ಮಂಗಳೂರು : ನಗರದ ಲಾಲ್ ಭಾಗ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಆಯೋಜಿಸಿರುವ ಬೃಹತ್ ಪಾದಯಾತ್ರೆಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನೀಡಿದರು.
ಕೋಮು ಪ್ರಚೋದನೆ ಮತ್ತು ಕೋಮುವಾದವನ್ನು ಬುಡಸಹಿತ ಕಿತ್ತು ಹಾಕಲು ಸಂಕಲ್ಪ ಮಾಡುವಂತೆ ಯುವಕರಿಗೆ ಕರೆ ನೀಡಿದರು. ಜಿಲ್ಲೆ ಶಾಂತಿ ಹಾಗು ಸೌಹಾರ್ಧತೆಯ ನೆಲೆಯಲ್ಲಿ ಹಿಂದೂ ಮುಸ್ಲೀಮರನ್ನು ಒಗ್ಗೂಡುವಂತೆ ಮಾಡಿದೆ. ಅದನ್ನು ಸಹಿಸದ ಕೆಲವು ಮತಾಂಧರು ಗಲಭೆ ಎಬ್ಬಿಸಿ ಶಾಂತಿ ಕದಡುತ್ತಾರೆ ಎಂದು ಹೇಳಿದರು.
ಕೋಮುವಾದಿಗಳು ನಡೆಸುತ್ತಿರುವ ಇಂಥಹ ಮತಾಂಧ ಚಟುವಟಿಕೆಗಳ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಮಿಥುನ್ ರೈ ನುಡಿದರು.
ಶಾಸಕರಾದ ಬಿ..ಎ.ಮೊಯ್ದಿನ್ ಬಾವಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಕಾರ್ಪೊರೇಟರ್ ಗಳು, ಮಾಜಿ ಮೇಯರ್ ಸಹಿತ ಯುವ ಕಾಂಗ್ರೆಸ್, ಎನ್ ಎಸ್ ಯು ಐ ಸಹಿತ ಕಾಂಗ್ರೆಸ್ ಪದಾಧಿಕಾರಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English