ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

10:57 PM, Tuesday, October 27th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Rudreshwara

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ನ ಪ್ರಾಯೋಜಕತ್ವದ 2015ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರ ‘ಅವಳ ಕವಿತೆ’ ಎಂಬ ಕವನಸಂಕಲನ ಹಸ್ತಪ್ರತಿ ಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಡಾ. ನಾ.ಮೊಗಸಾಲೆ ಘೋಷಿಸಿದ್ದಾರೆ.

ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರು ದಾವಣಗೆರೆ ಮೂಲದವರಾಗಿದ್ದು ಮೈಸೂರು ವಿ.ವಿಯಿಂದ ಸ್ನಾತಕೋತ್ತರ ಪದವಿ ಪಡೆದು ಅಂಚೆ ಇಲಾಖೆಯಲ್ಲಿ ದಕ್ಷ ಸೇವೆ ಸಲ್ಲಿಸಿದವರಾಗಿದ್ದು ಅದಕ್ಕಾಗಿ ಡಾಕ್ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಸ್ವಯಂನಿವೃತ್ತಿ ಪಡೆದ ಮೇಲೆ (2009) ಅವರು ಕಾವ್ಯ ಕೃಷಿಗೆ ತೊಡಗಿಸಿಕೊಂಡರು. ಅವರ ಮೊದಲ ಕವನ ಸಂಗ್ರಹ ‘ಪ್ರೀತಿ ಮತ್ತು ನೀರು’ಗೆ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್ ಪ್ರಶಸ್ತಿ, ಎರಡನೇ ಕವನ ಸಂಗ್ರಹ ‘ಆ ತೀರದ ಮೋಹ’ಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ ಮತ್ತು ಶೂದ್ರ ಪತ್ರಿಕೆ ನೀಡುವ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿಗಳು ಲಭಿಸಿದೆ.

ಪ್ರಸಕ್ತ ಸಾಲಿನ ಈ ಪ್ರಶಸ್ತಿಗಾಗಿ ಸ್ಪರ್ಧೆ ಯಲ್ಲಿ ಒಟ್ಟು 111 ಹಸ್ತಪ್ರತಿಗಳು ಬಂದಿದ್ದು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ.ವಿಜಯಾ ಸುಬ್ಬರಾಜ್, ಶ್ರೀ ಸುಬ್ರಾಯ ಚೊಕ್ಕಾಡಿಯವರಿದ್ದ ತೀರ್ಪುಗಾರರ ಮಂಡಳಿ ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ. 1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು 2016ರ ಜನವರಿ 26ರಂದು ಕಾಂತಾವರದ ‘ಕನ್ನಡಭವನ’ದಲ್ಲಿ ನಡೆಯಲಿದೆ. ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English