ಮಂಗಳೂರು : ಅತ್ತಾವರದಲ್ಲಿ ಆಗಸ್ಟ್ 24 ರಂದು ಮುಸ್ಲಿಂ ಯುವಕನನ್ನು ಬಟ್ಟೆ ಬಿಚ್ಚಿಸಿ ಅರೆನಗ್ನ ಗೊಳಿಸಿ ಥಳಿಸಿದ ಎರಡು ದಿನದ ಬಳಿಕ ಅದೇ ಸ್ಥಳದಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಯಯಧಗಳಿಂದ ಕೈ ಮತ್ತು ಬೆನ್ನಿಗೆ ಕಡಿದು ಪರಾರಿಯಾದ ಘಟನೆ ಆಗಸ್ಟ್ 26 ರಾತ್ರಿ 10.45ರ ವೇಳೆಗೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಪಾಣೆಮಂಗಳೂರು ಸಮೀಪದ ನಂದಾವರದ ನಿವಾಸಿ ಗುರುದತ್ತ್ 35 ಎಂದು ಗುರುತಿಸಲಾಗಿದೆ.
ಮೂವರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದು ಆಟೋ ಸ್ಟ್ಯಾಂಡಿನಲ್ಲಿ ಕುಳಿತಿದ್ದ ಅಮಾಯಕನ್ನು ತಲವಾರಿನಿಂದ ಎಡಗೈಗೆ ಕಡಿದು, ಬೆನ್ನಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಗುರುದತ್ತ್ ಜಪ್ಪು ಬಪ್ಪಾಲಿನ ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದು ಕೆಎಂಸಿಯಲ್ಲಿ ಕಳೆದ ಭಾನುವಾರ ಹೆರಿಗೆಯಾದ ತನ್ನ ಮೊಮ್ಮಗಳ ಮಗುವನ್ನು ನೋಡಲು ಹೋಗಿ ಹಿಂದಿರುಗಿದ ವೇಳೆ ಈ ಘಟನೆ ಸಂಭವಿಸಿದೆ.
ಗುರುದತ್ತ್ ತನ್ನ ಆಟೋವನ್ನು ಹತ್ತಿ ಫೋನಿನಲ್ಲಿ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿರುವ ವೇಳೆ ಮೂವರು ವ್ಯಕ್ತಿಗಳು ಬಂದು ತಲವಾರಿನಿಂದ ಕಡಿದರು. ಅವರು ಯಾರೆಂಬುದು ನನಗೆ ಪರಿಚಯವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಬಂಟ್ವಾಳ ತಾಲೂಕು ಪಾಣೆಮಂಗಳೂರು ಸಮೀಪದ ನಂದಾವರದ ಪರಮೇಶ್ವರ್ ನಾಯ್ಕ ಅವರ 7 ಮಂದಿ ಮಕ್ಕಳಲ್ಲಿ ಗುರುದತ್ತ್ ಕೊನೆಯವನು. ವಾರಕ್ಕೆ ಒಂದು ಬಾರಿ ನಂದಾವರಕ್ಕೆ ಹೋಗಿ ಬರುತ್ತಿದ್ದ ಎಂದು ಅವರ ಮಂಗಳೂರಿನ ಮನೆಯವರು ಮೆಗಾ ಮೀಡಿಯಾಕ್ಕೆ ತಿಳಿಸಿದ್ದಾರೆ.
ಘಟನೆ ನಡೆದ ಎರಡು ಸ್ಥಳಗಳಲ್ಲಿ ಸಿಸಿ ಕ್ಯಾಮಾರಗಳಿದ್ದು ಪೊಲೀಸರು ಘಟನೆಗೆ ಸಂಬಂಧಿಸಿ ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.
ಪಾಂಡೇಶ್ವರ ಠಾಣಾಧಿಕಾರಿ ದಿನಕರ್ ಶೆಟ್ಟಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೆಲ್ನೋಟಕ್ಕೆ ಇದು ಮುಸ್ಲಿಂ ಯುವಕನನ್ನು ಬಟ್ಟೆ ಬಿಚ್ಚಿಸಿ ಅರೆನಗ್ನ ಗೊಳಿಸಿದ ಪ್ರಕರಣಕ್ಕೆ ಪ್ರತೀಕಾರ ಎಂದು ಹೇಳಲಾಗುತ್ತಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English