ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ 75 ದಿನಕ್ಕೆ

12:59 AM, Tuesday, July 28th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

Oriyan Toonda Oriyagapuji

ಮಂಗಳೂರು : ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ ತನ್ನ ಪ್ರದರ್ಶನದ 75ನೇ ದಿನವನ್ನು ಮಂಗಳೂರಿನ ನ್ಯೂಚಿತ್ರಾ ಟಾಕೀಸಿನಲ್ಲಿ ಜುಲೈ 28ರಂದು ಪೂರೈಸಲಿದೆ. ತುಳು ಚಿತ್ರಗಳಲ್ಲಿ ಕೌಟುಂಬಿಕ, ಹಾಸ್ಯಮಯ ಸನ್ನಿವೇಶಗಳೊಂಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಾ ನೂರನೇ ದಿನದತ್ತ ಮುನ್ನುಗ್ಗತ್ತಿದ್ದು ತುಳುನಾಡಿನಾದ್ಯಂತ ಮನೆಮಾತಾಗಿದೆ.

ಇದು ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ಮೂಡಿಬಂದ ಚೊಚ್ಚಲ ತುಳು ಚಿತ್ರ. ‘ಒರಿಯನ್ ತೂಂಡ ಒರಿಯಗಾಪುಜಿ’ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಯಶಶ್ವೀ ಪ್ರದರ್ಶನ ನೀಡಿದೆ. ಪ್ರಸ್ತುತ ಸುಳ್ಯದ ಸಂತೋಷ್ ಚಿತ್ರ ಮಂದಿರದಲ್ಲಿ ನಾಲ್ಕು ದೇಖಾವೆಗಳು ಕಿಕ್ಕಿರಿದ ಜನಸಂದಣಿಯಿಂದ ಪ್ರದರ್ಶನಗೊಳ್ಳುತ್ತಿದೆ. ಬಿಸಿರೋಡಿನ ನಕ್ಷತ್ರ ಹಾಗೂ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಮುಂದಿನವಾರ ತೆರೆಕಾಣಲಿದೆ.

ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಬಯಿ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಶೀಘ್ರದಲ್ಲೇ ಬಿಡುಗಡೆಯ ಸಿದ್ದತೆಯಲ್ಲಿದೆ. ಚಿತ್ರದ ಎಲ್ಲಾ ಹಾಡುಗಳೂ ಸುಪರ್ ಹಿಟ್ ಆಗಿದ್ದು ಜನಮಾನಸದಲ್ಲಿ ರಂಜಿಸುತ್ತಿದೆ,

ಈ ಚಿತ್ರದ ವಿಶೇಷತೆಯೆಂದರೆ ಚಿತ್ರದಲ್ಲಿ ಪಂಚಭಾಷೆಗಳನ್ನು ಅಳವಡಿಸಲಾಗಿದೆ. ತಮಿಳು, ಕನ್ನಡ ಜೊತೆಗೆ ತುಳು ಭಾಷೆಯ ಹಾಸ್ಯ ಪಾತ್ರಗಳಿದ್ದು ಅದನ್ನು ತುಳು ಮತ್ತು ಕನ್ನಡ ಚಿತ್ರರಂಗದ ಪ್ರಭುದ್ದ ಕಲಾವಿದರು ನಿರ್ವಹಿಸಿದ್ದಾರೆ. ಅದರ ಮೂಲಕ ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯನ್ನೇ ಹರಿಸಲಾಗಿದೆ. ಕ್ಷಣ ಕ್ಷಣದಲ್ಲೂ ರೋಮಾಂಚಕ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸಿದೆ.
ಥ್ರಿಲ್ಲರ್ ಮಂಜು ಅವರ ಮೂರು ಫೈಟ್‌ಗಳು, ಕಥಾ ನಾಯಕ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ಪ್ರಜ್ವಲ್ ಪೂವಯ್ಯ ನಟನೆ, ರೇಖಾದಾಸ್, ಭವ್ಯ ಹಾಗೂ ಮಿತ್ರ ಅಭಿನಯ. ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸುಂದರ್ ರೈ ಮಂದಾರ, ಸಾಯಿಕೃಷ್ಣ ಕುಡ್ಲ, ಎ.ಗಂಗಾಧರ ಶೆಟ್ಟಿ ಅಳಕೆ, ಬಿ.ಅಶೋಕ್ ಕುಮಾರ್, ನಾಗೇಶ್ ದಂಬೇಲ್, ಲೋಕೇಶ್ ಬರ್ಕೆ, ಮಂತಾದ ಪ್ರಬುದ್ದ ಕಲಾವಿದರ ಅದ್ಬುತ ಅಭಿನಯ ಚಿತ್ರವನ್ನು ಯಶಸ್ವಿಗೊಳಿಸಿದೆ.

ವಿ.ಮನೋಹರ್ರವರ ಸಂಗೀತ ನಿರ್ದೇಶನ, ಶ್ರೀ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯಾರ್, ಅನುರಾಧ ಭಟ್, ಹಾಡುಗಳು ಮದನ್ ಹರಿಣಿ ನೃತ್ಯ ಸಂಯೋಜನೆ, ನಾಗೇಶ್ ಆಚಾರ್ಯ-ಗೌರಿ ವೆಂಕಟೇಶ್ ಛಾಯಾಗ್ರಹಣ, ಹ.ಸೂ ರಾಜಶೇಖರ್ ಅವರ ನಿರ್ದೇಶನ ಚಿತ್ರದ ನೈಜತೆ ಮತ್ತು ಗುಣಮಟ್ಟವನ್ನು ಶ್ರೀಮಂತಗೊಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English