ಮಂಗಳೂರು ಸ್ಮಾರ್ಟ್ ಸಿಟಿ-ಸಾರ್ವಜನಿಕರ ಅಭಿಪ್ರಾಯ ಮುಖ್ಯ- ಗೋಪಾಲಕೃಷ್ಣ

8:25 PM, Friday, October 30th, 2015
Share
1 Star2 Stars3 Stars4 Stars5 Stars
(No Ratings Yet)
Loading...
N Gopalakrishna

ಮ೦ಗಳೂರು : ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಯಾಗಿ ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಈ ನಿಟ್ಟಿನಲ್ಲಿ ಮಂಗಳೂರಿನ ನಾಗರೀಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಜರೂರಾಗಿ ಕಳುಹಿಸಬೇಕಾದ ಅಗತ್ಯತೆ ಇದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಹೆಚ್.ಎನ್ ಗೋಪಾಲಕೃಷ್ಣ ಅವರು ಗುರುವಾರ ಈ ಸಂಬಂಧ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಮಂಗಳೂರು ನಗರದ ಎಲ್ಲಾ ಪದವಿಪೂರ್ವ/ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದರು.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ನಗರದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತಲಾ 20 ಪ್ರಶ್ನಾವಳಿಗಳ ನಮೂನೆಗಳನ್ನು ವಿತರಿಸಿ ಅವರು ತಮ್ಮಅಕ್ಕಪಕ್ಕದ ಮನೆಗಳ ನಿವಾಸಿಗಳಿಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಲು ಪ್ರಾಂಶುಪಾಲರಲ್ಲಿ ವಿನಂತಿಸಿದೆ. ಮಹಾನಗರ ಪಾಲಿಕೆಯಿಂದ 2 ಲಕ್ಷ ನಮೂನೆಗಳನ್ನು ಮುದ್ರಿಸಲಾಗಿದ್ದು ಈ ನಮೂನೆಗಳಲ್ಲಿ 30 ಕ್ಕೂ ಹೆಚ್ಚು ವಿವಿಧ ಸಲಹಾ ಮಾಹಿತಿಗಳಿದ್ದು ಸಾರ್ವಜನಿಕರು ಇವುಗಳಿಗೆ 1 ರಿಂದ 5 ರವರೆಗೆ ಆಧ್ಯತಾ ಅಂಕಗಳನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಸೂಚಿಸಬಹುದಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಮೂಲಕ ತಮಗೆ ನೀಡಲಾಗಿರುವ ನಮೂನೆಗಳಲ್ಲಿ ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸೋಮವಾರ ಮತ್ತು ಮಂಗಳವಾರಗಳಂದು ತಮ್ಮತಮ್ಮ ಕಾಲೇಜುಗಳಿಗೆ ಹಿಂತಿರುಗಿಸಬೇಕಾಗಿದೆ.

ಸಭೆಯಲ್ಲಿ ಉಪಾಯುಕ್ತ ಗೋಪಾಲದಾಸ್ ನಾಯಕ್ ಹಾಗೂ ನಗರದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English