ಮುಂಬೈ: ಟೆಕ್ಕಿ ಎಸ್ತರ್ ಅನೂಹ್ಯಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಚಂದ್ರಬಾನ್ ಸನಾಪ್ ಗೆ ಮುಂಬೈ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿ, ಇದು ಅತ್ಯಪರೂಪ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲುಶಿಕ್ಷೆಯೇ ಸೂಕ್ತವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
2014ರ ಜನವರಿ 5ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಅನೂಹ್ಯಾ ಮುಂಬೈಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದ ಬಳಿ ಅನೂಹ್ಯಳಿಗೆ ತಾನು ತನ್ನ ಬೈಕ್ ನಲ್ಲಿ ಲಿಫ್ಟ್ ಕೊಡುವುದಾಗಿ ತಿಳಿಸಿದ್ದ.
ಸನಾಪ್ ಮಾತನ್ನು ನಂಬಿ ಬೈಕ್ ನಲ್ಲಿ ತೆರಳಿದ್ದ ಅನೂಹ್ಯಾಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆಗೈದಿದ್ದ. ಅಲ್ಲದೇ ಆಕೆಯ ಲ್ಯಾಪ್ ಟ್ಯಾಪ್ ಸೇರಿದಂತೆ ಲಗೇಜ್ ನ್ನೂ ಕದ್ದುಕೊಂಡು ಹೋಗಿದ್ದ. ಜನವರಿ 17ರಂದು ಕಾಂಜುರ್ ಮಾರ್ಗ್ ಸಮೀಪ ಟೆಕ್ಕಿಯ ಶವವನ್ನು ಸುಟ್ಟು, ಹೂತಿರುವುದು ಪತ್ತೆಯಾಗಿತ್ತು. ಆಕೆಯ ಮೊಬೈಲ್ ಫೋನ್ ಗೆ ಕರೆ ಮಾಡುವ ಮೂಲಕ ಪೊಲೀಸರು ಸ್ಥಳವನ್ನು ಪತ್ತೆ ಹಚ್ಚಿದ್ದರು. ಶವ ದೊರೆತ ಸ್ಥಳದ ಸಮೀಪದಲ್ಲೇ ಅನೂಹ್ಯಾಳ ಮೊಬೈಲ್ ಪತ್ತೆಯಾಗಿತ್ತು.
Click this button or press Ctrl+G to toggle between Kannada and English