ಉದ್ಯಮಿ ರಮೇಶ್ ಕುಮಾರ್ ದಂಪತಿಗಳಿಂದ ಕುದ್ರೋಳಿ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

8:59 PM, Wednesday, March 2nd, 2011
Share
1 Star2 Stars3 Stars4 Stars5 Stars
(No Ratings Yet)
Loading...

ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ ಮಂಗಳೂರು : ಉದ್ಯಮಿ ರಮೇಶ್ ಕುಮಾರ್ ಮತ್ತು ಉರ್ಮಿಳ ರಮೇಶ್ ದಂಪತಿಗಳು ಇಂದು ಮಧ್ಯಾನ್ಹ 12.42 ರ ವೃಷಭ ಲಗ್ನದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಈ ಬೆಳ್ಳಿರಥವನ್ನು ಸಮರ್ಪಿಸಿದರು.
18.5 ಅಡಿ ಎತ್ತರ ಹಾಗೂ 8.5 ಅಡಿ ಅಗಲವಿರುವ  ಬೆಳ್ಳಿ ರಥವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರಥವನ್ನು 225ಕ.ಜಿ. ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಫೆಬ್ರವರಿ 18 ರಂದು  ಕುಂಟಾಡಿಯಿಂದ ವಿವಿಧ ವಾದ್ಯಾ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗಿತ್ತು. ಇಂದು ಮಧ್ಯಾಹ್ನ ನಡೆದ ವಿಶೇಷ ಕಾರ್ಯಕ್ರಮದಲ್ಲಿ  ಈ ಬೆಳ್ಳಿರಥವನ್ನು ವಿಧಿವತ್ತಾಗಿ ಸಮರ್ಪಿಸಲಾಯಿತು.
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ ಈ ಸಂದರ್ಭದಲ್ಲಿ ರಮೇಶ್ ಮತ್ತು ರಮೇಶ್ ಕುಮಾರ್, ಅವರ ಕುಟುಂಬಸ್ತರು ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಮಂಗಳೂರು ನಗರ ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್, ಶ್ರೀ ಕ್ಷೇತ್ರದ ಅಭಿವೃದ್ಧಿ ಕಮಿಟಿ ಅಧ್ಯಕ್ಷರಾದ ಜಯ ಸಿ, ಸುವರ್ಣ,  ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್. ಸಾಯಿರಾಮ್, ಉಪಾಧ್ಯಾಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್.ಆರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ ಇಂದು ಸಂಜೆ  ರಥ ಪೂಜೆ, ರಥಾರೋಹಣ, ರಥ ಬಲಿ ಹಾಗೂ ರಥದಲ್ಲಿ ಶ್ರೀ ದೇವರಿಗೆ ಮಂಗಳಾರತಿ ಜರಗಲಿದೆ. ರಾತ್ರಿ 10 ಗಂಟೆಗೆ ವಿಷ್ಣು ಬಲಿ ಉತ್ಸವ, ರಾತ್ರಿ ಒಂದು ಗಂಟೆಗೆ ಶಿವಬಲಿ, ಮಹಾಶಿವರಾತ್ರಿ, ಜಾಗರಣೆ ಬಲಿ ಕಟ್ಟೆಪೂಜೆ, ಕೆರೆದೀಪ, ಮಂಟಪಪೂಜೆ ಜರಗಲಿರುವುದು.
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English