ಸಿಎ. ಪರೀಕ್ಷೆಯಲ್ಲಿ ಯಶಸ್ಸು ದಾಖಲಿಸಿದ ಮಂಗಳೂರಿನ ಶ್ವೇತಾ ಶೆಣೈ

5:10 PM, Friday, July 17th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Swetha shenoy

ಮಂಗಳೂರು: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನವದೆಹಲಿ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ್ದ ಲೆಕ್ಕ ಪರಿಶೋಧಕರ ಪರೀಕ್ಷೆಯಲ್ಲಿ ಮಂಗಳೂರಿನ ಹೆಚ್. ಶ್ವೇತಾ ಶೆಣೈ ಉತೀರ್ಣರಾಗುವ ಮೂಲಕ ಯಶಸ್ಸಿನ ಸಾಧನೆ ದಾಖಲಿಸಿದ್ದಾರೆ.

ಅವರು ಮಂಗಳೂರಿನ ಕೆನರಾ ಹೈಸ್ಕೂಲ್ ಉರ್ವಾ ಹಾಗೂ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇಲ್ಲಿನ ಖ್ಯಾತ ಲೆಕ್ಕಪರಿಶೋಧಕ ಮುಂಡ್ಕೂರು ಜಗನ್ನಾಥ ಕಾಮತ್ ಅವರಲ್ಲಿ ತರಬೇತಿ ಪಡೆದಿರುವ ಶ್ವೇತಾ ಕೊಂಚಾಡಿ ನಿವಾಸಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉದ್ಯೋಗಿಯಾಗಿರುವ ಹೆಚ್. ಶಿವರಾಯ ಶೆಣೈ ಹಾಗೂ ಗೀತಾ ಶೆಣೈ ದಂಪತಿಯ ಸುಪುತ್ರಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English