ಮಂಗಳೂರು: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಮಾಲತಿ ಪೂಜಾರಿ ದಂಪತಿ ಪುತ್ರ ಸಂತೋಷ್ ಪೂಜಾರಿ ದಂಪತಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ, ತನ್ನ ತಾಯಿ ಹೆಸರಿನಲ್ಲಿ ದೇವರಿಗೆ ಅರ್ಪಿಸಿದ ‘ಗೌರಿ ಮಂಟಪ’ವನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಅವರ ಪತ್ನಿ ಬುಧವಾರ ಉದ್ಘಾಟಿಸಿದರು.
ಕುದ್ರೋಳಿ ದೇವಸ್ಥಾನ ನವೀಕರಣಗೊಂಡು ಹಾಗೂ ಮಂಗಳೂರು ದಸರಾ ಪ್ರಾರಂಭವಾಗಿ 25 ವರ್ಷ ಸಂದ ಹಿನ್ನೆಲೆಯಲ್ಲಿ ‘ಗೌರಿ ಮಂಟಪ’ ನಿರ್ಮಿಸಲಾಗಿದೆ ಎಂದು ಪೂಜಾರಿ ಹೇಳಿದರು.
ಜಯ ಸಿ. ಸುವರ್ಣ, ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ ಆರ್., ಕ್ಷೇತ್ರ ಅಭಿವೃದ್ಧಿ ಮಂಡಳಿ ಸದಸ್ಯ ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಸುನೈನಾ ಪೂಜಾರಿ ಹಾಗೂ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English