ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಹಾಗೂ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರದ 2010-11 ನೇ ಸಾಲಿನಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ 8 ಕಾಮಗಾರಿಗಳ ಅನುಷ್ಠಾನಕ್ಕಾಗಿ ರೂ.123.45 ಲಕ್ಷ ಹಾಗೂ ಮೀನುಗಾರಿಕಾ ಇಲಾಖೆಗೆ 14 ಕಾಮಗಾರಿಗಳಿಗೆ ರೂ.201.70ಲಕ್ಷ,ಹೆಚ್ಚುವರಿ ಅನುದಾನ ಒದಗಿಸಿದೆಯೆಂದು ರಾಜ್ಯದ ಜೀವಿಶಾಸ್ತ್ರ,ಪರಿಸರ,ಬಂದರು,ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಹಾಗೂ ಜಲಸಾರಿಗೆ ಸಚಿವರಾದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್ ತಿಳಿಸಿರುತ್ತಾರೆ.
ಮಂಗಳೂರು ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬಳಿ ಹೊಸ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ ರೂ.19.50ಲಕ್ಷ,ಮಂಗಳೂರು ತಾಲ್ಲೂಕು ಹಳೆ ಬಂದರು ಪ್ರದೇಶದ ದೇವಿ ಮರೈನ್ ಬಳಿ ಮೀನುಗಾರ ಮಹಿಳೆಯರ ಅನುಕೂಲಕ್ಕಾಗಿ ಕಾರ್ಗೋ ಪ್ರಯಾಣಿಕರ ಜೆಟ್ಟಿ ನಿರ್ಮಾಣ ಹಾಗೂ ಬದಿ ಕಟ್ಟುವಿಕೆಗೆ ರೂ.15 ಲಕ್ಷಮಂಗಳೂರು ತಾಲೂಕು ಬೊಳಿಯಾರು ಗ್ರಾಮದ ಜಳಕದಕಟ್ಟಿ ಎಂಬಲ್ಲಿ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ ರೂ.19.75 ಲಕ್ಷ , ಬಂದರು ವೃತ್ತದ ಕಾಂಕ್ರೀಟೀಕರಣಕ್ಕಾಗಿ ರೂ.15.00 ಲಕ್ಷ,ಹಳೇಬಂದರು ಪ್ರದೇಶದ ಬಿಎಂಡಿ ಫೇರಿ ಬದಿ ಕಟ್ಟುವುದು ಹಾಗೂ ತಂಗುದಾಣ ಅಭಿವೃದ್ಧಿ ಕಾಮಗಾರಿಗೆ ರೂ.10ಲಕ್ಷ,ಪಾಲಿಕೆ ವ್ಯಾಪ್ತಿಯ ನಾಯರ್ ಕೆರೆ ಎಂಬಲ್ಲಿ ಸಣ್ಣ ಧೋಣಿಗಳ ನಾವೆಯ ಸೌಕರ್ಯಕ್ಕಾಗಿ ಒಂದು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗೆ 15.00 ಲಕ್ಷ,ತಣ್ಣೀರುಬಾವಿ ಬೆಂಗ್ರೆ ಕೋರ್ದಬ್ಬು ದೈವಸ್ಥಾನ ಬಳಿ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ 19.20 ಲಕ್ಷ ಹಾಗೂ ಪಾಲಿಕೆ ವ್ಯಾಪ್ತಿಯ ಸುಲ್ತಾನ್ ಬತ್ತೇರಿ ಪ್ರಯಾಣಿಕರ ಜೆಟ್ಟಿಯ ಪೋರ್ಟ್ ಬಳಿ ಬದಿ ನಿರ್ಮಾಣಕ್ಕೆ 10 ಲಕ್ಷ ಸೇರಿ ಒಟ್ಟು 123.45 ಲಕ್ಷ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಲಾಗಿದೆ.
