ಪುನರ್ವಸತಿ ಯೋಜನೆ ಅನುಷ್ಠಾನ: ಸ್ಥಳೀಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

9:02 PM, Friday, March 4th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಪುನರ್ವಸತಿ ಯೋಜನೆ ಅನುಷ್ಠಾನಮಂಗಳೂರು : ಕುದುರೆಮುಖ ರಾಷ್ಟ್ರೀಯ ಪುನರ್ವಸತಿ ಯೋಜನೆಯನ್ವಯ ಅರಣ್ಯದೊಳಗಿಂದ ಹೊರಬಂದು ವಾಸಿಸಲು ಒಪ್ಪುವ ಕುಟುಂಬಗಳಿಗೆ ಪರಿಹಾರ  ಹಾಗೂ ಪೂರಕ ವ್ಯವಸ್ಥೆಗಳನ್ನು ನೀಡಲು ಪ್ರತೀ ಬುಧವಾರ ಸಂಬಂಧಪಟ್ಟ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವಾರಕ್ಕೊಂದರಂತೆ ಒಂದು ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪುನರ್ವಸತಿ ಯೋಜನೆ ಅನುಷ್ಠಾನಇಂದು ಬೆಳ್ತಂಗಡಿಯ ನಾರಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಬಳಿಕ ಕುತ್ಲೂರಿನ ಅಳಂಬ, ನೆಲ್ಲಿಪಡ್ಕದ ಮನೆಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡರು. ಒಟ್ಟು 220 ಕುಟುಂಬಗಳಲ್ಲಿ %50 ಜನರು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿ ಅರ್ಜಿ ಕೊಟ್ಟಿದ್ದಾರೆ ಎಂದ ಜಿಲ್ಲಾಧಿಕಾರಿಗಳು, 13 ಕುಟುಂಬಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸಲಾಗಿದೆ. 82 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಪರಿಶೀಲನೆಯ ಹಂತದಲ್ಲಿದೆ. 10 ಲಕ್ಷ ರೂ.ವರೆಗಿನ ಪರಿಹಾರ ನೀಡಲಾಗುವುದು. ರೂ. ಹತ್ತು ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಹಾಗೂ ವಾಸಕ್ಕೆ ಜಮೀನು ನೀಡುವ ಬಗ್ಗೆಯೂ ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಪರಿಹಾರ ನೀಡಿಕೆಯನ್ನು 3 ವಿಭಾಗಗಳಾಗಿ ವಿಂಗಡಿಸಿದ್ದು, ಅರಣ್ಯದಲ್ಲಿ ವಾಸವಿರುವವರನ್ನು ಒತ್ತಾಯಪೂರ್ವಕವಾಗಿ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಪುನರ್ವಸತಿ ಯೋಜನೆ ಅನುಷ್ಠಾನಕುದುರೆಮುಖ ವನ್ಯಜೀವಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಪ್ರಕಾಶ್ ನಡಾಲ್ಕರ್, ಉಪ ಕಾರ್ಯದರ್ಶಿ ಶಿವರಾಮೇಗೌಡ,  ಪುತ್ತೂರು ಎ. ಸಿ ಡಾ. ಹರೀಶ್ ಕುಮಾರ್, ಪ್ರೊಬೇಷನರಿ  ಐ ಎ ಎಸ್ ಶ್ರೀಮತಿ ಸಿಂದೂರಿ ದಾಸರಿ ನಾಯಕ್, ತಹಸೀಲ್ದಾರ್ ಶ್ರೀಮತಿ ಪ್ರಮೀಳ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಪದ್ಮಯ್ಯ ನಾಯಕ್, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English