ಮಂಗಳೂರು : ದ.ಕ.ಜಿ.ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು ಉತ್ತರ ವಲಯ ಮತ್ತು ಸ್ಕಂದ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ರೋಟರಿ ಕ್ಲಬ್ ನಾರ್ತ್ ಗಾಂಧಿನಗರ ಇವರ ಸಹಯೋಗದಲ್ಲಿ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಭಾನುವಾರ ರೋಟರಿ ಬಾಲಭವನ ಗಾಂಧಿನಗರ ಇಲ್ಲಿ ವಿಶೇಷ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಏರ್ಪಡಿಸಲಾಯಿತು.
ಈ ಶಿಬಿರದಲ್ಲಿ ಕಾರ್ಪೊರೇಟರ್ ಶ್ರೀಮತಿ ಜಯಂತಿ ಆಚಾರ್, ಶ್ರೀಮತಿ ರಾಜಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳೂರು ಉತ್ತರವಲಯ, ಸಮನ್ವಯಾಧಿಕಾರಿಗಳಾದ ಶ್ರೀ ಪೀತಾಂಬರ.ಕೆ, ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ವೇಣುಗೋಪಾಲ, ಶ್ರೀ ನಯನ ಕುಮಾರ್, ಶ್ರೀ ರಂಗನಾಥ್ ಐತಾಳ್, ಡಾ| ಸುದರ್ಶನ್, ಡಿ.ಐ.ಇ.ಆರ್.ಟಿ, ಪ್ರದೀಪ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀಮತಿ ಪ್ರಭಾ ಸ್ವಾಗತಿಸಿದರು. ಶ್ರೀಮತಿ ಜಯಂತಿ ಆಚಾರಿ ಇವರು ಉದ್ಘಾಟಿಸಿದರು. ಶ್ರೀ ಪೀತಾಂಬರ.ಕೆ (ಕ್ಷೇತ್ರ ಸಮನ್ವಯಾಧಿಕಾರಿಗಳು) ಪ್ರಸ್ತಾವನೆ ಗೈದರು. ಶ್ರೀಮತಿ ಮೇನುಕಾದೇವಿ, ಐ.ಇ.ಆರ್.ಟಿ, ಕಾರ್ಯಕ್ರಮ ಸಂಯೋಜಿಸಿದರು. ಶ್ರೀ ಅನಂತರಾಮರು ಧನ್ಯವಾದಗೈದರು. ಶ್ರೀಮತಿ ಜ್ಯೋತಿ ಡಿಸೋಜ , ಶ್ರೀಮತಿ ಶಶಿಕಲಾ ವಿಶೇಷ ಶಿಕ್ಷಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English