ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಇಂದಿಲ್ಲಿ ನಿರಂತರ 24 ತಾಸುಗಳ ಭಜನಾ ಕಾರ್ಯಕ್ರಮವನ್ನು ಸಾಂತಕ್ರೂಜ್ ಪೂರ್ವದ ಅಸೋಸಿಯೇಶನ್ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸನ್ನಿಧಿಯಲ್ಲಿ ನಡೆಸಿತು.
ಇಂದಿಲ್ಲಿ ಶನಿವಾರ ಮುಂಜಾನೆ ಸುರ್ಯೋದಯದ 6.04 ರ ವೇಳೆಗೆ ಏಕಾಹ ಭಜನಾ ಕಾರ್ಯಕ್ರಮಕ್ಕೆ ಸಮಾಜ ಸೇವಕ ವಾಮನ ಪೂಜಾರಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಶ್ರೀ ಧನಂಜಯ ಶಾಂತಿ ಉಳ್ಳೂರು ಮತ್ತು ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.
ಮುಂಬಯಿ ಮಹಾನಗರದಲ್ಲಿನ ಭಕ್ತಾಕರ್ಷಕ ಭಜನಾ ಮಂಡಳಿಗಳಾದ ಚಾಮುಂಡೇಶ್ವರಿಭಜನಾ ಮಂಡಳಿ, ದತ್ತಜಗದಂಭಾ ಭಜನಾ ಮಂಡಳಿ ಬ್ಯಾಪ್ಟಿಸ್ಟವಾಡಿ, ಹೋಬಳಿ ಕುಂದಾಪುರ ಭಜನಾ ಮಂಡಳಿ, ಶ್ರೀ ಸದ್ಗುರು ನಿತ್ಯಾನಂದ ಮಂಡಳಿ ಗೋರೆಗಾಂವ್, ಶ್ರೀಕೃಷ್ಣ ಭಜನಾ ಮಂಡಳಿ ತ್ರಿಭುವನ್ ರೋಡ್, ಶ್ರೀ ಲಕ್ಷಿ ನಾರಾಯಣ ಭಜನಾ ಮಂಡಳಿ ಮೀರಾರೋಡ್, ಶ್ರೀ ರಾಮಕೃಷ್ಣ ಭಜನಾ ಮಂಡಳಿ ಕೊಂಡಿವಿಟಾ, ಶ್ರೀ ಸೀತಾರಾಮ ಭಜನಾ ಮಂಡಳಿ ಕಮಾನಿ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ, ಶ್ರೀ ಜಗದಂಭಾ ಭಜನಾ ಮಂಡಳಿ ಜೋಗೆಶ್ವರೀ, ಶ್ರೀ ಮಹಾಕಾಳಿ ಭಜನಾ ಮಂಡಳಿ ಸಾಂತಕ್ರೂಜ್, ಶ್ರೀ ನಿತ್ಯಾನಂದ ಭಜನಾ ಮಂಡಳಿ ಭಾಂಡೂಫ್, ಶ್ರೀ ಗೋತಾಂಬಿಕಾ ಭಜನಾ ಮಂಡಳಿ ಅಸಲ್ಫಾ, ಶ್ರೀ ದತ್ತಾತ್ರೇಯ ಭಜನಾ ಮಂಡಳಿ, ಅಸಲ್ಫಾ, ಶ್ರೀ ಆದಾರ್ ಭಜನಾ ಮಂಡಳಿ, ಶ್ರೀ ಮಣಿಕಂಠ ಭಜನಾ ಮಂಡಳಿ ಸಾಕಿನಾಕ, ಶ್ರೀ ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕ, ಶ್ರೀ ಗುರುನಾರಾಯಣ ಭಜನಾ ಮಂಡಳಿ ಸಾಂತಕ್ರೂಜ್ ಸೇರಿದಂತೆ ಅಸೋಸಿಯೇಶನ್‌ನ ಕೇಂದ್ರ ಕಚೇರಿ, ಜೋಗೇಶ್ವರಿ, ಮೀರಾರೋಡ್, ಥಾಣೆ, ಬೊರಿವಲಿ, ನವಿಮುಂಬಯಿ, ಭಿವಂಡಿ, ಭಾಂಡೂಪ್, ಡೊಂಬಿವಲಿ, ಕಲ್ಯಾಣ್, ಚೆಂಬೂರು, ಕಲ್ವಾ, ಘಾಟ್ಕೋಪರ್, ಅಂಧೇರಿ, ಕಾಂದಿವಲಿ, ಮಲಾಡ್ ಸ್ಥಳೀಯ ಕಚೇರಿಗಳು ಮತ್ತು ಸಮನ್ವಯ ಸಮಿತಿಗಳೂ ಭಜನೆಗೈದರು.
ಧಾರ್ಮಿಕ ಉಪ ಸಮಿತಿ ಕಾರ್ಯಾಧ್ಯಕ್ಷ ಮೋಹನದಾಸ್ ಜಿ.ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಎ.ಅಮೀನ್‌ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಆದಿತ್ಯವಾರ ಮುಂಜಾನೆ ಬೆಳಗುಕಾಲಕ್ಕೆ ಮಂಗಳೋತ್ಸ ವದೊಂದಿಗೆ ಈ ಏಕಾಹ ಭಜನಾ ಸಮಾಪ್ತಿ ಕಾಣಲಿದೆ ಎಂದು ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ ಗೌರವ ಕಾರ್ಯದರ್ಶಿ ರವೀಂದ್ರ ಎ.ಅಮೀನ್ ತಿಳಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಎಸ್.ಪೂಜಾರಿ, ಸಿ.ಟಿ ಸಾಲ್ಯಾನ್ ಮತ್ತು ಭಾಸ್ಕರ್ ಎಂ.ಸಾಲ್ಯಾನ್, ಗೌ| ಪ್ರ| ಕೋಶಾಧಿಕಾರಿ ಭಾಸ್ಕರ ವಿ.ಬಂಗೇರಾ ಜೊತೆ ಕಾರ್ಯದರ್ಶಿಗಳಾದ ಶಂಕರ್ ಡಿ.ಪೂಜಾರಿ, ಮಹೇಶ್ ಕಾರ್ಕಳ್, ಹರೀಶ್ ಜಿ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಧರ್ಮಪಾಲ್ ಜಿ.ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ. ಕೋಟ್ಯಾನ್, ದಾಮೋದರ ಸಿ.ಕುಂದರ್, ಹರೀಶ್ ಕೆ. ಹೆಜ್ಮಾಡಿ, ಬೇಬಿ ಕುಕ್ಯಾನ್, ಶೇಖರ್ ಸಸಿಹಿತ್ಲು ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English