ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದ ನೆಸ್ಲೆ ಕಂಪನಿ

9:20 PM, Friday, June 5th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Magi Ban

ಬೆಂಗಳೂರು : ಮ್ಯಾಗಿ ಬಗ್ಗೆ ವಿವಾದವೆದ್ದಿರುವ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದಿದೆ. ದುಡ್ಡು ಕೊಟ್ಟು ಖರೀದಿಸಿ ಬೆಯಿಸಿದ ಕೇವಲ ಎರಡು ನಿಮಿಷದಲ್ಲಿ ಆರೋಗ್ಯವನ್ನು ಹಾಳು ಮಾಡುತಿದ್ದ ಮ್ಯಾಗಿ ಈಗ ನಿಷೇಧದ ಭೀತಿ ಎದುರಿಸುತ್ತಿದೆ.

ಶುಕ್ರವಾರ ಮುಂಜಾನೆ ಈ ಕುರಿತು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ತಾತ್ಕಾಲಿಕವಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲಾಗುತ್ತಿದೆ. ಸದ್ಯಕ್ಕೆ ಕಂಪನಿ ಮ್ಯಾಗಿ ಮತ್ತು ಇದೇ ತರಹದ ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಗ್ರಾಹಕರ ನಂಬಿಕೆ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಮ್ಯಾಗಿ ಮಾರಾಟವನ್ನು ನಾವು ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿದ್ದೇವೆ’ ಎಂದು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

‘ಮ್ಯಾಗಿ ಬಗ್ಗೆ ಸದ್ಯಕ್ಕೆ ಎದ್ದಿರುವ ವಿವಾದಗಳಿಂದ ಕಂಪನಿಯ ಉತ್ಪನ್ನದ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. ಆದ್ದರಿಂದ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ’ ಎಂದು ನೆಸ್ಲೆ ಹೇಳಿದೆ. ಇದರಿಂದಾಗಿ ಹಲವು ದಿನಗಳಿಂದ ಉಂಟಾಗಿದ್ದ ಗೊಂದಲ ಬಗೆಹರಿದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English