ಮಂಗಳೂರು : ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಕೊಲ್ಯ ಇದರ ಅಶ್ರಯದಲ್ಲಿ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜ.26 ರಿಂದ ಜ.30ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ ವೇದಮೂರ್ತಿ ಜಗದೀಶ್ ಭಟ್ ಮರಕಡ ಇವರ ಪೌರೋಹಿತ್ಯದಲ್ಲಿ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗರ ಮಾರ್ಗದರ್ಶನದೊಂದಿಗೆ ನಡೆಯಲಿದೆ ಎಂದು ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿಯ ಧರ್ಮದರ್ಶಿ ಭಾಸ್ಕರ್ ಐತಾಳ್ ಹೇಳಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಪ್ರತಿ ಶನಿವಾರ ವಿಶೇಷ ನಾಗತಂಬಿಲ, ಪ್ರತೀ ತಿಂಗಳ ಆಶ್ಲೇಷಾ ನಕ್ಷತ್ರ ದಿನ ಆಶ್ಲೇಷಾ ಬಲಿಪೂಜೆ, ವರ್ಷಂಪ್ರತಿ ಸಹಸ್ರ ಸೀಯಾಳಾಭಿಷೇಕ, ನಾಗರಪಂಚಮಿ ಉತ್ಸವ, ನವಾರತ್ರಿಯ ಮೊದಲ ದಿನ ದುರ್ಗಾನಮಸ್ಕಾರ ಪೂಜೆ, ವರ್ಷಾವಧಿ ಉತ್ಸವದಲ್ಲಿ ನಾಗದರ್ಶನ ಅನ್ನದಾನಗಳು ಪ್ರಧಾನ ಆಚರಣೆಗಳಾಗಿವೆ. ಮಾತ್ರವಲ್ಲದದೆ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಈ ಹಿಂದೆ ವಿಶೇಷವಾಗಿ ನಾಗ ತನುತರ್ಪಣಾ ಸೇವೆ ಎರಡು ಬಾರಿ ಮಹಾ ಚಂಡಿಕಾಯಾಗ ನಡೆದಿತ್ತು. 2016, ಶ್ರೀ ಕ್ಷೇತ್ರ ಪುನರುತ್ಥಾನಗೊಂಡು 12 ವರ್ಷಗಳು ಪೂರ್ಣಗೊಂಡಿದೆ. ಅದೇ ಉದ್ದೇಶದಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಕೊಲ್ಯ ಸೌಭಾಗ್ಯ ಸಭಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದ್ದಾರೆ.
ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ ಮೂರ್ತಿ ಸುರತ್ಕಲ್ ಮಾಹಿತಿ ನೀಡಿ ಸುಮಾರು 12 ವರ್ಷಗಳ ಹಿಂದೆ ಶ್ರೀ ಕ್ಷೇತ್ರದ ಧರ್ಮದರ್ಶಿ ಭಾಸ್ಕರ್ ಐತಾಳರಿಂದ ಪುನರ್ ಸ್ಥಾಪನೆಗೊಂಡ ಕ್ಷೇತ್ರದಲ್ಲಿ ಜ್ಯೋತಿಷ್ಯ ಪ್ರಶ್ನೆ ಹಾಗೂ ನಾಗದರ್ಶನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕ್ಷೇತ್ರದ ಭಕ್ತಾಧಿಗಳು, ಪರಿಸರದ ಸಂಘ ಸಂಸ್ಥೆಗಳು ಮತ್ತು ಹಿತೈಷಿಗಳ ಸಹಯೋಗದಿಂದ ಜರಗಲಿದೆ. ಈ ಬಗ್ಗೆ ಊರ ಹಾಗೂ ಪರವೂರಿನ ಗಣ್ಯರನ್ನು ಒಳಗೊಂಡ ನಾಗಮಂಡಲೋತ್ಸವ ಸಮಿತಿಯನ್ನು ರಚನೆ ಮಾಡಿ, ವಿವಿಧ ಉಪಸಮಿತಿಗಳ ರಚನೆಯೊಂದಿಗೆ ವಲಯ ವ್ಯಾಪ್ತಿಯಲ್ಲಿ ಗ್ರಾಮ ಸಂಪರ್ಕ ಸಭೆಗಳನ್ನು ನಡೆಸಲಾಗಿದೆ.
