್ಥಾನವನ್ನಲಂಕರಿಸಿದ ತಾವು ಮಧ್ಯ ಪ್ರವೇಶಿಸಿ ಈ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಈ ಸರಕಾರವನ್ನು ಎಚ್ಚರಿಸಿ ಇಲ್ಲವೇ ವಜಾಗೊಳಿಸಿ ಈ ಮೇಲಿನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಹಿನ್ನಲೆ ಬಗ್ಗೆ ಸೂಕ್ಷ್ಮ ದೃಷ್ಟಿಯಿಂದ ಗಮನಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವಂತೆಯೂ ನಮ್ಮ ಆಗ್ರಹ ಅರುಣ್ ಕುಮಾರ್ ಶೆಟ್ಟಿ ವಿನಂತಿಸಿದರು.
ಈ ನಾಡಿನ ಮಣ್ಣಿನ ಮಕ್ಕಳಾದ ಅನ್ನದಾತರ ಮೇಲಿನ ಕೇಸನ್ನು ಹಿಂಪಡೆವ ಶಕ್ತಿ ಇಲ್ಲ. ಕೋಮುವಾದಿಗಳ ಕೇಸನ್ನು ಹಿಂಪಡೆದ ನಪುಂಸಕ ಸರಕಾರಕ್ಕೆ ಧಿಕ್ಕಾರವಿರಲಿ ಎಂದು ಅರುಣ್ ಕುಮಾರ್ ಹೇಳಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ನ ಪುತ್ತೂರು ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ, ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಸಾಲ್ಯಾನ್, ಭಜರಂಗದಳ ಪ್ರಮುಖರಾದ ಗುರುರಾಜ್ ಬಂಟ್ವಾಳ ಮತ್ತು ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English