ಗೋಪಾಲ್ ಬಂದ್ಯೋಡ್ ಸಮಾಜದ ಸೊತ್ತು-ಕೊಂಡೆವೂರು ಶ್ರೀಗಳು

11:03 PM, Monday, June 8th, 2015
Share
1 Star2 Stars3 Stars4 Stars5 Stars
(4 rating, 5 votes)
Loading...
kondevooru

ಉಪ್ಪಳ : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀಮತಿ ಲಲಿತ ಮತ್ತು ಶ್ರೀ ಗೋಪಾಲ್ ಬಂದ್ಯೋಡ್ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಸಂಭ್ರಮದ ಸರಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗೋಪಾಲ ಬಂದ್ಯೋಡ್ ರವರು ಜವಾಬ್ದಾರಿಯುತ ಜೀವನ ನಡೆಸಿದ ಕಾರಣ ಇಂದು ಸಮಾಜದ ಸೊತ್ತಾಗಿದ್ದಾರೆ. ಅವರ ಒಂದೊಂದು ಹೆಜ್ಜೆ ಗುರುತೂ ಅನುಕರಣೀಯ, ಅವರಿಗೆ ಮುಂದೆಯೂ ಒಳ್ಳೆಯ ಆರೋಗ್ಯ, ಆಯುಷ್ಯ, ನೆಮ್ಮದಿ ಸಿಗಲಿ ಎಂದು ತಮ್ಮ ಆಶೀರ್ವಚನದಲ್ಲಿ ಶುಭ ಹಾರೈಸಿದರು.

ಗೋಪಾಲ ಬಂದ್ಯೋಡ್ ರವರು ಆಡಂಬರದ ಜೀವನದಲ್ಲಿ ಆಸಕ್ತಿ ನನಗಿಲ್ಲ, ಅಗತ್ಯ ಇದ್ದಷ್ಟೇ ಖರ್ಚು ಮಾಡಿ ಉಳಿದದ್ದು ಸಮಾಜಕ್ಕೆ ಬಳಸಬೇಕು ಅಂತಹ ಸಮಾಜಕ್ಕೆ ಬೇಕಾದ ಜನರು ಹುಟ್ಟಿಕೊಳ್ಳಲಿ ಎಂದು ಹಾರೈಸುತ್ತಾ ತನ್ನ ಸೇವಾ ಚಟುವಟಿಕೆಗಳಿಗೆ ಬೆಂಬಲಿಸಿದ ಮಡದಿ-ಮಕ್ಕಳನ್ನು ನೆನಪಿಸಿಕೊಂಡರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಮೋನಪ್ಪ ಭಂಡಾರಿ, ಶ್ರೀ ಕೋಳಾರು ಸತೀಶ್ಚಂದ್ರ ಭಂಡಾರಿ, ಶ್ರೀ ಬಿ.ರಾಜೀವ್ ಉಪ್ಪಳ, ಶ್ರೀ ಪ್ರಭಾಕರ ಚೌಟ ಮತ್ತು ಶ್ರೀ ಸುರೇಶ್ ಕುಮಾರ್ ಪೂಕಟ್ಟೆ ಯವರು ಬಂದ್ಯೋಡರನ್ನು ಅಭಿನಂದಿಸಿ ಮಾತನಾಡಿದರು. ಶ್ರೀ ಮೋಹನದಾಸ ಕೊಂಡೆವೂರು ಸ್ವಾಗತಿಸಿ ಶ್ರೀ ಜನಾರ್ಧನ ಪ್ರತಾಪನಗರ ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರೊ. ಪಿ.ಎನ್. ಮೂಡಿತ್ತಾಯರು ವಂದನಾರ್ಪಣೆಗೈದರು. ಮೊದಲಿಗೆ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಹರೀಶ್ ಮಾಡ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English