ಬಲ್ಮಠ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿದ ಅಟೆಂಡರ್

6:27 PM, Friday, July 17th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Balmatta attender

ಮಂಗಳೂರು : ಬಲ್ಮಠ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಬಸ್‌ಪಾಸ್ ಮಾಡಿಸುವ ಸಲುವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ಬಸ್‌ಪಾಸ್ ಮಾಡದೆ, ಹಣವನ್ನು ವಾಪಾಸು ನೀಡದೆ ವಂಚಿಸಿರುವ ಕಾಲೇಜಿನ ಅಟೆಂಡರ್ ರತ್ನಾಕರವರ ವಿರುದ್ಧ ಇಂದು ವಿದ್ಯಾರ್ಥಿನಿಯರು ದಿಗ್ಬಂಧಿಸಿ ಪ್ರತಿಭಟಿಸಿದರು.

ವಿದ್ಯಾರ್ಥಿನಿಯರು ಕಾಲೇಜಿನ ಅಟೆಂಡರ್ ವಂಚನೆ ಮಾಡುವ ಉದ್ದೇಶದಿಂದ ಸುಮಾರು 19 ವಿದ್ಯಾರ್ಥಿನಿಯರಿಂದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆದು ಅಲ್ಲದೇ ಕರ್ತವ್ಯದ ವೇಳೆ ಪಾನಮತ್ತರಾಗಿರುತ್ತಾರೆ. ಹಾಗಾಗಿ ಕೂಡಲೇ ಹಣ ಹಿಂದಿರುಗಿಸಬೇಕು. ಮತ್ತು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಪಟ್ಟುಹಿಡಿದರು.

ಕಾಲೇಜಿನ ದೂರಿನನ್ವಯ ಕಾಲೇಜು ಇಲಾಖೆಯ ಜಂಟಿ ನಿರ್ದೇಶಕರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಜೊತೆ ಚರ್ಚಿಸಿದ ಬಳಿಕ ಅಟೆಂಡರ್ ಇಂದು ಸಂಜೆ 4 ಗಂಟೆಯ ಒಳಗಾಗಿ ಹಣ ನೀಡುವೆನೆಂದು ಜಂಟಿ ನಿರ್ದೇಶಕರ ಸಮ್ಮುಖದಲ್ಲಿ ಲಿಖಿತವಾಗಿ ಭರವಸೆ ನೀಡಿದರು. ಆದರೆ ಪಟ್ಟು ಬಿಡದೆ ವಿದ್ಯಾರ್ಥಿನಿಯರು ಅಟೆಂಡರ್ ರತ್ನಾಕರ್‌ರವರು ಕಾಲೇಜಿನ ವೇಳೆಯಲ್ಲಿಯೇ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದು ಹಾಗೂ ಕಾಲೇಜಿನಲ್ಲಿ ವಂಚನೆಯ ದೂರುಗಳು ಈಗಾಗಲೇ ಇದೆ. ಆದ್ದರಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಕೊನೆಗೆ ಜಂಟಿ ನಿರ್ದೇಶಕರು ವಿದ್ಯಾರ್ಥಿನಿಯರ ದೂರಿನ ಹಿನ್ನಲೆಯಲ್ಲಿ ಪದವಿಕಾಲೇಜಿನ ಆಯುಕ್ತರಿಗೆ ರತ್ನಾಕರ್‌ರವರನ್ನು ಅಮಾನತು ಮಾಡಲು ದೂರು ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ನಾಯಕರಾದ ಮಾಧುರಿ ಬೋಳಾರ್, ರಮ್ಯಾ, ವಿನಿಶ ಡಿ’ಸೋಜ ಮತ್ತು ಮೋನಿಷಾ ಇವರುಗಳು ಉಪಸ್ಥಿತರಿದ್ದರು.

Balmatta attender

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English