ಮಂಗಳೂರು : ಕೊಂಕಣಿ ಪ್ರಚಾರ ಸಂಚಾಲನವು ಮಕ್ಕಳ ದಿನಾಚರಣೆಯ ಸಲುವಾಗಿ ಆಚರಿಸಿದ ‘ಭುರ್ಗ್ಯಾಂಲಿ ಮಝಾ’ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. 09.11.15ರಂದು ಕೊಂಕಣಿ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಈ ಸಂಭ್ರಮವು 11 ಪ್ರಾಥಮಿಕ ಮತ್ತು 9 ಪ್ರೌಢಶಾಲೆಗಳ 403 ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ಜೋಕಾಲಿಯನ್ನು ಇಳಿಸುವ ಮುಖಾಂತರ ವಿಶಿಷ್ಟವಾಗಿ ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಮಾರ್ಕುಗಳ ಗುಲಾಮರನ್ನಾಗಿಸುವ ಬದಲು ಅವರ ಕೇಳುವ, ಒಳತೆಗೆದುಕೊಳ್ಳುವ ಹಾಗೂ ಅರಿದುಕೊಳ್ಳುವ ಶಕ್ತಿಯನ್ನು ಬೆಳೆಸುವಂತಹ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ನಂತರ ಕತೆ, ಭಾಷಣ, ನೃತ್ಯ, ಗಾಯಾನ, ಕಿರು ನಾಟಕ, ಕಾರ್ಯನಿರ್ವಹಣೆ ಹೀಗೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಸಮಾರೋಪ ಕಾರ್ಯದ ಮುಖ್ಯ ಅತಿಥಿಗಳಾಗಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕೊಂಕಣಿಯ ಭವಿಷ್ಯ. ಕೊಂಕಣಿ ಪ್ರೇಮವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಗಳಲ್ಲಿ ಕಲಿತು ಕೊಂಕಣಿಯನ್ನು ಬಲಯುತಗೊಳಿಸಲು ವಿದ್ಯಾರ್ಥಿ ಸಮೂಹಕ್ಕೆ ಅವರು ಕರೆ ಕೊಟ್ಟರು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಗುರಿಕಾರ ಎರಿಕ್ ಒಝೇರಿಯೊ ಉಪಸ್ಥಿತರಿದ್ದರು. ಕೊಂಕಣಿ ಪ್ರಚಾರ್ ಸಂಚಾಲನದ ಅಧ್ಯಕ್ಷ ಲಾರೆನ್ಸ್ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ಜೇಮ್ಸ್ ಡಿಸೋಜ ವಂದಿಸಿದರು. ಬ್ರಿಸ್ಟನ್ ಮಿರಾಂದಾ ಮತ್ತು ರೀನಾ ಡಿಸೋಜ ನಿರೂಪಿಸಿದರು.
ನಂತರ ಪ್ರತಿಭಾ ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶಾಲೆಗಳನ್ನು ಗೌರವಿಸಲಾಯಿತು.
ಫಲಿತಾಂಶ :
ಪ್ರೌಢಶಾಲಾ ವಿಭಾಗ
ಪ್ರಥಮ : ಮೇರಿವೆಲ್ ಪ್ರೌಢ್‌ಶಾಲೆ, ಕಿನ್ನಿಗೋಳಿ
ದ್ವಿತೀಯ : ಸೆಕ್ರೆಡ್ ಹಾರ್ಟ್ ಪ್ರೌಢ್‌ಶಾಲೆ, ಕುಲಶೇಕರ
ತೃತೀಯ : ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಬಿಜೈ
ಹಿರಿಯ ಪ್ರಾಥಮಿಕ ವಿಭಾಗ
ಪ್ರಥಮ : ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಬಿಜಯ್
ದ್ವಿತೀಯ : ಸಾಂ. ಲುವಿಸ್ ಗೊನ್ಜಾಗಾ, ಕೊಡಿಯಾಲ್‌ಬೈಲ್
ತೃತೀಯ : ಸೈಂಟ್ ಜೊಸೆಫ್ ಕನ್ನಡ ಮಾಧ್ಯಮ್, ಕುಲ್ಶೇಕರ್
Click this button or press Ctrl+G to toggle between Kannada and English