ಮಂಗಳೂರು ಜೈಲಿನಲ್ಲಿ ಕುಖ್ಯಾತ ರೌಡಿ ಮಾಡೂರ್ ಇಸುಬು ಮತ್ತು ಇನ್ನೋರ್ವ ಖೈದಿಯ ಹತ್ಯೆ

12:22 PM, Monday, November 2nd, 2015
Share
1 Star2 Stars3 Stars4 Stars5 Stars
(5 rating, 8 votes)
Loading...
Maduru Isubu

ಮಂಗಳೂರು : ನಗರದ ಸಬ್‍ಜೈಲಿನಲ್ಲಿ ಖೈದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ವಿಚಾರಣಾಧೀನ ಖೈದಿಗಳ ಹತ್ಯೆಯಾಗಿದೆ. ಮಾಡೂರ್ ಇಸುಬು ಮತ್ತು ಗಣೇಶ್ ಶೆಟ್ಟಿ  ಸೋಮವಾರ ಬೆಳಗ್ಗೆ ಹತರಾದರು ಎಂದು ಜೈಲು ಮೂಲಗಳು ತಿಳಿಸಿವೆ.

ಮಾಡೂರ್ ಇಸುಬು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನಾಗಿದ್ದು, ಇತ್ತೀಚಿಗೆ ವಿದೇಶದಿಂದ ಕರೆತರಲಾಗಿತ್ತು. ಈತ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ, ಕ್ಯಾಂಡಲ್ ಸಂತು ಹತ್ಯೆ ಮೊದಲಾದ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ.

ಅಕಾಶಭವನ್ ಶರಣ್ ತಂಡದ ಖೈದಿಗಳ ತಂಡದಿಂದ ಈ ಕೃತ್ಯ ನಡೆದಿದೆ. ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರನಾಗಿರುವ ಆಕಾಶಭವನ್ ಶರಣ್ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಇನ್ನು, ಗಣೇಶ್ ಶೆಟ್ಟಿ ಈ ಗಲಾಟೆಯನ್ನು ಬಿಡಿಸಲು ಹೋಗಿದ್ದ. ಈ ಸಂದರ್ಭದಲ್ಲಿ ಆತನ ಕೊಲೆ ಕೂಡಾ ಆಗಿದೆ.

ಇನ್ನು, ಈ ಗಲಾಟೆಯಲ್ಲಿ ಆರು ಜನ ಕೈದಿಗಳಿಗೆ ಗಾಯಗಳಾಗಿದ್ದು, ಇವರನ್ನು ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತ ಮುಗುರನ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಮುರುಗನ್ ಜೈಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಇದು ಎರಡು ಗುಂಪುಗಳ ನಡುವಿನ ಗಲಾಟೆ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎಂದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಇನ್ನು, ಹಲ್ಲೆಗೆ ಬಳಸಿದ ಅಸ್ತ್ರಗಳನ್ನು ಜೈಲಿನ ಹೊರಗಿನಿಂದ ಎಸೆದಿರುವ ಸಾಧ್ಯತೆ ಇದೆ ಎಂದೂ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English