2016ರ ಜ.26 ರಂದು ಅಪರಾಹ್ನ 3 ಗಂಟೆಗೆ ತೊಕ್ಕೊಟ್ಟು ಕಲ್ಲಾಪು ನಾಗ ಸಾನಿಧ್ಯದಿಂದ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುಗಲಿದ್ದು, ಜ.29 ರಂದು ಮಹಾಚಂಡಿಕಾಯಾಗ ನಡೆಯಲಿದೆ. ಜ.30 ರಂದು ರಾತ್ರಿ ಅಷ್ಟಪವಿತ್ರ ನಾಗಮಂಡಲೋತ್ಸವ ಜರಗಲಿದೆ. ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯಲಿದೆ.
ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಭಕ್ತಾಧಿಗಳು ಭಾಗವಹಿಸಲಿದ್ದು, ಸಿದ್ಧತೆಗಳು ನಡೆಯುತ್ತಿದೆ. ಶ್ರೀ ಕ್ಷೇತ್ರದ ಬಳಿ ಇರುವ ಚಿತ್ರನಟ ವಿನೋದ್ ಆಳ್ವ ಅವರಿಗೆ ಸೇರಿದ ನಾಗಮಂಡಲೋತ್ಸವ ಜರಗಲಿದೆ. ಈ ಅವಧಿಯಲ್ಲಿ ಪರಿಸರದ ಭಕ್ತಾಧಿಗಳು ಹಾಗೂ ಸಂಘ ಸಂಸ್ಥೆಗಳು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದೆ ಸಂಪೂರ್ಣವಾಗಿ ನಾಗಮಂಡಲೋತ್ಸವ ಯಶಸ್ಸಿಗೆ ಸಹಕರಿಸಬೇಕಿದೆ. ಭಕ್ತರು ದೇಣಿಗೆಯನ್ನು ನಗದು ರೂಪದಲ್ಲಿದ್ದಲ್ಲಿ ಮುಡಿಪು ಕರ್ಣಾಟಕ ಬ್ಯಾಂಕ್ , ಶಾಖೆಯಲ್ಲಿ ಅಷ್ಟಮಂಡಲೋತ್ಸವ ಸಮಿತಿ-ಕೊಲ್ಯ ಹೆಸರಿನಲ್ಲಿ ಉಳಿತಾಯ ಖಾತೆ ಸಂಖ್ಯೆ 4182500101614301, ಐಎಫ್‍ಎಸ್‍ಸಿ ಕೋಡ್ ಕೆ ಎ ಆರ್ ಬಿ 0000418 ಇದಕ್ಕೆ ಜಮಾ ಮಾಡಬಹುದು ಎಂದು ತಿಳಿಸಿದ್ದಾರೆ .
ಈ ಸಂದರ್ಭ ಮಾಜಿ ಶಾಸಕ ಜಯರಾಮ ಶೆಟ್ಟಿ,ಬಿಜೆಪಿ ಗ್ರಾಮ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಕೊಲ್ಯ ಅಭಿವೃದ್ಧಿ ಸಮಿತಿಯ ನಾಗಬ್ರಹ್ಮ ಸೇವಾ ಸಮಿತಿಯ ಅಧ್ಯಕ್ಷ ಸುಶಾಂತ್ ಭಂಡಾರಿ, ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ, ಮಾಧ್ಯಮ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಕಾರ್ಯಾಧ್ಯಕ್ಷರುಗಳಾದ ರವೀಂದ್ರನಾಥ ಪೂಂಜ, ಶೇಷಪ್ಪ ಸಾಲ್ಯಾನ್, ದಿನೇಶ್ ಮರೋಳಿ, ರಾಮಚಂದ್ರ ಪಿಲಾರ್, ಗಣೇಶ್ ಕೊಲ್ಯ, ರಮೇಶ್ ಉಳ್ಳಾಲ್, ಸೌಮ್ಯಾ ಭಾಸ್ಕರ್ ಐತಾಳ್, ಪ್ರತಿಭಾ ವಾಸೇಂದ್ರೆ, ರಾಜೀವಿ.ವಿ.ಕೆಂಪುಮಣ್ಣು, ಬಿಜೆಪಿ ಯುವಮೋರ್ಚಾದ ಜೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English