ಮೀನುಗಾರಿಕಾ ಇಲಾಖೆಗೆ ಬಿಡುಗಡೆ ಮಾಡಲಾದ ಹೆಚ್ಚುವರಿ ಅನುದಾನದಿಂದ ಮಂಗಳೂರು ತಾಲೂಕು ಬೈಕಂಪಾಡಿ ಮೀನಕಳಿಯ ಮುಖ್ಯ ರಸ್ತೆ ಕಾಂಕ್ರೀಟೀಕರಣಕ್ಕಾಗಿ 19.50ಲಕ್ಷ ಪಣಂಬೂರು ಮೀನಕಳಿಯ ಕೂರಿಕಟ್ಟೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ರೂ.18.50 ಲಕ್ಷ ತಣ್ಣೀರುಬಾವಿ ಬೇಂಗ್ರೆ ರಸ್ತೆ ಕಾಂಕ್ರೀಟೀಕರಣಕ್ಕಾಗಿ (ತೀರಾ ಹಾಳಾದ ಭಾಗ)ರೂ.19.ಲಕ್ಷ,ತಣ್ಣೀರುಬಾವಿ ತೋಟ ಬೇಂಗ್ರೆ ಮುಖ್ಯ ರಸ್ತೆ ಆಯ್ದ ಭಾಗಗಳಿಗೆ ಪುನರಪಿ ಡಾಂಬರೀಕರಣಕ್ಕೆ ರೂ.18.50 ಲಕ್ಷ ,ತಣ್ಣೀರುಬಾವಿ ಕಸಬಾ ಬೇಂಗ್ರೆ ಮುಖ್ಯ ರಸ್ತೆ ಪುನರಪಿ ಡಾಂಬರೀಕರಣ ಸಲುವಾಗಿ ರೂ.19 ಲಕ್ಷ,ಪಾಲಿಕೆ ವ್ಯಾಪ್ತಿ ಕುಳಾಯಿ ಹೊಸಬೆಟ್ಟು,ಸಮುದ್ರ ಕಿನಾರೆ ರಸ್ತೆಯ ಸದಾಶಿವ ನಗರದಿಂದ ಲೈಟ್ ಹೌಸ್ ಹಿಲ್ಸ್ ರಾಷ್ಟ್ರೀಯ ಹೆದ್ದಾರಿವರೆಗೆ ಪುನರಪಿ ಡಾಂಬರೀಕರಣಕ್ಕಾಗಿ ರೂ.19.80ಲಕ್ಷ, ಮಹಾನಗರಪಾಲಿಕೆ ವ್ಯಾಪ್ತಿಯ ತಣ್ಣಿರುಬಾವಿ ಬೆಂಗ್ರೆ ನಾಯರ್ ಕೆರೆ ರಸ್ತೆ ಅಭಿವೃದ್ಧಿ 10.00 ಲಕ್ಷ,ಮೀನಕಳಿಯ ಕೂರಿಕಟ್ಟ ರಸ್ತೆ 10.00 ಲಕ್ಷ,ಹಳೆಯಂಗಡಿ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದಿಂದ ಪಾವಂಜೆ ವಾಸುಹಿತ್ಲು ವರೆಗೆ ರಸ್ತೆ ದುರಸ್ತಿ 8.00ಲಕ್ಷ, ಪಾವಂಜೆ ಸೇತುವೆ ಬಳಿಯಿಂದ ಅರಂಭವಾಗಿ ಸಸಿಹಿತ್ಲು ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ, ಮೂಲ್ಕಿ ಮಾನಂಪಾಡಿ ಕಿಲ್ಪಾಡಿ ರಸ್ತೆ ಪುನರಪಿ ಡಾಂಬರೀಕರಣ 19.60 ಲಕ್ಷ,ಉಳ್ಳಾಲ ನಗರ ಪಂಚಾಯತ್ ಕೋಟೆಪುರ ಅಳೆವೆ ಬಾಗಿಲು ಮೀನುಗಾರಿಕಾ ರಸ್ತೆ ಕಾಂಕ್ರೀಟೀಕರಣ 19.80 ಲಕ್ಷ, ಹಳೆಯಂಗಡಿ ವ್ಯಾಪ್ತಿಯ ಕೂಳುವೈಲು ರಸ್ತೆ ಕಾಂಕ್ರೀಟೀಕರಣ 10.00ಲಕ್ಷ ರೂ.ಗಳ ಅನುದಾನ ಸೇರಿ ಒಟ್ಟು 201.70ಲಕ್ಷ ಹೆಚ್ಚುವರಿ ಅನುದಾನವನ್ನು ಒದಗಿಸಲಾಗಿದೆ.
Click this button or press Ctrl+G to toggle between Kannada and English