ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗೆ ಜೈನ ಧರ್ಮದ ವಿವಿಧ ಸ್ಫರ್ಧೆಗಳು

7:57 AM, Wednesday, August 12th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
Jain Children

ಧರ್ಮಸ್ಥಳ: ಬಾಹುಬಲಿ ಮಹಿಳಾ ಸಮಿತಿ ವತಿಯಿಂದ ಜೈನ ಧರ್ಮದ ಕುರಿತಾಗಿ ವಿಶೇಷವಾಗಿ ವಿವಿಧ ಸ್ಫರ್ಧೆಗಳನ್ನು ಭಾನುವಾರದಂದು ಧರ್ಮಸ್ಥಳದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಯಿತು.

ಈ ಸ್ಫರ್ಧೆಗಳಲ್ಲಿ ಸುಮಾರು 25 ಕ್ಕೂ ಮಿಕ್ಕಿದ ಮಕ್ಕಳು ಪಾಲ್ಗೊಂಡಿದ್ದು ವಿಜೇತರ ವಿವರ ಹೀಗಿದೆ. ಭಕ್ತಾಮರ ಸ್ತೋತ್ರ ಪಠಣದಲ್ಲಿ ಕ್ರಮವಾಗಿ (ಸ್ತುತಿ, ದರ್ಶನ್, ನಿಧಿಶಾ), ಉತ್ತಮ ಸತ್ಯಧರ್ಮದ ಕುರಿತು ನಡೆಸಿದ ಪ್ರಬಂಧ ಸ್ಫರ್ಧೆಯಲ್ಲಿ (ಪೂರ್ಣಿಮಾ, ದರ್ಶನ್, ಸಾನಿಧ್ಯ), ಜಿನಭಕ್ತಿಗೀತೆಯಲ್ಲಿ (ಸ್ವಪ್ನ, ಸಿಂಚನ, ಶಮಿತಾ), ದರ್ಶನ ಸ್ತುತಿ ಸ್ಫರ್ಧೆಯಲ್ಲಿ ಸಾನ್ವಿ ವಿಜೇತರಾಗಿರುತ್ತಾರೆ. ಚಿತ್ರಕಲೆಯ ವಿಭಾಗದಲ್ಲಿ ಜೈನ ಧ್ವಜ ರಚನೆಗಾಗಿ (ಸಿಂಚನ, ರಾಧಿಕಾ, ರಮ್ಯ) ಮತ್ತು ಜೈನ ಧರ್ಮದ ಚಿಹ್ನೆ ರಚನೆಗಾಗಿ (ಶಮಿತಾ, ಪ್ರಾಪ್ತಿ, ಸ್ವಪ್ನ) ವಿಜೇತರಾಗಿರುತ್ತಾರೆ. ಪುಟಾಣಿ ಮಕ್ಕಳಿಗಾಗಿ ಪಂಚನಮೋಕಾರ ಮಂತ್ರವನ್ನು ಹೇಳಿಸಿದ್ದು ಇದರಲ್ಲಿ ಮಾ| ಧೀಮಂತ್ ಮತ್ತು ಮಾ| ಹಿತೇಶ್ ವಿಜೇತರಾಗಿರುತ್ತಾರೆ.

ಸ್ಫರ್ಧೆಯ ತೀರ್ಪುಗಾರರಾಗಿ ಧರ್ಮಸ್ಥಳದ ಶ್ರೀ ಶಿಶುಪಾಲ ಪೂವಣಿ, ಶ್ರೀ ಉದಯಕುಮಾರ್ ವಿಶೇಷವಾಗಿ ಆಗಮಿಸಿರುತ್ತಾರೆ. ಧನ್ಯವಾದವನ್ನು ಶ್ರೀಮತಿ ಸಾವಿತ್ರಿ ಪುಷ್ಪದಂತರವರು ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಊರ ಶ್ರಾವಕರು, ಶ್ರಾವಕಿಯರು ಪಾಲ್ಗೊಂಡಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English