ಎಸ್‌ಬಿಐ ’ಗ್ರೇಟ್ ಮಲ್ನಾಡ್ ಚಾಲೆಂಜ್’ ಸೈಕಲ್‌ ಜಾಥಾ

12:49 AM, Tuesday, November 3rd, 2015
Share
1 Star2 Stars3 Stars4 Stars5 Stars
(5 rating, 6 votes)
Loading...
cycle Jatha

ಸುಬ್ರಹ್ಮಣ್ಯ: ಬೆಂಗಳೂರಿನ ಐಸೈಕಲ್ ಕಂಪೆನಿಯು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ 700 ಕಿ.ಮೀ. ದೂರದ 8 ದಿನಗಳ ’ಗ್ರೇಟ್ ಮಲ್ನಾಡ್ ಚಾಲೆಂಜ್’ ಪರಿಸರ ಸಂರಕ್ಷಣೆ ಮತ್ತು ಪರಿಸರ ಪ್ರವಾಸೋದ್ಯಮ ಜಾಗೃತಿಯ ದೃಷ್ಠಿಯಿಂದ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ಮಡಿಕೇರಿಯಿಂದ ಆರಂಭವಾದ ಜಾಥಾವು ರಾತ್ರಿ ಸುಬ್ರಹ್ಮಣ್ಯಕ್ಕೆ ಬಂದಾಗ ಇಲ್ಲಿನ ವಿಜಯ ಕಂಫಟ್ಸ್‌ನಲ್ಲಿ ಉದ್ಯಮಿ ರಾಧಾಕೃಷ್ಣ ಬೋಂಟಡ್ಕ ಸಾಹಸಿಗರನ್ನು ಸ್ವಾಗತಿಸಿದರು.ಭಾನುವಾರ ಕುಕ್ಕೆಯಿಂದ ಮುಂದುವರೆದ ಜಾಥಾಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರಿನ ಕೊಟ್ಟಾರ ಶಾಖೆಯ ಪ್ರಬಂಧಕ ಕೃಷ್ಣಪ್ರಸಾದ್‌ಸುಬ್ರಹ್ಮಣ್ಯ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ರಾಧಾಕೃಷ್ಣ ಬೋಂಟಡ್ಕ, ಜಾಥಾದ ಪ್ರಮುಖರಾದ ಮಂಜೇಶ್ ಚಂದ್ರಶೇಖರ್ ಮತ್ತು ಸಂತೋಷ್ ಉಪಸ್ಥಿತರಿದ್ದರು. ಜಾಥಾವು ಪಶ್ಚಿಮ ಘಟ್ಟದ ವಿವಿಧ ಪ್ರದೇಶಗಳತ್ತ ಪ್ರಯಾಣ ಮುಂದುವರೆಸಿತು. ಸತತ ಆರನೇ ವರ್ಷ ಪರಿಸರ ಸ್ನೇಹಿಯಾದ ಸೈಕಲ್ ಜಾಥಾ ನೆರವೇರುತ್ತಿದೆ.

ಸೈಕಲ್ ಜಾಥಾ ಅ.31ರ ಮುಂಜಾನೆ ಮಡಿಕೇರಿಯಿಂದ ಪ್ರಾರಂಭವಾಯಿತು. ಪರಿಸರ ಸ್ನೇಹಿ ಜೀವನ ಮತ್ತು ನೈರ್ಮಲ್ಯ ರಹಿತ ಸೈಕಲ್ ಪ್ರವಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ.ಮಡಿಕೇರಿ, ಕುಕ್ಕೆಸುಬ್ರಹ್ಮಣ್ಯ, ಬಿಸಿಲೆ, ಸಕಲೇಶಪುರ, ಬಾಂದರಾ, ಆಗುಂಬೆ, ಕೊಡಚಾದ್ರಿ ಕ್ರಮಿಸಿದ ಬಳಿಕ ಮರವಂತೆಯಲ್ಲಿ ಜಾಥಾ ಅಂತ್ಯವಾಗಲಿದೆ. ಈ ರೀತಿಯಾಗಿ ಜಾಥಾವು ಸುಮಾರು 700ಕಿ.ಮೀ ಕ್ರಮಿಸಲಿದೆ ಎಂದು ವ್ಯವಸ್ಥಾಪಕ ಮಂಜೇಶ್ ಚಂದ್ರಶೇಖರ್ ಈ ಸಂದರ್ಭದಲ್ಲಿ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English