ಮಂಗಳೂರಿನಲ್ಲಿ ಸಂಯೋಜಕ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

5:50 PM, Friday, July 10th, 2015
Share
1 Star2 Stars3 Stars4 Stars5 Stars
(No Ratings Yet)
Loading...
Consumer Training

ಮಂಗಳೂರು: ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಆಶ್ರಯದಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಗ್ರಾಹಕ ಕ್ಲಬ್ ಗಳ ಸಂಯೋಜಕ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಮಂಗಳೂರಿನ ತಾಲ್ಲೂಕು ಪಂಚಾಯತ್ ಕಟ್ಟಡದ ಸಾಮರ್ಥ್ಯ ಸೌಧದಲ್ಲಿ ಜುಲೈ 10 ರಂದು ನಡೆಸಲಾಯಿತು. ಶಿಕ್ಷಕರಾದವರು ಮಕ್ಕಳನ್ನು ಹೇಗೆ ಬೆಳೆಸಬೇಕು, ಪ್ರೇರೇಪಿಸಬೇಕು ಎಂಬ ಹಲವಾರು ಉದಾಹರಣೆಗಳ ಮೂಲಕ ಸಂಪನ್ಮೂಲ ವ್ಯಕ್ತಿ ಅಡ್ಡೂರು ಕೃಷ್ಣ ರಾವ್ ರವರು ಮಾತನಾಡಿದರು.

ಗ್ರಾಹಕ ಶಿಕ್ಷಣದ ಜಾಗೃತಿಯ ಹಲವಾರು ಮಜಲುಗಳನ್ನು ತೆರೆದಿಟ್ಟು ಕಾರ್ಯದರ್ಶಿ ವಿಷ್ಣು ಪಿ.ನಾಯಕ್ ರವರು ಮಾಹಿತಿ ನೀಡಿದರು. ತರುವಾಯ ವಿವಿಧ ಗುಂಪುಗಳನ್ನು ಮಾಡಿ ಸ್ವಚರ್ಚೆಗೆ ಅವಕಾಶ ಕೊಟ್ಟು ಪೂರಕ ವಿಚಾರಗಳನ್ನು ತಿಳಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಎಡ್ವಿನ್ ಡಿ ಮೆಲ್ಲೊ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಜಯಪ್ರಕಾಶ್ ಹಾಗೂ ಕಚೇರಿ ಸಹಾಯಕಿ ಮಲ್ಲಿಕಾ ಕಾರ್ಯಕ್ರಮ ಸಂಯೋಜಿಸಿದ್ದರು. ಜತೆ ಕಾರ‍್ಯದರ್ಶಿ ರಾಯೀ ರಾಜಕುಮಾರ್ ರವರು ಸ್ವಾಗತಿಸಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English